ವರದಿ : ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್,
ಕೋಲಾರ(ಮೇ.6): ಕೋಲಾರ (Kolara) ಜಿಲ್ಲೆಯ ಮಾಲೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ವೈ ನಂಜೇಗೌಡ ಅವರ ಪುತ್ರನ ಮದುವೆಯ ಆರತಕ್ಷತೆ ಕಾರ್ಯಕ್ರಮಕ್ಕೆ ಗುರುವಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (siddaramaiah ) ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಭೇಟಿ ನೀಡಿ ವಧು ವರರಿಗೆ ಶುಭ ಹಾರೈಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ಪಿ.ಎಸ್.ಐ ಅಕ್ರಮ ಬೆನ್ನಲ್ಲೆ ಸರ್ಕಾರ ಅಧಿಕಾರಿಗಳನ್ನ ವರ್ಗಾವಣೆ ಮಾಡಿದ್ದು ಯಾಕೆ? ಕಾಂಗ್ರೆಸ್ ನಾಯಕರ ಆರೋಪಗಳು ಗಾಳಿಯಲ್ಲಿ ಗುಂಡು ಹೊಡದಂತೆ ಅಲ್ಲ. ಪಿ.ಎಸ್.ಐ ಅಕ್ರಮದ ಬಗ್ಗೆ ಸಚಿವರು, ಹಾಗು ಅಧಿಕಾರಿಗಳೇ ದೂರು ನೀಡಿದ್ದಾರೆ. ಅಕ್ರಮ ನಡೆದಿಲ್ಲ ಎಂದಾದರೆ, ಸೆಲೆಕ್ಷನ್ ರದ್ದು ಮಾಡಿ ಹೊಸ ಪರೀಕ್ಷೆ ಮಾಡ್ತಿರೋದು ಯಾಕೆ? ಎಂದು ಪ್ರಶ್ನಿಸಿದ್ದಾರೆ.
ಅಕ್ರಮ ನಡೆದಿರೊದು ಗೃಹ ಇಲಾಖೆಯಲ್ಲಿ (karnataka home ministry), ಹಾಗಾಗಿ ಆರಗ ಜ್ಞಾನೇಂದ್ರ (Home Minister Araga Jnanendra) ರಾಜಿನಾಮೆ ನೀಡಲಿ. ಸಚಿವ ಆರಗ ಜ್ಞಾನೇಂದ್ರ ಬೇಜವಬ್ದಾರಿಯಾಗಿ ವರ್ತನೆ ಮಾಡಿದ್ದಾರೆ. ಸಚಿವರಾಗಿ ಮುಂದುವರೆಯಲು ಆರಗ ಜ್ಞಾನೇಂದ್ರ ಲಾಯಕ್ಕಿಲ್ಲ. ನಮ್ಮ ಅವಧಿಯಲ್ಲೂ ಅಕ್ರಮ ನಡೆದಿದ್ದರೆ ತನಿಖೆ ನಡೆಸಲಿ. ಸಚಿವ ಮುನಿರತ್ನ ಸಿಲ್ಲಿ ಹೇಳಿಕೆಗೆ ನಾನು ಉತ್ತರ ಕೊಡಲ್ಲ. ಪಿ.ಎಸ್.ಐ ಅಕ್ರಮ (PSI recruitment scam) ಬಗ್ಗೆ ಮುಂದೆ ಹೋರಾಟ ಮಾಡ್ತೀವಿ. ಸಚಿವ ಈಶ್ವರಪ್ಪ ವಿರುದ್ದ ಪ್ರತಿಭಟನೆ ನಡೆಸಿದಂತೆ, ಮಾಡ್ತೀವಿ. ಆ ಬಗ್ಗೆ ಪಕ್ಷದ ಸಭೆಯಲ್ಲಿ ತೀರ್ಮಾನ ಮಾಡ್ತೀವಿ ಎಂದು ಹೇಳಿದ್ದಾರೆ.
