ವಿಜಯೇಂದ್ರ ಹೇಳಿದಾಕ್ಷಣ ಸಿದ್ದರಾಮಯ್ಯ ರಾಜೀನಾಮೆ ಕೊಡ್ಬೇಕಾ?: ಸಚಿವ ಜಮೀರ್ ಅಹಮ್ಮದ್

By Kannadaprabha NewsFirst Published Oct 8, 2024, 7:27 AM IST
Highlights

ನೂರಕ್ಕೆ ನೂರು ಸಿದ್ದರಾಮಯ್ಯ ಅವರು ಸಿಎಂ ಆಗಿ ಮುಂದುವರಿಯುತ್ತಾರೆ. ನಮ್ಮ ಪಕ್ಷದ ಆಂತರಿಕ ವಿಷಯಗಳ ಬಗ್ಗೆ ಮಾತಾಡೋಕೆ ಹೂ ಈಸ್ ವಿಜಯೇಂದ್ರ ಎಂದು ಸಚಿವ ಜಮೀರ್ ಅಹ್ಮದ್ ಪ್ರಶ್ನಿಸಿದ್ದಾರೆ?. ನಮ್ಮ ಹೈಕಮಾಂಡ್ ಹೇಳಬೇಕು, ಇವರು ಯಾರು ಹೇಳೋಕೆ?. ರಾಜೀನಾಮೆ ಇಲ್ಲ ಎಂದು ವೇಣುಗೋಪಾಲ, ಸುರ್ಜೆವಾಲಾ ಬೆಂಗಳೂರಲ್ಲಿ ಪ್ರೆಸ್‌ಮೀಟ್ ಮಾಡಿ ಹೇಳಿದ್ದಾರೆ. ಹೈಕಮಾಂಡ್ ನಿಮ್ಮ ಜೊತೆ ಇದೆ ಎಂದು ಬೆಂಗಳೂರಿಗೆ ಬಂದು ಹೇಳಿದ್ದಾರೆ ಎಂದರು.
 
ವಿಜಯಪುರ(ಅ.08):  ಬಿಜೆಪಿ ಅಧ್ಯಕ್ಷರು ಹೇಳಿದಾಗ ರಾಜೀನಾಮೆ ನೀಡೋಕೆ ಆಗತ್ತಾ? ವಿಜಯೇಂದ್ರ ಏನು ಕಾಂಗ್ರೆಸ್ ಹೈಕಮಾಂಡಾ? ಎಂದು ವಸತಿ-ವಕ್ಫ್-ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಜಮೀರ್ ಅಹಮ್ಮದ್ ಖಾನ್ ಪ್ರಶ್ನಿಸಿದರು.

ದಸರಾ ಬಳಿಕ ಸಿದ್ದರಾಮಯ್ಯ ರಾಜೀನಾಮೆ ನೀಡಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆ ಕುರಿತಾಗಿ ನಗರದಲ್ಲಿ ಸೋಮವಾರ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಪಕ್ಷದ ಹೈಕಮಾಂಡ್ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ. ನಮ್ಮ ಹೈಕಮಾಂಡ್ ಸಿದ್ದರಾಮಯ್ಯ ಜೊತೆಗೆ ಇದ್ದೇವೆ ಎಂದು ಹೇಳಿದೆ. ರಾಜೀನಾಮೆ ಅಗತ್ಯ ಇಲ್ಲ ಎಂದು ಹೇಳಿದ್ದಾಗಿ ಸ್ಪಷ್ಟಪಡಿಸಿದರು.

Latest Videos

ಬಿಜೆಪಿ ಚಾರ್‌ ಸೌ ಪಾರ್‌ ಅಂತಾ ಇತ್ತು, ಅಲ್ಲಾ ಮಿಯಾ ಅವರನ್ನ 240ಕ್ಕೆ ತಂದು ನಿಲ್ಸಿದ್ದಾನೆ: ಜಮೀರ್‌ ಅಹ್ಮದ್‌

ಪಕ್ಷದ ವಿಚಾರ ಹೇಳೋಕೆ ವಿಜಯೇಂದ್ರ ಯಾರು?:

ನೂರಕ್ಕೆ ನೂರು ಸಿದ್ದರಾಮಯ್ಯ ಅವರು ಸಿಎಂ ಆಗಿ ಮುಂದುವರಿಯುತ್ತಾರೆ. ನಮ್ಮ ಪಕ್ಷದ ಆಂತರಿಕ ವಿಷಯಗಳ ಬಗ್ಗೆ ಮಾತಾಡೋಕೆ ಹೂ ಈಸ್ ವಿಜಯೇಂದ್ರ ಎಂದು ಸಚಿವ ಜಮೀರ್ ಅಹ್ಮದ್ ಪ್ರಶ್ನಿಸಿದ್ದಾರೆ?. ನಮ್ಮ ಹೈಕಮಾಂಡ್ ಹೇಳಬೇಕು, ಇವರು ಯಾರು ಹೇಳೋಕೆ?. ರಾಜೀನಾಮೆ ಇಲ್ಲ ಎಂದು ವೇಣುಗೋಪಾಲ, ಸುರ್ಜೆವಾಲಾ ಬೆಂಗಳೂರಲ್ಲಿ ಪ್ರೆಸ್‌ಮೀಟ್ ಮಾಡಿ ಹೇಳಿದ್ದಾರೆ. ಹೈಕಮಾಂಡ್ ನಿಮ್ಮ ಜೊತೆ ಇದೆ ಎಂದು ಬೆಂಗಳೂರಿಗೆ ಬಂದು ಹೇಳಿದ್ದಾರೆ ಎಂದರು.

ಜೀವನ ಇರೋವರೆಗೂ ದಲಿತ ಸಿಎಂಗಾಗಿ ಹೋರಾಟ: ಸಂಸದ ರಮೇಶ ಜಿಗಜಿಣಗಿ

ಕಾರ್ಯಕ್ರಮವೊಂದರಲ್ಲಿ ಸತೀಶ ಜಾರಕಿಹೊಳಿ ಸಿಎಂ ಘೋಷಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಜನ ಕೂಗ್ತಾರೆ. ಅಭಿಮಾನಿಗಳು ಕೂಗಿದ ತಕ್ಷಣ ಸಿಎಂ ಆಗಿ ಬಿಡ್ತಾರಾ? ನನ್ನ ಅಭಿಮಾನಿಗಳು ಕೂಗುತ್ತಾರೆ. ನಾನು ಸಿಎಂ ಆಗುತ್ತೇನಾ ಎಂದು ವಿಜಯೇಂದ್ರ ಹೇಳಿಕೆಗೆ ತಿರುಗೇಟು ನೀಡಿದರು.

ವಿಜಯೇಂದ್ರ ಸತೀಶ ಜಾರಕಿಹೊಳಿ ಭೇಟಿ ವಿಚಾರದ ಕುರಿತು ಮಾತನಾಡಿ, ನನಗೆ ಈ ಬಗ್ಗೆ ಮಾಹಿತಿ ಇಲ್ಲ. ನೀವ್ ಹೇಳುತ್ತಿದ್ದೀರಿ ನಾನು ಕೇಳುತ್ತಿದ್ದೇನೆ. ಬೇಕಾದರೆ ಮಾಹಿತಿ ತೆಗೆದುಕೊಂಡು ಹೇಳುತ್ತೇನೆ ಎಂದು ಹೇಳಿದರು.

click me!