ಮುಸ್ಲಿಂ ಓಲೈಕೆಗೆ ಮುಂದಾಗಿದ್ದಾರಂತೆ ಸಚಿವ ಶ್ರೀರಾಮುಲು: ಕದ್ದುಮುಚ್ಚಿ ಮಸೀದಿ ಅಭಿವೃದ್ಧಿಗೆ ಹಣ ಕೊಡ್ತಿದ್ದಾರಂತೆ!

By Govindaraj S  |  First Published May 6, 2022, 3:33 PM IST

ಈ ರಾಜಕೀಯವೇ ಹೀಗೆ ಇವತ್ತು ಬೇಡವಾದವರು ನಾಳೆ ಮತ್ತೆ ಅವರ ಮನೆ ಬಾಗಿಲಿಗೆ ಹೋಗೋ ಸ್ಥಿತಿ ಬರುತ್ತದೆ ಅನ್ನೋದಕ್ಕೆ ಸಚಿವ ಶ್ರೀರಾಮುಲು ಅವರ ಡಬಲ್ ಸ್ಟಾಟಜಿಯೇ ಇದೀಗ ತಾಜಾ ಉದಾಹರಣೆಯಾಗಿದೆ.


ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಬಳ್ಳಾರಿ
 
ಬಳ್ಳಾರಿ (ಮೇ.06): ಈ ರಾಜಕೀಯವೇ (Politics) ಹೀಗೆ ಇವತ್ತು ಬೇಡವಾದವರು ನಾಳೆ ಮತ್ತೆ ಅವರ ಮನೆ ಬಾಗಿಲಿಗೆ ಹೋಗೋ ಸ್ಥಿತಿ ಬರುತ್ತದೆ ಅನ್ನೋದಕ್ಕೆ ಸಚಿವ ಶ್ರೀರಾಮುಲು (B Sriramulu) ಅವರ ಡಬಲ್ ಸ್ಟಾಟಜಿಯೇ ಇದೀಗ ತಾಜಾ ಉದಾಹರಣೆಯಾಗಿದೆ. ಯಾಕಂದರೆ ಮುಸ್ಲಿಂ (Muslim) ಒಲೈಕೆಗೆ ಮುಂದಾಗಿರೋ ಶ್ರೀರಾಮುಲು‌ ಅವರು ಮಸೀದಿಗಳಿಗೆ ಡೆವಲಪ್ಮೆಂಟ್ (Mosques Development) ಹೆಸರಲ್ಲಿ ಭರ್ಜರಿ ದೇಣಿಗೆಯನ್ನು ನೀಡ್ತಿದ್ದಾರೆ. ಇದಕ್ಕೆ ಕಾರಣ ಅವರು ಮತ್ತೊಮ್ಮೆ ತವರು ಕ್ಷೇತ್ರ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಮೇಲೆ ಕಣ್ಣಿಟ್ಟಿರೋದು ಎನ್ನುವುದು ಗುಟ್ಟಾಗಿಲ್ಲ. ಒಂದು ಕಡೆ ಸಂಘ ಪರಿವಾರದವರ ದೃಷ್ಠಿಯಲ್ಲಿ ಅಲ್ಪ ಸಂಖ್ಯಾತರರಿಂದ ದೂರವಿರಬೇಕು. ಆದರೆ ಇಲ್ಲಿ ದೂರವಿದ್ರೇ ಇಲ್ಲಿ ಮತ ಪಡೆಯೋದು ಕಷ್ಟವಾಗಿದೆ. ಹೀಗಾಗಿ ಸದ್ಯ ಶ್ರೀರಾಮುಲು‌ ಇಕ್ಕಟ್ಟಿಗೆ ಸಿಲುಕಿದ್ದಾರೆ

