ಅನಂತಕುಮಾರ ಹೆಗಡೆ ತಲೆಯಲ್ಲಿ ಸಗಣಿ ತುಂಬಿದೆ: ಸಚಿವ ಶಿವರಾಜ ತಂಗಡಗಿ

By Govindaraj S  |  First Published Mar 22, 2024, 3:01 PM IST

ಸಂಸದ ಅನಂತಕುಮಾರ ಹೆಗಡೆ ತಲೆಯಲ್ಲಿ ಸೆಗಣಿ ತುಂಬಿದೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.


ಕೊಪ್ಪಳ (ಮಾ.22): ಸಂಸದ ಅನಂತಕುಮಾರ ಹೆಗಡೆ ತಲೆಯಲ್ಲಿ ಸೆಗಣಿ ತುಂಬಿದೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು. ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರು ಮಾತನಾಡಿ, ಕೇಂದ್ರದಲ್ಲಿ ಆಧಿಕಾರ ನಡೆಸಿರುವ ಬಿಜೆಪಿ ಸರ್ಕಾರ ದೇಶವನ್ನು ಅಧೋಗತಿಗೆ ಹೋಗಿದೆ. ಆದರೂ ಮತ್ತೆ ಪ್ರಧಾನಿ ನರೇಂದ್ರ ಮೋದಿ ಬೇಕು ಎನ್ನುತ್ತಿದ್ದಾರೆ.  ಭಾರತೀಯ ಜನತಾ ಪಾರ್ಟಿ ಬದಲಿಗೆ ಭಾಡ್ ಜನತಾ ಪಾರ್ಟಿ ಅಂತಾ ಕರೆಯಬೇಕು. ಭ್ರಷ್ಟಾಚಾರಕ್ಕೆ ರಸೀದಿ ನೀಡಿದ ಸರ್ಕಾರ ಬಿಜೆಪಿ. ಬಾಂಡ್ ನೀಡಿದರೆ ಅವರ ಮನೆಗೆ ಇಡಿಯೂ ಹೋಗಲ್ಲ.ಸಿಬಿಐ ಸಹ ಹೋಗಲ್ಲ.‌

ಇವತ್ತು ಮೋದಿ ಅವರು ಲಂಚಕ್ಕೆ ರಸೀದಿ ನೀಡುವ ಸ್ಥಿತಿ ಬಂದಿದೆ. ಚುನಾವಣೆ ಬಂದರೆ ನಾಟಕ ಶುರು. ಪಾಕಿಸ್ಥಾನ, ಧರ್ಮ ಬಗ್ಗೆ ಮಾತನಾಡುತ್ತಾರೆ. ಸಮುದ್ರದ ಕೆಳಗೆ ನವಿಲುಗರಿ ಹಿಡಿದು ಕುಳಿತುಕೊಳ್ಳುತ್ತಾರೆ. ಬರ ಬಿದ್ದರೂ ಬರಲಿಲ್ಲ, ಪ್ರವಾಹ ಬಂದರೂ ಬಾರದವರು ಚುನಾವಣೆ ಬಂದಾಗ ಬರ್ತಾರೆ. ಯಾರ ಬಗ್ಗೆಯೂ ಕಾಳಜಿ ಇಲ್ಲ. ಕಾರ್ಮಿಕರು, ಬಡವರು, ರೈತರ ಬಗ್ಗೆ ಕಾಳಜಿ ಇಲ್ಲ. ಇಂಥವರನ್ನೂ ಅಧಿಕಾರದಿಂದ ಕಿತ್ತೊಗೆಯಬೇಕು.  ನಾಲ್ಲುನೂರು ಸೀಟು ಗೆದ್ದರೆ ಸಂವಿಧಾನ ಬದಲಾಯಿಸುತ್ತಾರೆ. ಹಿಟ್ಲರ್ ಆಡಳಿತ, ಗಡಾಫಿ ಆಡಳಿತ ದೇಶದಲ್ಲಿ ಬರುತ್ತೆ.

Latest Videos

undefined

Lok Sabha Election 2024: ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ದ ಸಿಡಿದೆದ್ದ ಭೋವಿ ಗುರುಪೀಠದ ಸಿದ್ದರಾಮೇಶ್ವರ ಶ್ರೀ!

