ಕಾಂಗ್ರೆಸ್‌ ಉಳಿಸಿಕೊಳ್ಳಲು ಸಿದ್ದರಾಮೋತ್ಸವ: ಸಚಿವ ಆಚಾರ್‌

By Kannadaprabha News  |  First Published Jul 16, 2022, 9:33 AM IST

ಮುಂಬರುವ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಇದನ್ನೆಲ್ಲಾ ಮಾಡುತ್ತಿದ್ದಾರೆ.


ಗದಗ(ಜು.16):  ಕಾಂಗ್ರೆಸ್‌ ಪಾದಯಾತ್ರೆ, ಸಿದ್ದರಾಮೋತ್ಸವ ಇವೆಲ್ಲಾ ಕಾಂಗ್ರೆಸ್‌ ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ಅಷ್ಟೇ ಹೊರತಾಗಿ ಬೇರೆ ಏನೂ ಇಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್‌ ಹೇಳಿದರು. ಅವರು ಶುಕ್ರವಾರ ಸಂಜೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಮುಂಬರುವ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಇದನ್ನೆಲ್ಲಾ ಮಾಡುತ್ತಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಅವರು ರಾಜ್ಯದ ಎಲ್ಲಾ ಕಾಂಗ್ರೆಸ್‌ ನಾಯಕರನ್ನು ಕರೆದುಕೊಂಡು ‘ಕಾಂಗ್ರೆಸ್‌ ನಡಿಗೆ ಕೃಷ್ಣೆಯ ಕಡೆಗೆ’ ಎಂದು ಹೇಳಿ ಪ್ರತಿ ವರ್ಷ 10 ಸಾವಿರ ಕೋಟಿ ನೀರಾವರಿಗೆ ಖರ್ಚು ಮಾಡುತ್ತೇವೆ, ಆಲಮಟ್ಟಿ ಎತ್ತರಿಸುತ್ತೇವೆ, 9 ಯೋಜನೆಗಳನ್ನು ಪೂರ್ಣಗೊಳಿಸುವುದಾಗಿ ಹೇಳಿದ್ದರು.

ಆದರೆ ಅಧಿಕಾರಕ್ಕೆ ಬಂದ ನಂತರ ಮಾಡಿದರಾ ಇಲ್ಲ, ಈಗಲೂ ಅಷ್ಟೇ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಕಾಂಗ್ರೆಸ್‌ ಮಾಡುತ್ತಿರುವ ಪ್ರಯತ್ನವಾಗಿದೆ ಇದು. ರಾಜ್ಯದ ಜನರಿಗೂ ಗೊತ್ತು, ಜನರೇ ಇವರಿಗೆ ತಕ್ಕ ಉತ್ತರ ಕೊಡುತ್ತಾರೆ. ಕಾಂಗ್ರೆಸ್‌ನವರಿಗೆ ಈಗ ಹೇಳಿಕೊಳ್ಳಲು ಏನು ಇಲ್ಲ ಎಂದರು.

Tap to resize

Latest Videos

undefined

IndiaGate: ಸಿದ್ದರಾಮೋತ್ಸವ, ಸಿದ್ದು ಜೊತೆ ಹಿರಿಯ ನಾಯಕರು, ಮುಲಾಜಿಗೆ ಬಿದ್ರಾ ಡಿಕೆಶಿ..?

ಸಿದ್ದರಾಮೋತ್ಸವ ಮಾಡುತ್ತಿರುವುದು ಕೂಡಾ ಸಿದ್ದರಾಮಯ್ಯ ಅವರಿಗಾಗಿ ಅಲ್ಲ, ಕಾಂಗ್ರೆಸ್‌ ಅಸ್ತಿತ್ವ ಉಳಿಸಿಕೊಳ್ಳುವ ಪ್ರಯತ್ನದ ಭಾಗವಿದೆ, ಕಾಂಗ್ರೆಸ್‌ ಈಗಾಗಲೇ ದೇಶಾದ್ಯಂತ ತುಂಡು ತುಂಡಾಗಿದೆ, ಜಮ್ಮು ಕಾಶ್ಮೀರವನ್ನು ಕಾಂಗ್ರೆಸ್‌ ಎಲ್ಲಿಯೋ ಇಟ್ಟಿದ್ದರೂ ಮೋದಿ ಅವರು ಅಧಿಕಾರಕ್ಕೆ ಬಂದ ನಂತರ ಅಲ್ಲಿಯೂ ಕೂಡಾ ಉತ್ತಮ ರೀತಿಯ ಆಡಳಿತ ನೀಡಿದ್ದಾರೆ. ಕಾಂಗ್ರೆಸ್‌ ಪಾದಯಾತ್ರೆಗೆ ಯಾವುದೇ ಅರ್ಥವಿಲ್ಲ, ಅವರು ತಮ್ಮ ಅಸ್ತಿತ್ವಕ್ಕಾಗಿ ಮಾಡುತ್ತಿದ್ದಾರೆ ಅಷ್ಟೇ, ಎಲ್ಲಿಯೂ ಜೋಡೋ ಭಾರತ ಮಾಡುವ ಅವಶ್ಯಕತೆ ಇಲ್ಲ, ಎಲ್ಲಾ ರಾಜ್ಯಗಳು ಅತ್ಯಂತ ಸೌಹಾರ್ದತೆಯಿಂದ ಒಕ್ಕೂಟ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟುಕೊಂಡಿರುವವರು ಬಿಜೆಪಿಯವರು ಇದರೊಟ್ಟಿಗೆ ಭಾರತೀಯರೆಲ್ಲಾ ಒಂದು ಎನ್ನುವುದು ನಮ್ಮ ಪಕ್ಷದ ಕಲ್ಪನೆ, ಆದರೆ ಕಾಂಗ್ರೆಸ್‌ನವರು ಈಗ ಭಾರತ ಜೋಡೋ ಮಾತನಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿದ್ದು ಪಲ್ಲೇದ, ಬಿಜೆಪಿ ಯುವ ಮುಖಂಡ ಪ್ರಶಾಂತ ನಾಯ್ಕರ ಮುಂತಾದವರು ಹಾಜರಿದ್ದರು.

