ವಕ್ಫ್ ಭೂಮಿ ವಿಚಾರವಾಗಿ ಬಿಜೆಪಿ ಅಭಿಯಾನ ನಡೆಸುವುದಾಗಿ ಹೇಳುತ್ತಿದೆ. ಅದು ಅವರ ಮೂರ್ಖತನ. ರೈತರ ಪಹಣಿಗಳಲ್ಲಿ ವಕ್ಫ್ ಎಂದು ನಮೂದಾಗಿರುವುದೇ ಬಿಜೆಪಿ ಕಾಲದಲ್ಲಿ. ನಮ್ಮವರು ತಡವಾಗಿ ಗಮನಿಸಿದ್ದಾರೆ. ಈ ಬಗ್ಗೆ ನಮ್ಮ ಬಳಿ ಎಲ್ಲ ದಾಖಲೆಗಳಿವೆ. ಚುನಾವಣೆ ಕಾರಣದಿಂದಾಗಿ ಅದನ್ನು ಬಹಿರಂಗಪಡಿಸಿಲ್ಲ. ಈಗ ಬಿಜೆಪಿ ಅಭಿಯಾನದ ಹೆಸರಿನಲ್ಲಿ ಕೋಮು ಗಲಭೆ ಎಬ್ಬಿಸುವ ಪ್ರಯತ್ನ ನಡೆಸಿದೆ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಬೆಂಗಳೂರು(ನ.17): ವಕ್ಫ್ ವಿಚಾರ ಮುಂದಿಟ್ಟುಕೊಂಡು ರಾಜ್ಯದಲ್ಲಿ ಕೋಮು ಗಲಭೆ ಸೃಷ್ಟಿಸಲು ಬಿಜೆಪಿ ಪ್ರಯತ್ನ ನಡೆಸುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಕ್ಫ್ ಭೂಮಿ ವಿಚಾರವಾಗಿ ಬಿಜೆಪಿ ಅಭಿಯಾನ ನಡೆಸುವುದಾಗಿ ಹೇಳುತ್ತಿದೆ. ಅದು ಅವರ ಮೂರ್ಖತನ. ರೈತರ ಪಹಣಿಗಳಲ್ಲಿ ವಕ್ಫ್ ಎಂದು ನಮೂದಾಗಿರುವುದೇ ಬಿಜೆಪಿ ಕಾಲದಲ್ಲಿ. ನಮ್ಮವರು ತಡವಾಗಿ ಗಮನಿಸಿದ್ದಾರೆ. ಈ ಬಗ್ಗೆ ನಮ್ಮ ಬಳಿ ಎಲ್ಲ ದಾಖಲೆಗಳಿವೆ. ಚುನಾವಣೆ ಕಾರಣದಿಂದಾಗಿ ಅದನ್ನು ಬಹಿರಂಗಪಡಿಸಿಲ್ಲ. ಈಗ ಬಿಜೆಪಿ ಅಭಿಯಾನದ ಹೆಸರಿನಲ್ಲಿ ಕೋಮು ಗಲಭೆ ಎಬ್ಬಿಸುವ ಪ್ರಯತ್ನ ನಡೆಸಿದೆ ಎಂದರು.
undefined
ಕಾಂಗ್ರೆಸ್ ಎಂಎಲ್‌ಸಿ ಬಯ್ಯಾಪುರ, ಬಿಜೆಪಿ ಶಾಸಕ ಮಾನಪ್ಪ ವಜ್ಜಲ್ ಪುತ್ರನ ಆಸ್ತಿಯೂ ವಕ್ಫ್!
ಹಿಂದೆ ಖರೀದಿಸಿದ್ದವರು ಕುರಿಗಳೇ?:
ಶಾಸಕರ ಖರೀದಿ ಮಾಡಲು ಶಾಸಕರು ಕುರಿಗಳೇ ಎಂದು ಬಿಜೆಪಿ ಅವರು ಪ್ರಶ್ನಿಸುತ್ತಿದ್ದಾರೆ. ಈ ಹಿಂದೆ ದನ, ಕುರಿಗಳನ್ನು ಖರೀದಿ ಮಾಡಿದಂತೆ ಶಾಸಕರನ್ನು ಖರೀದಿ ಮಾಡಿದ್ದರು. ಹಾಗಾದರೆ ಅವರೆಲ್ಲ ಕುರಿಗಳಾಗಿದ್ದರೇ ಎಂದು ಪ್ರಶ್ನಿಸಿದ ಅವರು, ಯೋಗೇಶ್ವರ್ ಅವರು ಶ್ರೀನಿವಾಸಗೌಡ ಮನೆಗೆ ಹೋಗಿ ಹಣ ಇಟ್ಟು ಬಂದಿದ್ದೆ ಎಂದು ಸದನದಲ್ಲೇ ಹೇಳಿದ್ದರಲ್ಲ ಎಂದರು.
ಕಲಘಟಗಿಯಲ್ಲಿ ವಕ್ಫ್ ವಿರುದ್ಡ ಪ್ರತಿಭಟನೆ:'ಆಸ್ತಿ ನಿಮ್ಮಪ್ಪಂದ' ಎಂದ ಅನ್ಯಕೋಮಿನ ವ್ಯಕ್ತಿಗೆ ಬಿತ್ತು ಧರ್ಮದೇಟು!
ಬಿಜೆಪಿ ಕಾಲದಲ್ಲೂ ವಕ್ಫ್ ನೋಟಿಸ್ ನೀಡಲಾಗಿದೆ: ಸಂತೋಷ್ ಲಾಡ್
ಧಾರವಾಡ: ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ವಕ್ಫ್ ವಿಚಾರ ವಾಗಿ ನೋಟಿಸ್ ನೀಡಲಾಗಿದೆ. ಅದನ್ನು ಮರೆಮಾಚಿ ಇದೀಗ ವಕ್ಫ್ ವಿರುದ್ಧ ಹೋರಾಟ ನಡೆಸಲು ಬಿಜೆಪಿ ಮುಂದಾಗಿದೆ ಎಂದು ಸಚಿವ ಸಂತೋಷ ಲಾಡ್ ಕಿಡಿಕಾರಿದ್ದಾರೆ.
ವಕ್ಫ್ ವಿರುದ್ಧ ಹೋರಾಟ ನಡೆಸಲು ಬಿಜೆಪಿ ತಂಡಗಳನ್ನು ರಚಿಸಿರುವ ಕುರಿತು ಸುದ್ದಿಗಾರರ ಜತೆ ಮಾತನಾಡಿ, ರೈತರ ಪಹಣಿಯಲ್ಲಿ ವಕ್ಫ್ ಹೆಸರು ನಮೂದಾಗಿರುವ ಕುರಿತು ಈಗಾಗಲೇ ಸಿಎಂ ಸ್ಪಷ್ಟನೆ ನೀಡಿದ್ದಾರೆ. ಹೀಗಿದ್ದರೂ ಬಿಜೆಪಿಯವರು ಏಕೆ ಹೋರಾಟ ಮಾಡುತ್ತಿದ್ದಾರೆ? ಎಂದರು.