ಮತ್ತೆ ಮೋದಿ ಅಧಿಕಾರಕ್ಕೆ ಬಂದರೆ ಸಂವಿಧಾನ ತೆಗೆದು ರಾಜಾಡಳಿ ಪ್ರಾರಂಭಿಸುತ್ತಾರೆ. ಬಿಜೆಪಿಯವರು ಯಾವುದಾದರೂ ಒಂದೇ ಒಂದು ಒಳ್ಳೆ ಕೆಲಸ ಮಾಡಿದರೆ ಹೇಳಬೇಕು. ಕಾಂಗ್ರೆಸ್‌ ಸರ್ಕಾರ ಉಳುವವನೆ ಒಡೆಯ ಕಾನೂನು ಜಾರಿಗೆ  ತಂದರು.  ಬಿನೆಪಿಯವರು ಬಾಂಡ್ ಮೂಲಕ ಶಾಸಕರನ್ನು ಖರೀದಿ  ಮಾಡುತ್ತಾರೆ. ನಮ್ಮನ್ನು ಕರೆದುಕೊಂಡು ಹೋಗಿದ್ದರು. ಹೆಲಿಕಾಪ್ಟರ್ ಸುತ್ತಾಡಿಸಿದರು. ಸಂಗಣ್ಣ ಅವರನ್ನು ಮನೆಯಲ್ಲಿ ಕೂಡ್ರಿಸಿದರು. ವೈಯಕ್ತಿಕ ಬದುಕು ಬಂದಾಗ ಪರಸ್ಪರ ಅಪ್ಪಿಕೊಳ್ಳುತ್ತೇವೆ.  ಬಿಜೆಪಿ ಅವರು ಹಾಗೆ ಮಾಡುವುದಿಲ್ಲ. ಬಡವರ ಕಣ್ಣೀರು ಒರೆಸುವ ಕಾರ್ಯ ಮಾಡಲಿಲ್ಲ ಬಿಜೆಪಿ. 

ರಾಜ್ಯದಲ್ಲಿ  ಕಾಯಂ ಸರ್ಕಾರ ಬಂದ ತಕ್ಷಣ ಗ್ಯಾರಂಟಿ ಯೋಜನೆ  ಜಾರಿ ಮಾಡಿದರು. ಮಹಿಳೆಯರ ಖಾತೆಗೆ ನೇರವಾಗಿ ಎರಡು ಸಾವಿರ ರುಪಾಯಿ ನೀಡುತ್ತಿದ್ದೇವೆ.‌ ಕರೋನಾದಲ್ಲಿ ಎಲ್ಲ ನೆನಪು ಇಟ್ಟುಕೊಂಡಿದ್ದಾರೆ ಡಾ.‌ಬಸವರಾಜ. ಅವರು ಏನು ಹೇಳ್ತಾರೆ. ಅವರ ವಿರುದ್ಧ ಬರೆದರೆ ಇಡಿಗೆ ಕಳುಹಿಸುತ್ತಾರೆ. ಬಿಜೆಪಿ ಅವರ ಮನೆಗೆ ಹೋಗಲ್ಲ.‌ಬಿಜೆಪಿ ಅವರು ಬಹಳ ಕಷ್ಟದಲ್ಲಿದ್ದಾರೆ. ನಮ್ಮನ್ನು ಗುಲಾಮರನ್ನಾಗಿ ಮಾತನಾಡುತ್ತಾಋಎ. ಅನಂತಕುಮಾರ ಹೆಗ್ಡ ತಲೆಯಲ್ಲಿ ಸೆಗಣಿ ತುಂಬಿಕೊಂಡಿದ್ದಾರೆ. ಸಿದ್ದರಾಮಯ್ಯ ಅವರ ಉಗುರಿನ ಧೂಳಿಗೂ ಸಮ ಆಗಲ್ಲ. ಮುಸ್ಲಿಂರು ಕಂಡರೆ ಪಾಕಿಸ್ಥಾನದವರು ಅಂತಾ ಹೇಳ್ತಾರೆ ಬಿಜೆಪಿ ಅವರು. 

ಕಾಂಗ್ರೆಸ್ ಪಕ್ಷದ ನಿಯೋಜಿತ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ ಅವರು ಮಾತನಾಡಿ, ಬಿಜೆಪಿ ಭರವಸೆ ಬಿರುಗಾಳಿಯಲ್ಲ ಕಳೆದಬಾರಿ ಕಡಿಮೆ ಅಂತರದಿಂದ ಸೋಲಾಯಿತು.  ಆದರೆ ಈ ಬಾರಿ ಕಾಂಗ್ರೆಸ್ ಪಕ್ಷ ಕೊಟ್ಟಿರುವ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದು, ಮನೆ ಮನೆಗೆ  ಹೋಗಿ ಮನವರಿಕೆ ಮಾಡಬೇಕಾಗಿದೆ. ಇಂಡಿಯಾ ಮೈತ್ರಿ ಕೂಟ ಅಧಿಕಾರಕ್ಕೆ ಬಂದರೆ ರಾಹುಲ್ ಗಾಂಧಿ ಅವರು ಬಡವರ ಬದುಕು ಹಸನ ಮಾಡುತ್ತೇವೆ ಎಂದಿದ್ದಾರೆ.  ನರೆಗಾ ತಂದಿದ್ದು ಕಾಂಗ್ರೆಸ್ ಸರ್ಕಾರ, ದೇಶದ ಅಭಿವೃದ್ಧಿ ಮಾಡಿದ್ದು ಕಾಂಗ್ರೆಸ್ ಸರ್ಕಾರ. ಆದರೆ ದೇಶ ಆಳುತ್ತಿರುವ ಬಿಜೆಪಿ ಕಾರ್ಪೋರೆಟ್ ಮಾಲಿಕರ ಸಾಲ ಮನ್ನಾ ಮಾಡುತ್ತಾರೆ.  

