ಬಿಎಸ್‌ವೈ, ಹೆಬ್ಬಾಳ್ಕರ್‌ ಭೇಟಿ: ಸಚಿವ ಸೋಮಣ್ಣ ಹೇಳಿದ್ದಿಷ್ಟು

By Kannadaprabha News  |  First Published Jul 16, 2022, 12:06 PM IST

75 ವರ್ಷದಲ್ಲಿರುವ ಸಿದ್ದರಾಮಯ್ಯ ಅವರು ಜನ್ಮದಿನೋತ್ಸವ ಆಚರಿಸಿಕೊಳ್ಳಲಿ. ಅವರಿಗೆ ಶುಭವಾಗಲಿ, ವಿರೊಧಿಸುವುದಿಲ್ಲ ಅವರಿಬ್ಬರ ಜನ್ಮದಿನೋತ್ಸವವನ್ನು ನೋಡುತ್ತಿರುತ್ತೇವೆ ಎಂದ ಸೋಮಣ್ಣ 


ರಾಯಚೂರು(ಜು.16):  ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರನ್ನು ಕಾಂಗ್ರೆಸ್‌ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ಭೇಟಿಯಾಗಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನುಭವಿ ರಾಜಕಾರಣಿಯಾದ ಬಿಎಸ್‌ವೈ ಪಕ್ಷಾತೀತ ನಾಯಕರಾಗಿದ್ದಾರೆ. ಅವರನ್ನು ಭೇಟಿಯಾಗಿರುವ ಹೆಬ್ಬಾಳ್ಕರ್‌ ಆಶೀರ್ವಾದ ಪಡೆದಿದ್ದಾರೆ. ಇದಕ್ಕೆ ಯಾವುದೇ ಬಣ್ಣ ಕಟ್ಟುವ ಅಗತ್ಯವಿಲ್ಲ ಎಂದರು.

ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ ಅವರ ಜನ್ಮದಿನೋತ್ಸವ ವಿಚಾರದ ಕುರಿತು ಮಾತನಾಡಿದ ಸೋಮಣ್ಣ, 75 ವರ್ಷದಲ್ಲಿರುವ ಸಿದ್ದರಾಮಯ್ಯ ಅವರು ಜನ್ಮದಿನೋತ್ಸವ ಆಚರಿಸಿಕೊಳ್ಳಲಿ. ಅವರಿಗೆ ಶುಭವಾಗಲಿ, ವಿರೊಧಿಸುವುದಿಲ್ಲ ಅವರಿಬ್ಬರ ಜನ್ಮದಿನೋತ್ಸವವನ್ನು ನೋಡುತ್ತಿರುತ್ತೇವೆ ಅಂತ ತಿಳಿಸಿದ್ದಾರೆ. 

Latest Videos

undefined

'ನನಗೆ 71, ವಿಜಯೇಂದ್ರನಿಗೆ 46 ವರ್ಷ, ಅವರೊಂದಿಗೆ ನನ್ನನ್ನು ಹೋಲಿಸಬೇಡಿ'

ಸಿದ್ದರಾಮಯ್ಯ ಹಿಂದೆಂದು ಜನ್ಮದಿನ ಆಚರಿಸಿಕೊಂಡಿಲ್ಲ ಇದೀಗ ದೊಡ್ಡ ಮಟ್ಟದಲ್ಲಿ ಜನ್ಮದಿನೋತ್ಸವ ಆಚರಿಸಿಕೊಳ್ಳುತ್ತಿದ್ದು, ಅಭಿಯಾನಿಯಾಗಿ ವಿರೋಧಿಸುವುದಿಲ್ಲ. ಇದರಿಂದ ಯಾರಿಗೆ ಲಾಭ ಯಾರಿಗೆ ನಷ್ಟಎನ್ನುವುದು ಮುಖ್ಯವಲ್ಲ, ಪರಿಸ್ಥಿತಿ ಅರ್ಥೈಸಿಕೊಂಡು ಹೆಜ್ಜೆ ಹಾಕುವ ಅಗತ್ಯವಿದೆ.

ಬಿಎಸ್ ವೈ ಭೇಟಿಯಾದ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್!