MTBಯಿಂದ ಅಧಿಕಾರ ದುರ್ಬಳಕೆ ಶರತ್ ಬಚ್ಚೇಗೌಡ ಬೆಂಬಲಿಗರ ಆರೋಪ
ಇನ್ನು 2023 ರ ವಿಧಾನಸಭಾ ಚುನಾವಣೆಯಲ್ಲಿ ತಾವು ಯಾವ ಕ್ಷೇತ್ರದಲ್ಲಿ ಸ್ಪರ್ಧೆ ಮಾಡ್ತೀರಿ ಅನ್ನೋದಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಬಾದಾಮಿ, ಕೋಲಾರ ಸೇರಿ 20 ಕಡೆ ಸ್ಪರ್ಧೆಗೆ ಆಹ್ವಾನ ಮಾಡಿದ್ದಾರೆ. ಚುನಾವಣೆಗೆ ಸಮಯ ಇದೆ, ಇನ್ನೂ ತೀರ್ಮಾನ ಮಾಡಿಲ್ಲ ಅಂತ ಹೇಳಿದ್ರು. ಸಿದ್ದರಾಮಯ್ಯ 5 ವರ್ಷ ಸರ್ಕಾರ ಮಾಡಿದ್ದಾರೆ ಆದ್ರೆ ಎಲ್ಲಿ ಸ್ಪರ್ಧೆ ಮಾಡ್ಬೇಕು ಅನ್ನೋದು ಅವರಿಗೆ ಗೊತ್ತಿಲ್ಲ ಅಂತ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದು, ಹಾಗಾದ್ರೆ ದೇವೇಗೌಡರು ತುಮಕೂರಿನಲ್ಲಿ ಏಕೆ ಸ್ಪರ್ಧೆ ಮಾಡಿದ್ರು, ಕುಮಾರಸ್ವಾಮಿ ಚಿಕ್ಕಬಳ್ಳಾಪುರ ದಲ್ಲಿ ಯಾಕೆ ಸ್ಪರ್ಧೆ ಮಾಡಿದ್ರು, ಅವರ ಹಾಗೆ ನಾನು ಬಾದಾಮಿಯಲ್ಲಿ ಚುನಾವಣೆ ಎದುರಿಸಿದ್ದೇನೆ ಅಷ್ಟೇ ಅಂತ ತಿರುಗೇಟು ನೀಡಿದ್ರು.
ಬಳಿಕ ಕೆಪಿಸಿಸಿ ಅಧ್ಯಕ್ಷ್ಯ ಡಿಕೆ ಶಿವಕುಮಾರ್ ಮಾತನಾಡಿ, ಪಿಎಸ್ಐ ಪರೀಕ್ಷೆಯಲ್ಲಿ ಐತಿಹಾಸಿಕ ಭ್ರಷ್ಟಾಚಾರವಾಗಿದೆ. ರಾಜ್ಯದ ಬಿಜೆಪಿ ಸರ್ಕಾರ ಏನೂ ಆಗಿಲ್ಲ ಅಂತ ಹೇಳ್ತಿದೆ. ನ್ಯಾಯ ಒದಗಿಸಿಕೊಡುತ್ತೇವೆ, ಎಂದು ಹೋಮ್ ಮಿನಿಸ್ಟರ್ ಹೇಳ್ತಿದ್ದಾರೆ. ರಾಜ್ಯದ ಯುವಕರ ಭವಿಷ್ಯದ ದೃಷ್ಟಿಯಿಂದ ನ್ಯಾಯ ಕೊಡಿಸಲೇಬೇಕು. ಪ್ರಕರಣ ಮುಖ್ಯ ಆರೋಪಿಗಳನ್ನು ಈವರೆಗೂ ಬಂಧಿಸಿಲ್ಲ. ಕೆಲವರು ಯುವಕರನ್ನ ಬಂದಿಸಿ ವಿಚಾರಣೆ ಮಾಡ್ತಿದ್ದಾರೆ, ನಮ್ಮವರಿಗೂ ನೋಟೀಸ್ ನೀಡಿದ್ದಾರೆ.
ಚಾರ್ಮಾಡಿ ಘಾಟ್ ನಲ್ಲಿ ಕಾರು ಅಪಘಾತ, ಹಣ ಚಿನ್ನ ದೋಚಿದ ದರೋಡೆಕೋರರು!
ಇನ್ನು ಬಂಧನ ಆಗಿರುವ ಆರೋಪಿಗಳ ಸ್ಟೇಟ್ ಮೆಂಟ್ ಸಹ ಇನ್ನೂ ನೀಡಿಲ್ಲ. ಬಿಜೆಪಿ ಪಕ್ಷದ ನಾಯಕರ ಹೆಸರುಗಳನ್ನು ಮುಚ್ಚಿಡುವ ಕೆಲಸ ಮಾಡ್ತಿದ್ದಾರೆ. ಬೇರೆ ಬೇರೆ ಇಲಾಖೆಗಳಲ್ಲಿ ನಡೆಯುತ್ತಿರುವ ನೇಮಕಾತಿಗಳ ಬಗ್ಗೆಯೂ ತನಿಖೆಯಾಗಬೇಕು. ನಾವು ತಪ್ಪು ಮಾಡಿದ್ದರೆ ನಮಗೂ ಶಿಕ್ಷೆಯಾಗಲಿ ಎಂದು ಬಿಜೆಪಿ ನಾಯಕರಿಗೆ ಸವಾಲು ಹಾಕಿದ್ರು.