
ಬಾಗಲಕೋಟೆ(ಏ. 29) ಕತ್ತಿ ತಮ್ಮಿಂದ ತಪ್ಪಾಗಿದೆ ಎಂದು ಕ್ಷಮೆ ಕೇಳಿದ್ದಾರೆ. ಅದು ಮುಗಿದು ಹೋಗಿದೆ. ಮುಗಿದಿರೋದು ರಿಪೀಟ್ ಮಾಡಬಾರದು ಎಂದು ಬಾಗಲಕೋಟೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ ನಿರಾಣಿ ಹೇಳಿದ್ದಾರೆ.
ಆದ್ರೆ ಯಾರೇ ಸಚಿವರಿರಲಿ, ಜನ ಪ್ರತಿನಿಧಿಗಳಿರಲಿ ಲಕ್ಷ್ಮಣ ರೇಖೆ ಬಿಟ್ಟು ಮಾತನಾಡಬಾರದು. ಅವರು ಕಷ್ಟದಲ್ಲಿದ್ದವರು ಕೇಳಿರುತ್ತಾರೆ,ತಾಳ್ಮೆಯಿಂದ ಪ್ರತಿಕ್ರಿಯೆ ನೀಡೋದು ನಮ್ಮ ಜವಾಬ್ದಾರಿ. ಆರೂವರೆ ಕೋಟಿ ಜನರಲ್ಲಿ 33 ಜನರನ್ನ ಮಾತ್ರ ಮಂತ್ರಿ ಮಾಡಿದ್ದಾರೆ. ನಮಗಿಂತಲೂ ಹೆಚ್ಚು ಬುದ್ದಿವಂತರು ಕೆಪೇಬಲ್ ಇರುವಂತವರು ಬಹಳ ಜನರಿದ್ದಾರೆ ಎಂದರು.
ಅಕ್ಕಿ ಕೇಳಿದವನಿಗೆ ಸಾಯುವುದು ಒಳ್ಳೆಯದು ಎಂದ ಸಚಿವ
ಏನೋ ಇದೊಂದು ಸುದೈವ ನಮ್ಮ ಪಕ್ಷದಿಂದ ಈ ಸ್ಥಾನಕ್ಕೆ ಬಂದಿದ್ದೇವೆ. ದೇವರು ನಮಗೆ ಎಷ್ಟು ಶಕ್ತಿ ಕೊಟ್ಟಿದ್ದಾನೋ ಅದನ್ನ ತಾಳ್ಮೆಯಿಂದ ಉತ್ತರ ಕೊಡುವತ್ತ ನಾವು ಗಮನ ಹರಿಸಬೇಕು ಎಂದು ಹೇಳಿದ್ದಾರೆ.ಕರೆ ಮಾಡಿದ್ದ ವ್ಯಕ್ತಿಯೊಬ್ಬರು ಆಹಾರ ಸಚಿವ ಉಮೇಶ್ ಕತ್ತಿ ಬಳಿ ಕೊರೋನಾ ನಿಷೇಧಾಜ್ಞೆ ಹಾಕಲಾಗಿದೆ. ಹೆಚ್ಚಿನ ಅಕ್ಕಿ ಕೊಡಿ ಎಂದು ಕೇಳಿದ್ದರು. ಇದಕ್ಕೆ ಸಚಿವರು ವಿವಾದಾತ್ಮಕ ರೀತಿಯಲ್ಲಿ ಉತ್ತರ ನೀಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.