ಈಗೇಕೆ ಉತ್ಸವ?

ಸಿದ್ದರಾಮಯ್ಯ ಪಕ್ಷದ ಹಿರಿಯ ನಾಯಕರು, ಇಷ್ಟುವರ್ಷಗಳ ಮಾಡದೇ ಇರುವ ಕಾರ್ಯಕ್ರಮ ಈಗ ಮಾಡುತ್ತಿದ್ದಾರೆ. ತಮ್ಮ ಪಕ್ಷದಲ್ಲಿಯೇ ಇರುವವರಿಗೆ ಸಂದೇಶ ನೀಡಲು ಅವರು ಹಿಂಬಾಲಕರು ಮುಂದಾಗಿದ್ದಾರೆ. ಜನರ ಮುಂದೆ ತೋರಿಸಿಕೊಳ್ಳುವುದು ಸ್ವ ಪಕ್ಷದಲ್ಲಿರುವವರಿಗೆ ಸಂಖ್ಯಾಬಲ ತೋರಿಸುವುದಕ್ಕಾಗಿಯೇ ಕಾಂಗ್ರೆಸ್‌ನವರು ಕಾಂಗ್ರೆಸ್‌ನವರಿಗಾಗಿ ಮಾಡುತ್ತಿರುವ ಉತ್ಸವವೇ ಸಿದ್ದರಾಮೋತ್ಸವ ಎಂದರು.
ಕಡಿಮೆ ದರದಲ್ಲಿ ಮರಳು: ನೂತನ ಮರಳು ನೀತಿ ಉದ್ದೇಶ

ನೂತನ ಮರಳು ನೀತಿ ಜಾರಿಗೆ ತರುವ ನಿಟ್ಟಿನಲ್ಲಿ ಸರ್ಕಾರ ಅಗತ್ಯವಾಗಿ ಕ್ರಮ ತೆಗೆದುಕೊಂಡಿದೆ. ಇದಕ್ಕಾಗಿ ಹಟ್ಟಿಗೋಲ್ಡ್‌ ಮೈನ್ಸ್‌ ಕಂಪನಿಗೆ ಮರಳು ಸಂಗ್ರಹ ಬ್ಲಾಕ್‌ಗಳನ್ನು ಮಾಡಿಕೊಡಲಾಗಿ ಈಗಾಗಲೇ ಕಾರ್ಯ ಪ್ರವೃತ್ತವಾಗಿದೆ. ಗ್ರಾಮೀಣ ಪ್ರದೇಶದಲ್ಲಿರುವ ಸಣ್ಣ ಹಳ್ಳ ಕೊಳ್ಳ, ತೊರೆಗಳಲ್ಲಿನ ಮರಳು ವಿಷಯವಾಗಿ ಸ್ಥಳೀಯವಾಗಿ ಪಂಚಾಯ್ತಿಗಳ ಮೂಲಕ ಜನರಿಗೆ ಸುಲಭವಾಗಿ ಮತ್ತು ಕಡಿಮೆ ದರದಲ್ಲಿ ಮರಳು ಸಿಗಬೇಕು ಎನ್ನುವುದೇ ನೂತನ ಮರಳು ನೀತಿಯ ಉದ್ದೇಶವಾಗಿದೆ. ಕ್ವಾರಿಗಳಲ್ಲಿ ನಡೆಯುತ್ತಿರುವ ಬ್ಲಾಸ್ಟಿಂಗ್‌ ವಿಷಯವಾಗಿ ಅದನ್ನು ಸಮರ್ಪಕವಾಗಿ ಜಾರಿ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಅವರದ್ದೇ ಇಲಾಖೆ ಕಾರ್ಯ ನಿರ್ವಹಿಸುತ್ತಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ ಹೇಳಿದರು.
 

click me!