ಆದ್ದರಿಂದ ಕೇಂದ್ರ ಸರ್ಕಾರದಲ್ಲಿರುವ  ಸರ್ಕಾರ ತೆಗೆದು ಹಾಕಲು ತೀರ್ಮಾನ ಮಾಡಬೇಕಾಗಿದೆ.‌ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ವಿಶ್ರಮಿಸದೆ ಕೆಲಸ ಮಾಡಬೇಕು. ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ,  ಈ ಬಾರಿಯ ಚುನಾವಣೆ  ಧರಗಮ ಮತ್ತು ಅಧ್ರ್ಮದ ನಡುವೆ ನಡೆಯುತ್ತಿರುವ ಚುಮಾಣವಣೆ ಇದಾಗಿದೆ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ತಕ್ಷಣ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವ ಮೂಲಕ ಧರ್ಮದ ಆಡಳಿತ ಮಾಡಿದ್ದಾರೆ. ಇನ್ನು ಕೇಂದ್ರ ದಲ್ಲಿ ಅಧಿಕಾರದಲ್ಲಿ ಇರುವ ಮೋದಿ ಸರ್ಕಾರ ಸುಳ್ಳುವಭರವಸೆ ನೀಡಿ ಆಧರ್ಮದ ಆಡಳಿತ ನಡೆಸುತ್ತಿದೆ. ಕಾಂಗ್ರೆಸ್ ಅಕೌಂಟ್ ಸೀಜ್ ಮಾಡುವ ಮೂಲಕ ದುರಾಡಳಿತ ಮಾಡುತ್ತಿದೆ.   ರಾಜ್ಯದಲ್ಲಿ ೨೮ ಸ್ಥಾನಗಳನ್ನು ಕಾಂಗ್ರೆಸ್ ಸರ್ಕಾರ ಗೆಲ್ಲುವುದರಲ್ಲಿ ಅನುಮಾನವೇ ಇಲ್ಲ. 

ಕಾರ್ಯಕರ್ತರು ಮನೆ ಮಬೆಗೆ ಹೋಗಿ ಪ್ರಚಾರ ಮಾಡಿದರೆ ಎರಡು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸುತ್ತೇವೆ. ಆದ್ದರಿಂದ ಎಲ್ಲರೂ ಇಂದಿನಿಂದಲೇ ಕಾರ್ಯಗತವಾಗುವಂತೆ ಕರೆ ನೀಡಿದರು. ಹಿರಿಯ ಮುಖಂಡ ಶಾಂತಣ್ಣ ಮುದಗಲ್ ಅವರು ಮಾತನಾಡಿ, ಕಳೆದ ಎರಡು ಚುನಾವಣೆಯಲ್ಲಿ ಕಡಿಮೆ ಅಂತರದಿಂದ ಸೋತಿದ್ದೇವೆ. ಆದರೆ ಈ ಬಾರಿಯ ಚುನಾವಣೆಯ ಬೇರೆಯಾಗಿದ್ದಾರೆ. ಲೋಕ ಸಭಾ ವ್ಯಾಪ್ತಿಯಲ್ಲಿ ಎಂಟು ಕ್ಷೇತ್ರಗಳಲ್ಲಿ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರು ಇದ್ದಾರೆ. ಹೀಗಾಗಿ ನಮಗೆ ಗೆಲವು ಸುಲಭವಾಗುತ್ತದೆ ಎಂದರು. 

ತಿಂಗಳಾಂತ್ಯಕ್ಕೆ ಕಾಂಗ್ರೆಸ್‌ ‘ಜನಶಕ್ತಿ’ ಪ್ರಚಾರ ಶುರು: ಸಿಎಂ ಸಿದ್ದರಾಮಯ್ಯ

ಕಾರ್ಯಕ್ರಮದಲ್ಲಿ  ರಾಘವೇಂದ್ರ ಹಿಟ್ನಾಳ,  ಬಸವರಾಜ ಹಿಟ್ನಾಳ, ಶಾಂತಣ್ಣ ಮುದಗಲ್ , ಟಿ. ಜನಾರ್ದನ್ , ಕೆ.ಎಂ. ಸಯ್ಯದ್, ಗೂಳಪ್ಪ ಹಲಿಗೇರಿ, ಅಮ್ಜಾದ್ ಪಟೇಲ, ಗಾಳೆಪ್ಪ ಪೂಜಾರ, ಕಾಟನ್ ಪಾಶಾ, ಯಮನಪ್ಪ ಕಬ್ಬೇರ, ಕೃಷ್ಣಾರಡ್ಡಿ ಗಲಬಿ, ಕೃಷ್ಣ ಇಟ್ಟಂಗಿ, ಪ್ರಸನ್ ಗಡಾದ, ತೋಟಪ್ಪ ಕಾಮನೂರು, ಅಮ್ಜಾದ ಪಟೇಲ, ಲತಾ ಗವಿಸಿದ್ದಪ್ಪ ಚಿನ್ನೂರು, ಇಂದಿರಾ ಭಾವಿಕಟ್ಟಿ ಇದ್ದರು.

click me!