
ಶಿವಮೊಗ್ಗ (ಅ.30): ರಾಜ್ಯದಲ್ಲಿ ಇರೋದು ಕಾಂಗ್ರೆಸ್, ಸಿದ್ದರಾಮಯ್ಯ ಸರಕಾರವಲ್ಲ. ರಾಜ್ಯದಲ್ಲಿ ಇರೋದು ಮುಸ್ಲಿಂ ಸರಕಾರ, ಜಮೀರ್ ಅಹಮದ್ ಸರಕಾರ. ಮಖಯಮಂತ್ರಿಗೆ ಗೊತ್ತಿಲ್ಲದ ರೈತರಿಗೆ ನೋಟೀಸ್ ಕೊಟ್ಟ ವಕ್ಪ್ ಅಧಿಕಾರಿಗಳಿಗೆ ಸಚಿವ ಜಮೀರ್ ಅಹಮದ್‌ನೇ ಸಿಎಂ ಆಗಿದ್ದಾನೆ. ರಾಷ್ಟ್ರದ್ರೋಹಿ ಜಮೀರ್ ಅಹಮದ್ ಪಾಕಿಸ್ತಾನದಲ್ಲಿ ಹುಟ್ಟಬೇಕಿತ್ತು ಅಪ್ಪಿತಪ್ಪಿ ಹಿಂದುಸ್ತಾನದಲ್ಲಿ ಹುಟ್ಟಿದ್ದಾನೆ ಎಂದು ಮಾಜಿ ಸಚಿವ ಕೆಎಸ್. ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗದ ಡಿಸಿ ಕಚೇರಿ ಎದುರು ರಾಷ್ಟ್ರಭಕ್ತರ ಬಳಗದಿಂದ ವಕ್ಫ್ ಮಂಡಳಿಯಿಂದ ರೈತರಿಗೆ ನೋಟೀಸ್ ನೀಡಿದ ಘಟನೆಯನ್ನು ವಿರೋಧಿಸಿ ಬುಧವಾರ ನಡೆಸಲಾದ ಪ್ರತಿಭಟನೆಯ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಇರೋದು ಕಾಂಗ್ರೆಸ್, ಸಿದ್ದರಾಮಯ್ಯ ಸರಕಾರ ಅನ್ನಲ್ಲ. ರಾಜ್ಯದಲ್ಲಿ ಇರೋದು ಮುಸ್ಲಿಂ ಸರಕಾರ, ಜಮೀರ್ ಅಹಮದ್ ಸರಕಾರ. ಮಠ ಮಾನ್ಯಗಳ ಆಸ್ತಿ, ದೇವಸ್ಥಾನದ ಆಸ್ತಿ ವಕ್ಪ್ ಅಂತಾ ಬರೆಸುತ್ತಾರಲ್ಲ ಎಷ್ಟು ಸೊಕ್ಕು ಇರಬೇಕು. ನಿಮ್ಮ ನೋಟೀಸ್‌ಗೆ ಏನು ಬೆಲೆ ಇದೆ? 2018ರಲ್ಲಿ ಯರಕಲ್ ಸಿದ್ದರಾಮ ಮಠಕ್ಕೆ ವಕ್ಫ್ ಆಸ್ತಿ ಅಂತಾ ನೋಟೀಸ್ ಕೊಟ್ಟಿದ್ದಾರೆ. ವಕ್ಪ್ ಅಧಿಕಾರಿಗಳಿಗೆ ಜಮೀರ್ ಅಹಮದ್ ಸಿಎಂ ಆಗಿದ್ದಾನೆ ಎಂದು ಕಿಡಿಕಾರಿದರು.
ಇದನ್ನೂ ಓದಿ: ನಟ ದರ್ಶನ್ 6 ವಾರಗಳ ಜಾಮೀನಿಗೆ 7 ಷರತ್ತುಗಳನ್ನು ವಿಧಿಸಿ ಕೋರ್ಟ್; ಕಾನೂನಿಗೆ ವಂಚಿಸೋಕೆ ಆಗೊಲ್ಲ!
