ಆಲಮಟ್ಟಿಜಂಗಮರ ಕಥೆಯಂಥಾದ ಕಾಂಗ್ರೆಸ್‌, ಜೆಡಿಎಸ್‌ ಕನಸು: ಸಚಿವ ಗೋವಿಂದ ಕಾರಜೋಳ

By Kannadaprabha NewsFirst Published Mar 12, 2023, 11:19 AM IST
Highlights

ಬೆಂಗಳೂರು- ಮೈಸೂರು ಹೆದ್ದಾರಿ ತಾವು ಮಾಡಿದ್ದೇವೆ ಎನ್ನುವ ಕಾಂಗ್ರೆಸ್‌, ಜೆಡಿಎಸ್‌ ಹೇಳಿಕೆ ಆಲಮಟ್ಟಿ ಜಂಗಮರ ಕನಸಿನ ಕಥೆಯಾಗಿದೆ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಲೇವಡಿ ಮಾಡಿದರು. 

ಸಿಂದಗಿ (ಮಾ.12): ಬೆಂಗಳೂರು- ಮೈಸೂರು ಹೆದ್ದಾರಿ ತಾವು ಮಾಡಿದ್ದೇವೆ ಎನ್ನುವ ಕಾಂಗ್ರೆಸ್‌, ಜೆಡಿಎಸ್‌ ಹೇಳಿಕೆ ಆಲಮಟ್ಟಿ ಜಂಗಮರ ಕನಸಿನ ಕಥೆಯಾಗಿದೆ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಲೇವಡಿ ಮಾಡಿದರು. ಶನಿವಾರ ಸಿಂದಗಿ ಪಟ್ಟಣದಲ್ಲಿ ವಿಜಯ ಸಂಕಲ್ಪಯಾತ್ರೆ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಆಲಮಟ್ಟಿಯಲ್ಲಿ 12ನೇ ಶತಮಾನದಲ್ಲಿ ಜಂಗರು ಇದ್ದರಂತೆ. ಇದು ಬಹಳ ಒಳ್ಳೆಯ ಜಾಗವಿದೆ. ಇಲ್ಲಿ ಡ್ಯಾಂ ಕಟ್ಟೋಣ ಎಂದು ಅವರು ಕನಸು ಕಾಣುತ್ತಿದ್ದರಂತೆ. ಆದರೆ, ಆಲಮಟ್ಟಿಡ್ಯಾಂ ಅನ್ನು ಜಂಗಮರಿಂದ ಕಟ್ಟಲು ಆಗಲಿಲ್ಲ. ಈಗ ಅವರ ಸ್ಥಿತಿಯೇ ಕಾಂಗ್ರೆಸ್‌, ಜೆಡಿಎಸ್‌ ಪಕ್ಷದವರದ್ದೂ ಆಗಿದೆ ಎಂದರು.

ಇದಲ್ಲದೆ 1984-85ರಲ್ಲಿ ವಿಜಯಪುರ ವಿಮಾನ ನಿಲ್ದಾಣಕ್ಕೆ ನಾನು ಪ್ಲಾನ್‌ ಮಾಡಿದ್ದೆ. ನಾನು ಮಂತ್ರಿಯಾದ ಬಳಿಕ 725 ಎಕರೆ ಭೂಮಿ ತಗೆದುಕೊಂಡು ವಿಮಾನ ನಿಲ್ದಾಣ ಮಾಡಲು ಮುಂದಾಗಿದ್ದೆವು. ಆದರೆ, ಕಾಂಗ್ರೆಸ್ಸಿನವರು ಅಧಿಕಾರದಲ್ಲಿ ಇದ್ದಾಗ ಅದನ್ನು ಮಾಡಲು ಬಿಡಲಿಲ್ಲ. ಮತ್ತೆ ನಾವು ಅಧಿಕಾರಕ್ಕೆ ಬಂದು ಈಗ ಅದನ್ನು ಮಾಡುತ್ತಿದ್ದೇವೆ. ಶೀಘ್ರದಲ್ಲಿಯೇ ವಿಜಯಪುರದಲ್ಲಿ ವಿಮಾನ ನಿಲ್ದಾಣ ಉದ್ಘಾಟನೆಯಾಗಲಿದೆ ಎಂದು ಕಾರಜೋಳ ಅವರು ಹೇಳಿದರು.