ಒಂದೊಂದು ಮಸೀದಿಗೆ 20 ಲಕ್ಷ ದೇಣಿಗೆ ನೀಡೋ ಮೂಲಕ ಮುಸ್ಲಿಂ ಮತದಾರರ ಒಲೈಕೆ: ಹೌದು! ಸದ್ಯ ಸಚಿವ ಶ್ರೀರಾಮುಲು ಅವರ ಇಕ್ಕಟ್ಟಿನ ಕಾಲವಿದು ಅಂದ್ರೂ ಕೂಡ ತಪ್ಪಾಗಲಿಕ್ಕಿಲ್ಲ. ಯಾಕಂದರೆ ಇದೀಗ ಶ್ರೀರಾಮುಲು ಪರಿಸ್ಥಿತಿ ಬಿಸಿ ತುಪ್ಪದಂತಾಗಿದೆ. ಇತ್ತ ಉಗುಳೋ ಹಾಗೂ ಇಲ್ಲ ಅತ್ತ ನುಂಗೋ ಹಾಗೂ ಇಲ್ಲವಾಗಿದೆ. 2018ರ ಚುನಾವಣೆ ವೇಳೆ ಬದಲಾದ ಸನ್ನಿವೇಶದಲ್ಲಿ ಶ್ರೀರಾಮುಲು ಮೊದಲಿಗೆ ಬಳ್ಳಾರಿ ಗ್ರಾಮಾಂತರ ಕ್ಷೇತ್ರವನ್ನು ಬಿಟ್ಟು ಮೊಳಕಾಲ್ಮೂರಿಗೆ ತೆರಳಿದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡನೇ ಕ್ಷೇತ್ರವಾಗಿ ಬಾದಾಮಿಯನ್ನು ಆಯ್ಕೆ ಮಾಡಿಕೊಂಡಾಗ ಬಿಜೆಪಿ ಹೈಕಮಾಂಡ್ ಸೂಚನೆ ಮೇರೆಗೆ ಬಾದಾಮಿಯಲ್ಲಿ ಸ್ಪರ್ಧೆ ಮಾಡಿದ ಶ್ರೀರಾಮುಲು ಮೊಳಕಾಲ್ಮೂರಿನಲ್ಲಿ ಗೆದ್ದು, ಬಾದಾಮಿಯಲ್ಲಿ ಕೆಲ ಮತಗಳ ಅಂತರದಲ್ಲಿ ಸೋಲನ್ನು ಅನುಭವಿಸಿದರು. 

Tap to resize

Latest Videos

undefined

ಬಳ್ಳಾರಿ ಅಭಿವೃದ್ಧಿಗೆ ಹೈಟೆಕ್ ಸ್ಪರ್ಶ ನೀಡಲು ಮುಂದಾದ ಸಚಿವ ರಾಮುಲು‌

ಆದರೆ ಕಾಲ ಬದಲಾಗಿದೆ. ಈ ಬಾರಿ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕು ಅನ್ನೋದೇ ದೊಡ್ಡ ಪ್ರಶ್ನೆಯಾಗಿದೆ. 2018ರಲ್ಲಿ ಇದ್ದಂತೆ ಹೈಕೆಂಡ್‌ನಲ್ಲಿ ಶ್ರೀರಾಮುಲು ವರ್ಚಸ್ಸು ಇಲ್ಲ ಎನ್ನಲಾಗ್ತಿದೆ ಅಲ್ಲದೇ, ಮೊಳಕಾಲ್ಮೂರಿನಲ್ಲಿ ಈ ಬಾರಿ ಒಳ್ಳೆಯ ವಾತಾವರವಿಲ್ಲವಂತೆ. ಹೀಗಾಗಿ ಮತ್ತೊಮ್ಮೆ ತವರು ಕ್ಷೇತ್ರದತ್ತ ಮುಖ ಮಾಡಿರೋ ಶ್ರೀರಾಮುಲು ವಿನೂತನ ಪ್ಲಾನ್ ಮಾಡುತ್ತಿದ್ದಾರೆ. ಬಳ್ಳಾರಿ ಗ್ರಾಮಾಂತರ ಪ್ರದೇಶದ ಕೌಲ್ ಬಜಾರ್ ವ್ಯಾಪ್ತಿಯ 9 ವಾರ್ಡಿನಲ್ಲಿ ಅತಿಹೆಚ್ಚು ಮುಸ್ಲಿಂ ಮತದಾರರಿದ್ದಾರೆ ಅವರ ಒಲೈಕೆ ಮಾಡೋ ನಿಟ್ಟಿನಲ್ಲಿ ಮಸೀದಿ ಡೆವಲಪ್ಮೆಂಟ್ ಮಾಡೋದಕ್ಕೆ ಹಣ ನೀಡುತ್ತಿದ್ದಾರಂತೆ ಆದರೆ ಹಣ ಕೊಡೋದಾದರೆ ನೇರವಾಗಿ ನೀಡಲು ಕದ್ದಮುಚ್ಚಿ ಹಿಂಬಾಗಿಲಿನಿಂದ ಯಾಕೆ ಕೊಡ್ತಿರಾ ಅನ್ನೋದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಫೀಕ್  ಅವರ ಪ್ರಶ್ನೆಯಾಗಿದೆ.
 
