Yathindra Siddaramaiah: ಕೋರ್ಟ್ ಷರತ್ತು ಮೀರಿ ನಾಗೇಂದ್ರ ದಿಲ್ಲಿ ಭೇಟಿ: 'ತಪ್ಪು' ಯತೀಂದ್ರ ಹೇಳಿಕೆ ರಾಜಕೀಯ ಸಂಚಲನ!

Kannadaprabha News   | Kannada Prabha
Published : Aug 10, 2026, 05:39 AM IST
Minister Yathindra Siddaramaiah reacts on B Nagendra s visit to Delhi

ಸಾರಾಂಶ

ಸಚಿವ ನಾಗೇಂದ್ರ ಅವರು ಅನುಮತಿ ಇಲ್ಲದೆ ದೆಹಲಿಗೆ ಹೋಗಿರುವುದು ತಪ್ಪು ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ತಮ್ಮ ತಂದೆ ಸಿದ್ದರಾಮಯ್ಯನವರಿಗೆ ಸರ್ಕಾರದ ಬಗ್ಗೆ ಯಾವುದೇ ಅಸಮಾಧಾನವಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಸಂಪುಟದಲ್ಲಿ ಮಹಿಳೆಯರಿಗೆ ಸ್ಥಾನ ಸಿಗುವ ವಿಶ್ವಾಸ ವ್ಯಕ್ತಪಡಿಸಿದರು.

ವಿಜಯಪುರ (ಆ.10): ಸಚಿವ ನಾಗೇಂದ್ರ ಅವರು ಅನುಮತಿ‌ ಇಲ್ಲದೆ ದೆಹಲಿಗೆ ಹೋಗಿದ್ದರೆ ಅದು ತಪ್ಪು. ನನಗೆ ಅದರ ಬಗ್ಗೆ ಪೂರ್ಣ ಮಾಹಿತಿ ಇಲ್ಲ. ಇದರಿಂದ ಅವರ ಜಾಮೀನು ರದ್ದಾಗುತ್ತೆ ಅನ್ನೋದು ಗೊತ್ತಿಲ್ಲ. ಅದನ್ನು ಅವರ ವಕೀಲರು ನೋಡ್ತಾರೆ ಎಂದು ನಗರಾಭಿವೃದ್ಧಿ ಇಲಾಖೆ ಸಚಿವ ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ಡಿಕೆ ಶಿವಕುಮಾರ್‌ ಸರ್ಕಾರದ ಬಗ್ಗೆ ಸಿದ್ದರಾಮಯ್ಯ ಅಸಮಾಧಾನ ಹೊಂದಿದ್ದಾರೆ ಎಂಬ ಆರೋಪ‌ ವಿಚಾರವಾಗಿ ಸಚಿವ ಯತೀಂದ್ರ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ‘ನಮ್ಮ ತಂದೆಗೆ ಸರ್ಕಾರದ ‌ಬಗ್ಗೆ ಯಾವುದೇ ಅಸಮಾಧಾನವಿಲ್ಲ. ಹೊಸ ಸಚಿವರ ಪ್ರಮಾಣ ವಚನ ದಿನ ಅವರ ಹುಟ್ಟುಹಬ್ಬದ ಕಾರಣ ಹೋಗಿಲ್ಲ. ಸಿದ್ದರಾಮಯ್ಯ ಅವರು ಖಾತೆ ಹಂಚಿಕೆ ವಿಚಾರದಲ್ಲಿ ಹಸ್ತಕ್ಷೇಪ ಮಾಡಲ್ಲ ಎಂದಿದ್ದಾರೆ’ ಎಂದು ಸ್ಪಷ್ಟಪಡಿಸಿದರು.

ಗಾಯತ್ರಿ ಶಾಂತೇಗೌಡ ಅವರ ವಿಷಯದಲ್ಲಿನ ಗೊಂದಲದ್ದ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹೌದು, ಈ ವಿಚಾರದಲ್ಲಿ ನಮಗೆ ಗೊಂದಲವಾಗಿದೆ. ನಮ್ಮ ಸರ್ಕಾರದ ಸಂಪುಟದಲ್ಲಿ ಮಹಿಳೆಯರಿಗೆ ಸ್ಥಾನ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಚಿವ ನಾಗೇಂದ್ರ ಕೋರ್ಟ್ ಆದೇಶ ಉಲ್ಲಂಘನೆ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ,

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬಿಡದಿ ಟೌನ್‌ಶಿಪ್: ಡಿಕೆಶಿಗೆ ದುರ್ಯೋಧನನ ಹಠ, ಇದರಿಂದ್ಲೇ ನಾಶ: ಅಶೋಕ್‌ ವಾಗ್ದಾಳಿ
Jharkhand Protest: ದೆಹಲಿ ಪ್ರತಿಭಟನೆಗೆ ಕೇಂದ್ರದ ನಿರ್ಲಕ್ಷ್ಯ, ಜಾರ್ಖಂಡ್ ಸರ್ಕಾರದ ನಡೆಗೆ ಕಾಂಗ್ರೆಸ್ ಮೆಚ್ಚುಗೆ