ಅಚ್ಚೇ ದಿನ್ ಬೇಡ, ಹಳೇ ದಿನಗಳೇ ಸಾಕು ಸ್ವಾಮಿ: ಸಚಿವ ಜಮೀರ್‌ ಅಹ್ಮದ್‌ ಖಾನ್‌

By Kannadaprabha NewsFirst Published Apr 18, 2024, 10:06 AM IST
Highlights

ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಪೆಟ್ರೋಲ್ ಬೆಲೆ ₹53 ಇತ್ತು. ಈಗ ನೂರು ದಾಟಿದೆ. ಸಿಲಿಂಡ‌ರ್ ಬೆಲೆ ಗಗನಕ್ಕೇರಿದೆ. ವಿಧಾನಸಭಾ ಚುನಾವಣೆಯಲ್ಲಿ ಘೋಷಿಸಿದಂತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಒಂದೇ ತಿಂಗಳಲ್ಲಿ ಗ್ಯಾರಂಟಿಗಳನ್ನು ಜಾರಿಗೊಳಿಸಿತು: ಸಚಿವ ಜಮೀರ್‌ ಅಹ್ಮದ್ ಖಾನ್

ಹೊಸಪೇಟೆ(ಏ.18):  2014ರಲ್ಲಿ ನಂಬಿ ಮತ ಕೊಟ್ಟ ಜನರಿಗೆ ಅಚ್ಛೇ ದಿನ್ ಬಂತಾ? ಪ್ರಧಾನಿಗೆ ಮಾತ್ರ ಒಳ್ಳೆ ದಿನ ಬಂದಿದೆ. ನಮಗೆ ನಿಮ್ಮ ಒಳ್ಳೆಯ ದಿನಗಳು ಬೇಡ ಸ್ವಾಮಿ, ನಮ್ಮ ಹಳೇ ದಿನಗಳನ್ನೇ ಕೊಡಿ ಎಂದು ಸಚಿವ ಜಮೀರ್‌ ಅಹ್ಮದ್‌ ಖಾನ್‌  ಹೇಳಿದರು. 

ಬುಧವಾರ ವಿಜಯನಗರ ಸಭೆಯಲ್ಲಿ ಮಾತನಾಡಿ, ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಪೆಟ್ರೋಲ್ ಬೆಲೆ ₹53 ಇತ್ತು. ಈಗ ನೂರು ದಾಟಿದೆ. ಸಿಲಿಂಡ‌ರ್ ಬೆಲೆ ಗಗನಕ್ಕೇರಿದೆ. ವಿಧಾನಸಭಾ ಚುನಾವಣೆಯಲ್ಲಿ ಘೋಷಿಸಿದಂತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಒಂದೇ ತಿಂಗಳಲ್ಲಿ ಗ್ಯಾರಂಟಿಗಳನ್ನು ಜಾರಿಗೊಳಿಸಿತು ಎಂದು ತಿಳಿಸಿದರು. 

ರುಚಿಯಿದ್ದ 2 ವಡೆ ತಿಂದಿದ್ರಿಂದ ಗ್ಯಾಸ್ಟ್ರಿಕ್ ಸಮಸ್ಯೆಯಾಗಿ ಎದೆನೋವು ಕಾಣಿಸಿಕೊಂಡಿತು: ಸಚಿವ ಜಮೀರ್ ಅಹ್ಮದ್

ಈಗ ರಾಹುಲ್ ಗಾಂಧಿ ನೇತೃತ್ವದಲ್ಲಿ ಇನ್ನೂ 25 ಗ್ಯಾರಂಟಿಗಳನ್ನು ಕಾಂಗ್ರೆಸ್ ಘೋಷಿಸಿದೆ. ಬಡ ಮಹಿಳೆಗೆ ವರ್ಷಕ್ಕೆ 1 ಲಕ್ಷ ರು., ರೈತರ ಸಾಲಮನ್ನಾ ಮಾಡುವ ಭರವಸೆ ನೀಡಲಾಗಿದೆ ಎಂದು ಹೇಳಿದರು.

click me!