'ಹಾನಗಲ್‌ನಲ್ಲಿ ಬಿಜೆಪಿ ಸೋಲುತ್ತೆ, ಬೊಮ್ಮಾಯಿ, ನಿರಾಣಿಗೆ ಗೊತ್ತಿದೆ'

By Suvarna News  |  First Published Oct 22, 2021, 3:11 PM IST

* ಹಾನಗಲ್ ಉಚಚುನಾವನೆ ಅಖಾಡಕ್ಕಿಳಿದ ಸಿದ್ದರಾಮಯ್ಯ
* ಹಾನಗಲ್‌ನಲ್ಲಿ ಬಿಜೆಪಿ ಸೋಲುತ್ತದೆ ಎಂದು ಭವಿಷ್ಯ
* ಬಿಜೆಪಿ ಸೋಲುವುದು ನಿರಾಣಿ, ಬೊಮ್ಮಾಯಿಗೆ ಗೊತ್ತಿದೆ ಎಂದು ಬಾಂಬ್ ಸಿಡಿಸಿದ ಸಿದ್ದು


ಹುಬ್ಬಳ್ಳಿ, (ಅ.22): ಹಾನಗಲ್ ಹಾಗೂ ಸಿಂದಗಿ ವಿಧಾನಸಭಾ ಉಪಚುನಾವಣೆ (By Elections) ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ರಾಜಕೀಯ ನಾಯಕರು ಕಾಲಿಗೆ ಚಕ್ರಕಟ್ಟಿಕೊಂಡವರಂತೆ ತಮ್ಮ ಅಭ್ಯರ್ಥಿಗಳ ಪರ ಮತಬೇಟೆ ನಡೆಸಿದ್ದಾರೆ.

ಆಡಳಿತರೂಢ ಬಿಜೆಪಿಗೆ (BJP) ಎರಡು ಕ್ಷೇತ್ರಗಳು ಪ್ರತಿಷ್ಠೆಯಾಗಿದ್ದು, ಗೆಲ್ಲುವ ಕಸರತ್ತು ನಡೆಸಿದೆ. ಇನ್ನು ಕಾಂಗ್ರೆಸ್ ಬಿಜೆಪಿಯನ್ನು ಇಲ್ಲಿಂದಲೇ ಸೋಲಿಸಬೇಕೆಂದು ಪಣತೊಟ್ಟಿದೆ.

Latest Videos

undefined

ಇನ್ನು ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹಾನಗಲ್ ಉಪಚುನಾವಣೆಯಲ್ಲಿ (Hangal By Election) ಬಿಜೆಪಿ ಸೋಲುತ್ತದೆ. ಈ ವಿಚಾರ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಹಾಗೂ ಸಚಿವ ಮುರುಗೇಶ್ ನಿರಾಣಿ (Murugesh Nirani) ಅವರಿಗೂ ಗೊತ್ತಿದೆ ಎಂದು ಹೊಸ ಬಾಂಬ್ ಸಿಡಿಸಿದರು.

ಬಿಜೆಪಿ ಬಳಿ ಮುಸ್ಲಿಂ ಮಂತ್ರಿ ಇದ್ದಾರಾ..ಶಾಸಕರಿದ್ದಾರಾ? ಸಿಎಂಗೆ ಸಿದ್ದು ಗುದ್ದು

ಹುಬ್ಬಳ್ಳಿಯಲ್ಲಿ ಇಂದು (ಅ.22) ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ (Siddaramaiah), ಹಾನಗಲ್‌ನಲ್ಲಿ ಬಿಜೆಪಿ ಸೋಲುತ್ತದೆ. ಇದು ಸಿಎಂಗೆ ಗೊತ್ತಿದೆ ಎಂದು ಹೇಳುವ ಮೂಲಕ ಹಾನಗಲ್‌ನಲ್ಲಿ ಕಾಂಗ್ರೆಸ್ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈಗ ಚುನಾವಣೆ ವೇಳೆ ನಾವು ಮಿಷನ್ ಹಾನಗಲ್ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ, ಇಷ್ಟು ದಿನ ಏಕೆ ಹಾನಗಲ್ ಅವರಿಗೆ ಕಂಡಿರಲಿಲ್ಲ? ಬಡವರಿಗೆ ಒಂದು ಮನೆಯಾದರೂ ಕೊಟ್ಟಿದ್ದಾರಾ? ಅಭಿವೃದ್ಧಿ ಎಂದರೆ ಏನು ಗೊತ್ತಾ? ಬರೀ ಹಣ ಖರ್ಚು ಮಾಡಿ ಚುನಾವಣೆ ಗೆಲ್ಲುವುದು ಗೊತ್ತು ಎಂದರು.

ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ಹಾನಗಲ್ ಕ್ಷೇತ್ರಕ್ಕೆ ಏನೆಲ್ಲ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ ಎಂದು ಹಿಂದಿನ ಶಾಸಕ ಮನೋಹರ್ ತಹಸೀಲ್ದಾರ್ ಅವರನ್ನು ಕೇಳಿನೋಡಿ. ನಾನು 2400 ಕೋಟಿ ರೂ.ಗಳನ್ನು ಕ್ಷೇತ್ರದ ಅಭಿವೃದ್ಧಿಗೆ ನೀಡಿದ್ದಾ, ಈಗಿನ ಸರ್ಕಾರ ಎಷ್ಟು ಹಣ ನೀಡಿದೆ ಹೇಳಲಿ ಎಂದು ಸವಾಲು ಹಾಕಿದರು.
 

click me!