* ಕಾಂಗ್ರೆಸ್‌ನವರ ಹತ್ರ ಹಣ ಇದೆ ನಮ್ ಹತ್ರ ಜನ ಇದಾರೆ
* ನಮ್ಮ ಪಾರ್ಟಿಯಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ
* ಯಡಿಯೂರಪ್ಪ ಪರಮೋಚ್ಚ ನಾಯಕ, ಅವರಿಗೆ ಪಾರ್ಟಿ ಗೌರವ ಕೊಟ್ಟಿದೆ
ಹಾವೇರಿ(ಅ.22): ನಮಗೆ ನೀರಿನ ಹೊಳೆ ಹರಿಸಿ ಗೊತ್ತಿದೆ, ಹಣದ ಹೊಳೆ ಹರಿಸಿ ಗೊತ್ತಿಲ್ಲ ಎಂದು ಸಚಿವ ಸುನೀಲ ಕುಮಾರ್(Sunil Kumar) ಹೇಳಿದ್ದಾರೆ.
ಅವರು ಹಾನಗಲ್‌ನ(Hanagal) ಮಕರವಳ್ಳಿ ಗ್ರಾಮದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಉಪಚುನಾವಣೆಯಲ್ಲಿ(Byelection) ಬಿಜೆಪಿಯವರು(BJP) ಹಣದ ಹೊಳೆ ಹರಿಸುತ್ತಿದ್ದಾರೆ ಎಂಬ ಸಿದ್ದರಾಮಯ್ಯ(Siddaramaiah) ಹೇಳಿಕೆಗೆ ಟಾಂಗ್ ನೀಡಿದರು.
ಕಾಂಗ್ರೆಸ್‌ನ(Congress) ನಾಯಕರು ಹಾಗೂ ಅವರ ಅಧ್ಯಕ್ಷರು ಕಮಿಷನ್ ಏಜೆಂಟ್‌ಗಳಾಗಿ(Commission Agent) ಯಾವ ರೀತಿ ಕೆಲಸ ಮಾಡಿದ್ದಾರೆ ಗೊತ್ತಿದೆ. ಅವರ ಹತ್ರ ಹಣ ಇದೆ ನಮ್ ಹತ್ರ ಜನ ಇದಾರೆ, ಹೀಗಾಗಿ ಕಾಂಗ್ರೆಸ್‌ನವರು ಅಸಹಾಯಕತೆ ವ್ಯಕ್ತ ಮಾಡ್ತಿದ್ದಾರೆ ಎಂದರು.
ಬಿಜೆಪಿ ಎಂದರೆ ಭ್ರಷ್ಟ ಜನತಾ ಪಾರ್ಟಿ: ಸಲೀಂ ಅಹ್ಮದ್
ನಾವು ಅಭಿವೃದ್ಧಿ ಆಧಾರದ ಮೇಲೆ ಚುನಾವಣೆ(Election) ಎದುರಿಸುತ್ತಿದ್ದೇವೆ. ಆರ್‌ಎಸ್‌ಎಸ್(RSS) ಮೇಲೆ ಕುಮಾರಸ್ವಾಮಿ(HD Kumaraswamy) ವಾಗ್ದಾಳಿ ಕುರಿತು ಮಾತನಾಡಿ, ಕುಮಾರಸ್ವಾಮಿ ಗಲಿಬಿಲಿಗೊಂಡು ಹೇಳ್ತಾ ಇದ್ದಾರೆ. ಹಿಂದುಗಳ(Hindu) ಮತ ಬೇಕು ಅಂತ ಯಾವತ್ತೂ ಅವರಿಗೆ ಅನಿಸಿಲ್ಲ, ಆದರೆ ಆರ್‌ಎಸ್‌ಎಸ್ ಹಾಗೂ ಹಿಂದುಗಳನ್ನು ಟೀಕೆ ಮಾಡ್ತಾರೆ. ಹಿಂದುಗಳನ್ನ ಓಲೈಸುವ ಪ್ರಯತ್ನ ಮಾಡಿಲ್ಲ. ಕಾಂಗ್ರೆಸ್ ಹಾಗೂ ಜೆಡಿಎಸ್(JDS) ಕೇವಲ ಮುಸ್ಲಿಂ(Muslim) ಓಲೈಸುವ ಕೆಲಸ ಮಾಡ್ತಿದ್ದಾರೆ ಎಂದರು.
ಯಡಿಯೂರಪ್ಪ(BS Yediyurappa) ಅವರನ್ನು ಬಲವಂತವಾಗಿ ಸಿಎಂ(Chief Minister) ಸ್ಥಾನದಿಂದ ಕೆಳಗಿಳಸಲಾಯ್ತು ಎಂಬ ಸಿದ್ದರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಿಯಿಸಿ ಈ ಕುರಿತು ಸ್ವತಃ ಯಡಿಯೂರಪ್ಪ ಹಲವು ಬಾರಿ ಹೇಳಿದ್ದಾರೆ, ಈಗಾಗಲೇ ಸ್ಪಷ್ಟಮಾಡಿದ್ದಾರೆ. ನಮ್ಮ ಪಾರ್ಟಿಯಲ್ಲಿ ಆಂತರಿಕ ಪ್ರಜಾಪ್ರಭುತ್ವ(Democracy) ಇದೆ. ಯಡಿಯೂರಪ್ಪ ಪರಮೋಚ್ಚ ನಾಯಕ, ಅವರಿಗೆ ಪಾರ್ಟಿ ಗೌರವ ಕೊಟ್ಟಿದೆ. ಮುಂದೆಯೂ ಗೌರವ ಕೊಡಲಿದೆ.
ರಾಜ್ಯ ಬಿಜೆಪಿಗೆ ಮೋದಿ(Narendra Modi) ಮುಂದೆ ನಿಲ್ಲೋ ಧಮ್ ಎಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆ ಕುರಿತಂತೆ ಮೋದಿಯವರ ಮುಂದೆ ಯಾರಿಗೂ ನಿಲ್ಲೋಕೆ ಆಗಲ್ಲ. ಸಿದ್ದರಾಮಯ್ಯ ಮೋದಿ ಬಗ್ಗೆ ಇರೋ ಭಯ ಬಹಳ ಸಲ ವ್ಯಕ್ತ ಮಾಡಿದ್ದಾರೆ. ಸಿದ್ದರಾಮಯ್ಯಗೂ ನಿಲ್ಲೋಕೆ ಎಲ್ಲಿ ಆಗುತ್ತೆ? ಜನರಿಂದ ತಿರಸ್ಕಾರ ಆಗಿದ್ದಕ್ಕೆ ಈ ರೀತಿ ಹೇಳ್ತಾ ಇದ್ದಾರೆ ಎಂದು ಟೀಕಿಸಿದರು.