ಹಿಜಾಬ್, ಹಲಾಲ್, ಸಿಎಎ ಗಲಾಟೆ ವೇಳೆ ಸುಮ್ಮಿನಿದ್ರು: ಕಳೆದೊಂದೆರಡು ವರ್ಷದಲ್ಲಿ ನಡೆದ ಸಿಎಎ, ಹಿಜಾಬ್,  ಹಲಾಲ್ ಕಟ್ ಸೇರಿದಂತೆ ಇತರೆ ಗಲಾಟೆ ನಡೆದಾಗ ಮುಸ್ಲಿಂ ಪರ ಮಾತನಾಡದ  ಶ್ರೀರಾಮುಲು ಇದೀಗ ಮುಸ್ಲಿಂರ ಮೇಲೆಕೆ ಹೆಚ್ಚು ಪ್ರೀತಿ ಬಂದಿದೆ. ಚುನಾವಣೆ ಹಿನ್ನಲೆಯೇ ಒಲೈಕೆ ರಾಜಕಾರಣ ಮಾಡ್ತಿದ್ದಾರೆಂದು ಮುಸ್ಲಿಂ ‌ಮುಖಂಡರ ಆರೋಪಿಸಿದ್ದಾರೆ. ಆದರೆ ಶ್ರೀರಾಮುಲು‌ ಮಾತ್ರ ನಾನು ದೇಣಿಗೆ ಕೊಟ್ಟಿಲ್ಲ ದಾನಿಗಳು ನನ್ನ ಮೂಲಕ ಕೊಡಿಸಿದ್ದಾರೆಂದು ಹೇಳ್ತಿದ್ದಾರೆ. ಇನ್ನೂ ಇದು ಧರ್ಮದ ಕೆಲಸ ಈ ಕೈಕೊಟ್ಟಿದ್ದು ಮತ್ತೊಂದು ಕೈಗೆ ಕಾಣಬಾರದು. ನಾನು ಒಂದು ರೂಪಾಯಿ ಕೊಟ್ಟಿಲ್ಲ ಬೇರೆಯವರ ಕೈಯಿಂದ ಕೊಡಿಸಿದ್ದೇನೆ. ನನ್ನ ಮೂಲಕ ದೇಣಿಗೆ ದೇವಸ್ಥಾನ ಮಸೀದಿಗೆ ಮುಟ್ಟುತ್ತದೆ ಅಂದರೆ ತಪ್ಪೇನು ಎಂದು ಶ್ರೀರಾಮುಲು‌ ‌ಪ್ರಶ್ನೆಸಿದ್ದಾರೆ?.

ಚುನಾವಣೆ ಸೋಲಿನ ಭೀತಿಯಿಂದ ಕಾಂಗ್ರೆಸ್‌ನಿಂದ ಕೋಮುಗಲಭೆ ಸೃಷ್ಟಿ: ಶ್ರೀರಾಮುಲು

ಮುಸ್ಲಿಂ ಒಲೈಕೆ ಮಾಡಿದ್ರೆ ಸಂಘ ಪರಿವಾರ ಏನು ಹೇಳುತ್ತೆ: ಈ ಹಿಂದೆ ಇದ್ಧಂತೆ ಇದೀಗ ಬಿಜೆಪಿ ಈಗ ಇಲ್ಲ. ಇಲ್ಲಿ ಹಿಂದುತ್ವ ಪ್ರತಿಪಾದನೆ ಮಾಡಲೇಬೇಕು. ಆದರೆ ಈ ಕ್ಷೇತ್ರದಲ್ಲಿ ಹಿಂದುತ್ವದ ಬಗ್ಗೆ ಹೆಚ್ಚು ಒಲವು ತೋರಿಸೋದು ಕೂಡ ಕಷ್ಟವಾಗಿದೆ. ಹೀಗಾಗಿ ಸದ್ಯ ಶ್ರೀರಾಮುಲು ಸ್ಥಿತಿ ಡೋಲಾಯಮಾನವಾಗಿದೆ. 

click me!