ರಾಜ್ಯದಲ್ಲಿ ಸಾಂಕೇತಿಕವಾಗಿ ಹಿಂದುಪರ ವ್ಯಕ್ತಿಗಳು ಹೋರಾಟ ಮಾಡಿದ್ದಾರೆ. ಮುಖ್ಯಮಂತ್ರಿಗಳಿಗೆ ಗೊತ್ತಿಲ್ಲದೇ ವಕ್ಫ್‌ನಿಂದ ರೈತರಿಗೆ ನೋಟೀಸ್ ಕೊಟ್ಟಿದ್ದಾರಾ? ಜಮೀರ್ ಅಹಮದ್ ಅವನು ಪಾಕಿಸ್ತಾನದಲ್ಲಿ ಇದ್ದಾನೋ, ಹಿಂದುಸ್ತಾನದಲ್ಲಿ ಇದ್ದಾನೋ? ಜಮೀರ್ ಅಹಮದ್ ಮಂತ್ರಿಯಾಗಲು ಅಯೋಗ್ಯ ಇದ್ದಾನೆ ಮೊದಲು ಅವನನ್ನು ಕಿತ್ತು ಬಿಸಾಕಿ. ಮಠ ಮಂದಿರ, ದೇವಸ್ಥಾನ, ಸಾಧು ಸಂತರ ಆಸ್ತಿ ವಾಪಸ್ ಕೊಡಿ. ಬೀರ ದೇವರು ಕುರುಬರ ದೇವರು ಅಲ್ವಾ? ದಲಿತರು, ಕುರುಬರು ನಿಮಗೆ ಓಟು ಹಾಕಿಲ್ವಾ? ರಾಷ್ಟ್ರ ದ್ರೋಹಿ ಜಮೀರ್ ಅಹಮದ್ ಪಾಕಿಸ್ತಾನದಲ್ಲಿ ಹುಟ್ಟಬೇಕಿತ್ತು ಅಪ್ಪಿತಪ್ಪಿ ಹಿಂದುಸ್ತಾನದಲ್ಲಿ ಹುಟ್ಟಿದ್ದಾನೆ ಎಂದು ಆಕ್ರೋಶ ಹೊರ ಹಾಕಿದರು.
ಸಿಎಂ ಸಿದ್ದರಾಮಯ್ಯನವರೇ ಬೀರ ದೇವರ ಗುಡಿಯನ್ನು ಕುರುಬರಿಗೆ ಉಳಿಸಿಕೊಡಿ, ಮುಸ್ಲಿಂರಿಗೆ ಕೊಡಬೇಡಿ. ನಿಮಗೆ ರೈತರ, ಬೀರ ದೇವರ ಶಾಪ ತಟ್ಟುತ್ತದೆ. ಶಾಪ ತಟ್ಟಬಾರದು ಅಂದರೆ ರೈತರ ಭೂಮಿ ಉಳಿಸಿಕೊಡಿ. ಚಾಮುಂಡೇಶ್ವರಿ, ಸವದತ್ತಿ ಯಲ್ಲಮ್ಮ, ಹಾಸನಾಂಬೆ ಆಶೀರ್ವಾದ ನಿಮಗೆ ಸಿಗಬೇಕು ಅಂದ್ರೆ ನೀವು ರೈತರ ಭೂಮಿ ಬಿಡಿಸಿಕೊಡಿ. ಇಲ್ಲದಿದ್ದರೆ ದೇವರ ಶಾಪ ತಟ್ಟುತ್ತದೆ, ಜೈಲಿಗೆ ಹೋಗಬೇಕಾಗುತ್ತದೆ. ಉಪ ಚುನಾವಣೆ ವಿಚಾರದ ಬಗ್ಗೆ ಮಾತನಾಡಿ, ರೈತರ ಆಸ್ತಿ ಬಿಟ್ಟು ಹೋಗಬಾರದು ಅಂದ್ರೆ ಕಾಂಗ್ರೆಸ್ ಸೋಲಿಸಿ, ಹಿಂದುಪರ ಇರುವ ವ್ಯಕ್ತಿಗಳಿಗೆ ಮತ ಹಾಕಿ ಎಂದು ಮನವಿ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.