ಬೆಂಗಳೂರು: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಜು.13 ರಂದು ಭೇಟಿ ಮಾಡಿ ಮಾತುಕತೆ ನಡೆಸಿದ್ದು ಕುತೂಹಲ ಕಾರಣವಾಗಿತ್ತು. ನಮ್ಮ ಸಮಾಜದ ಹಿರಿಯ ಮುಖಂಡರು ಯಡಿಯೂರಪ್ಪನವರು. ಈ ಹಿನ್ನೆಲೆಯಲ್ಲಿ  ಸೌಹಾರ್ದಯುತವಾಗಿ ಯಡಿಯೂರಪ್ಪ ಭೇಟಿಗೆಯಾಗಿ ಅವರಿಂದ ಮಾರ್ಗದರ್ಶನವನ್ನ ಪಡೆದಿದ್ದೇನೆ  ಅಷ್ಟೇ ಇದರಲ್ಲಿ ಯಾವುದೇ ಕೂತಹಲವಿಲ್ಲ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟಪಿಸಿದ್ದಾರೆ. ಇಂದು ಬೆಳಗ್ಗೆ ಯಡಿಯೂರಪ್ಪನವರ ಕಾವೇರಿ ನಿವಾಸದಲ್ಲಿ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಯಡಿಯೂರಪ್ಪನವರನ್ನ ಭೇಟಿಯಾಗಿ ಸುಮಾರು 15 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದರು.

ಸಹಜವಾಗಿ ಕಾಂಗ್ರೆಸ್ ಶಾಸಕಿ ಬಿಜೆಪಿಯ ಹಿರಿಯ ಮುಖಂಡರನ್ನ ಭೇಟಿಯಾಗಿ ಚರ್ಚೆ ನಡೆಸಿದ್ದು ಕುತೂಹಲಕ್ಕೆ ಕಾರಣವಾಗಿತ್ತು. ಬಿಎಸ್ ವೈ ರನ್ನ ಭೇಟಿಯಾದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಯಡಿಯೂರಪ್ಪನವರನ್ನ ಭೇಟಿಯಾಗಿದ್ದು ಯಾವುದೇ ಕುತೂಹಲವೆನಿಲ್ಲ. ಬೆಂಗಳೂರಿಗೆ ಬಂದಾಗ ಯಡಿಯೂರಪ್ಪ ಅವರನ್ನು ಭೇಟಿಯಾಗುತ್ತೇನೆ, ಅವರು ಹಿರಿಯರು, ನಮ್ಮ ಸಮಾಜದ ಮುಖಂಡರು ಇವತ್ತು ಗುರುಪೂರ್ಣಿಮೆ ಬೇರೆ ಹಿರಿಯರ ಆಶೀರ್ವಾದ ಪಡೆಯೋಣ ಎಂದು ಬಂದೆ ಬೇರೆ ರೀತಿ ಏನೂ ಇಲ್ಲ.  ಇದೊಂದು ಸೌಹಾರ್ದತವಾದ ಭೇಟಿ ಕೆಲವೊಂದು ವಿಚಾರದ ಬಗ್ಗೆ ಅವರೊಂದಿಗೆ ಚರ್ಚಿಸಿ ಮಾರ್ಗದರ್ಶನ ಪಡೆದುಕೊಂಡಿದ್ದೇನೆ. 

ಸಮುದಾಯದ ಅಥವಾ ರಾಜಕೀಯದ ಬಗ್ಗೆ ಚರ್ಚೆ ನಾ ಎಂಬ ಪ್ರಶ್ನೆಗೆ, ಎರಡೂ ವಿಚಾರದ ಬಗ್ಗೆ ಚರ್ಚೆ ಮಾಡಿದ್ದೇನೆ. ಅವರು ನಮ್ಮ ಸಮುದಾಯದ ಮುಖಂಡರು ಅವರಿಗೆ ಗೌರವ ಕೊಟ್ಟಿಕೊಂಡು ಬಂದಿದ್ದೇನೆ, ರಾಜಕೀಯವಾಗಿ ನಮ್ಮ ಮತ್ತು ಯಡಿಯೂರಪ್ಪನವರ ವಿಚಾರಧಾರೆ ಬೇರೆ ಇರಬಹುದು. ಇದು ವೈಯಕ್ತಿಕವಾಗಿ ಬೇರೆ. ಇದರಲ್ಲಿ ಆಡಳಿತ ಮತ್ತು ವಿಪಕ್ಷ ಅಂತ ಬರೋದಿಲ್ಲ.ಕೆಲವೊಂದು ವಿಚಾರದಲ್ಲಿ ಯಡಿಯೂರಪ್ಪನವರ  ಮಾರ್ಗದರ್ಶನ ತಗೆದುಕೊಳ್ಳುತ್ತೇವೆ ಎಂದು ಭೇಟಿ ಬಗ್ಗೆ ಸಮರ್ಥಿಸಿಕೊಂಡಿದ್ದರು. 