ರಾಜ್ಯದಲ್ಲಿ ಬಿಜೆಪಿಗೆ ಮತ್ತೊಮ್ಮೆ ಅಧಿಕಾರ ನಿಶ್ಚಿತ: ಜಗದೀಶ್‌ ಶೆಟ್ಟರ್‌ ಅಭಿಮತ

ಶೇ.99ರಷ್ಟುಹಾಲಿ ಶಾಸಕರಿಗೆ ಟಿಕೆಟ್‌ ಸಿಗುವ ಸಾಧ್ಯತೆ ಇದೆ. ಕಾಂಗ್ರೆಸ್ಸಿನವರು ಪ್ರತಿಪಕ್ಷದ ಸ್ಥಾನಕ್ಕೆ ಕೂರುವಷ್ಟುಸೀಟು ಬಂದರೆ ಖುಷಿಪಡಬೇಕು. ಡಿಕೆಶಿ, ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿದ್ದರಾಮಯ್ಯ ನಮ್ಮನ್ನ ಸಿಎಂ ಮಾಡುವಂತೆ ಪೈಪೋಟಿ ನಡೆಸಿದ್ದಾರೆ. ಸಿಎಂ ಸ್ಥಾನಕ್ಕೆ ಕಾಂಗ್ರೆಸ್ಸಿನಲ್ಲಿ ಕಚ್ಚಾಟ ನಡೆದಿದೆ ಎಂದರು. ಕುಮಟಳ್ಳಿಗೆ ಟಿಕೆಟ್‌ ನೀಡುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಪಕ್ಷ ಸಮರ್ಥ ಇದೆ. ಅದು ಸೂಕ್ತ ನಿರ್ಣಯ ಮಾಡುತ್ತದೆ ಎಂದು ಹೇಳಿದರು. ಮಾಜಿ ಸಿಎಂ ಜಗದೀಶ ಶೆಟ್ಟರ್‌ ಮಾತನಾಡಿ, ನಾಲ್ಕು ತಂಡಗಳಲ್ಲಿ ರಾಜ್ಯದ ನಾಲ್ಕು ದಿಕ್ಕುಗಳಿಂದ ವಿಜಯ ಸಂಕಲ್ಪ ಯಾತ್ರೆ ಆರಂಭಿಸಿದ್ದೇವೆ. ಯಾತ್ರೆಗೆ ಅತ್ಯುತ್ತಮ ಜನಸ್ಪಂದನೆ ಸಿಗುತ್ತಿದ್ದು, ಇದು ಬದಲಾವಣೆಯ ಹಾದಿಯಾಗಿದೆ ಎಂದರು ಹೇಳಿದರು.

ಕಾಂಗ್ರೆಸ್‌ನ ಪರಿಸ್ಥಿತಿ ದಿನದಿಂದ ದಿಕ್ಕಕ್ಕೇ ಹೇಳತಿರದಂತಾಗುತ್ತಿದೆ. ಮೇಘಾಲಯ, ತ್ರಿಪುರಾ, ನಾಗಾಲ್ಯಾಂಡ್‌ ರಾಜ್ಯಗಳಲ್ಲಿ ಕಾಂಗ್ರೆಸ್‌ ತನ್ನ ಅಸ್ತಿತ್ವವನ್ನು ಕಳೆದುಕೊಂಡಿದೆ. ಪ್ರಸ್ತುತ ಕಾಂಗ್ರೆಸ್‌ ಎಲ್ಲಿದೆ ಎಂದು ಹುಡುಕುವ ಪರಿಸ್ಥಿತಿ ಬಂದಿದೆ. ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಐಸಿಯೂನಿಂದ ಹೊರತರಲು ಡಿಕೆಶಿ, ಸಿದ್ರಾಮಯ್ಯ ಸೇರಿದಂತೆ ಅನೇಕ ನಾಯಕರು ಪ್ರಯತ್ನ ಪಡುತ್ತಿದ್ದಾರೆ ಎಂದು ಲೇವಡಿ ಮಾಡಿದರು. ಈ ವೇಳೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಗೀತಾ ವಿವೇಕಾನಂದ, ಅಪ್ಪು ಪಟ್ಟಣಶೆಟ್ಟಿ, ರಮೇಶ ಭೂಸನೂರ, ಜಿಲ್ಲಾಧ್ಯಕ್ಷ ಆರ್‌.ಎಸ್‌.ಪಾಟೀಲ್‌ ಕೂಚಬಾಳ, ರವಿ ನಾಯ್ಕೊಡಿ, ಸುನಂದಾ ಯಂಪುರೆ, ಈರಣ್ಣ ರಾವೂರ ಸೇರಿದಂತೆ ಅನೇಕ ನಾಯಕರು, ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

ಮಾಗಡಿಗೆ ಕುಮಾರಸ್ವಾಮಿ ಕೊಡುಗೆ ಏನು: ಸಂಸದ ಡಿ.ಕೆ.ಸುರೇಶ್‌ ವಾಗ್ದಾಳಿ

ದೇಶ ಅಭಿವೃದ್ಧಿಯತ್ತ: ಕೋವಿಡ್‌ ಸಮಯದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ರಾಜ್ಯದಲ್ಲಿ ಹಾಗೂ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಯಾವ ದೇಶವೂ ಮಾಡದ ಕಾರ್ಯವನ್ನು ಮಾಡಿ ಕೋವಿಡ್‌ ಹತೋಟಿ ತರಲು ಕಾರಣಿಕರ್ತರಾಗಿದ್ದಾರೆ. ದೇಶ ಅಭಿವೃದ್ಧಿ ಕಡೆಗೆ ತೆಗೆದುಕೊಂಡು ಹೊರಟಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು. ಅವರು ಪಟ್ಟಣದ ಚನ್ನಮ್ಮ ಸಮುದಾಯ ಭವನದ ಆವರಣದಲ್ಲಿ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದರು. ಎಸ್ಸಿ, ಎಸ್ಟಿಯವರಿಗೆ ಮೀಸಲಾತಿ, ದೀನದಲಿತರಿಗೆ 75 ಯುನಿಟ್‌ ವಿದ್ಯುತ್‌ ಉಚಿತವಾಗಿ ನಮ್ಮ ಸರ್ಕಾರ ನೀಡುತ್ತಿದೆ. ಈ ದೇಶದಲ್ಲಿ ಹಿಂದುಳಿದವರಗೆ, ಅಲ್ಪಸಂಖ್ಯಾತರಿಗೆ ದೊಡ್ಡ ರಾಜಕೀಯ ನಾಯಕರಿಗೆ ಕಾಂಗ್ರೆಸ್‌ ಪಕ್ಷ ಕೆಟ್ಟಅನ್ಯಾಯ ಮಾಡಿದೆ ಎಂದರು.

click me!