ಮೈಸೂರು: ವಿಜಯೇಂದ್ರ ಪರ ನಿರಂತರ ಜೈಕಾರ, ಮುಜುಗರಕ್ಕೆ ಒಳಗಾದ ಸೋಮಣ್ಣ

ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ವಿಚಾರ

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲು ಕೊಡಬೇಕು ಎನ್ನುವ ಆಸಕ್ತಿ ಯಡಿಯೂರಪ್ಪ ಅವರಿಗಿತ್ತು ಆದರೆ ಕೆಲವು ತಾಂತ್ರಿಕ ಕಾರಣರಿಂದ ಕೊಡಲು ಆಗಲಿಲ್ಲ,ಆದರೂ ನಮಗೆ ಈ ಅವಧಿಯಲ್ಲಿ ಸಿಗುವ ಭರವಸೆ ಇದೆ ಬೊಮ್ಮಾಯಿ ಸಾಹೇಬರ ಮೇಲೆ ಭರವಸೆ ಇದೆ. ಎಲ್ಲಾ ಅಡೆತಡೆ ನಿವಾರಣೆ ಮಾಡಿ ಮೀಸಲು ಕೊಡಲಿದ್ದಾರೆ ಎನ್ನುವ ಭರವಸೆ ಇದೆ, ಬೇರೆ ಸಮುದಾಯಕ್ಕೆ ತೊಂದರೆಯಾಗದಂತೆ ಮೀಸಲಾತಿ ನೀಡಬೇಕು ಎಂದರು.

ಡಿಕೆಶಿ ಉತ್ಸವದ ವಿಚಾರ:

ಡಿಕೆಶಿ ಉತ್ಸವಕ್ಕೆ ಬೆಂಬಲಿಗರು ಪತ್ರ ಬರೆದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಲಕ್ಷ್ಮಿ ಹೆಬ್ಬಾಳ್ಕರ್, ಅದರ ಬಗ್ಗೆ ನನಗೆ ಗೊತ್ತಿಲ್ಲ ಸಿದ್ದರಾಮಯ್ಯ ಉತ್ಸವ ಮಾಡುತ್ತಿದ್ದೇವೆ.ಆ ಕಮಿಟಿಯಲ್ಲಿ ನಾನು ಇದ್ದೇನೆ ಇವತ್ತು ಸಭೆ ಇದೆ,ಅದರಲ್ಲಿ ಭಾಗವಹಿಸುತ್ತೇನೆ. 75  ವರ್ಷ ರಾಜಕಾರಣದಲ್ಲಿ ಸೇವೆ ಸಲ್ಲಿಸಿದ್ದಾರೆ, ಮನುಷ್ಯನ ಜೀವನದಲ್ಲಿ ಅದೊಂದು ಸಾರ್ಥಕತೆ ಅವರು ಉತ್ಸವ ಮಾಡಿ ಎಂದು ಅವರು ಎಲ್ಲಿಯೂ ಹೇಳಿಲ್ಲ ನಾವೆಲ್ಲ ಸೇರಿ ಮಾಡುತ್ತಿದ್ದೇವೆ..ಅವರಿಗೆ ಒಳ್ಳೆಯದು ಆಗಲಿ ಅನ್ನೋದು ನಮ್ಮೆಲ್ಲರ ಆಸೆ ಎಂದರು.

click me!