Lok Sabha Election 2024: ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ದ ಸಿಡಿದೆದ್ದ ಭೋವಿ ಗುರುಪೀಠದ ಸಿದ್ದರಾಮೇಶ್ವರ ಶ್ರೀ!

By Govindaraj S  |  First Published Mar 22, 2024, 2:50 PM IST

ದೇಶದ ಎರಡು ರಾಷ್ಟ್ರೀಯ ಪಕ್ಷಗಳು ಚಿತ್ರದುರ್ಗ, ಕೋಲಾರ ಸೇರಿದಂತೆ ರಾಜ್ಯದ 5 ಲೋಕಸಭಾ ಕ್ಷೇತ್ರಗಳಲ್ಲಿ ಭೋವಿ ಸಮುದಾಯದ ವ್ಯಕ್ತಿಗಳಿಗೆ ಟಿಕೇಟ್ ನೀಡದಿರುವ ಬೆನ್ನಲ್ಲೇ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಕಾಂಗ್ರೇಸ್ ಹಾಗೂ ಬಿಜೆಪಿ ಪಕ್ಷಗಳ ವಿರುದ್ದ ಸಿಡಿದಿದ್ದು, ನಮ್ಮ ವ್ಯಕ್ತಿಗಳಿಗೆ ಟಿಕೇಟ್ ನೀಡಬೇಕು.


ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ (ಮಾ.22): ದೇಶದ ಎರಡು ರಾಷ್ಟ್ರೀಯ ಪಕ್ಷಗಳು ಚಿತ್ರದುರ್ಗ, ಕೋಲಾರ ಸೇರಿದಂತೆ ರಾಜ್ಯದ 5 ಲೋಕಸಭಾ ಕ್ಷೇತ್ರಗಳಲ್ಲಿ ಭೋವಿ ಸಮುದಾಯದ ವ್ಯಕ್ತಿಗಳಿಗೆ ಟಿಕೇಟ್ ನೀಡದಿರುವ ಬೆನ್ನಲ್ಲೇ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಕಾಂಗ್ರೇಸ್ ಹಾಗೂ ಬಿಜೆಪಿ ಪಕ್ಷಗಳ ವಿರುದ್ದ ಸಿಡಿದಿದ್ದು, ನಮ್ಮ ವ್ಯಕ್ತಿಗಳಿಗೆ ಟಿಕೇಟ್ ನೀಡಬೇಕು ಇಲ್ಲವಾದರೆ ಸಮುದಾಯದ ಮುಂದಿನ ನಡೆ ಎರಡು ಪಕ್ಷಗಳಿಗೆ ವ್ಯತೀರಿಕ್ತ ವಾಗಿರಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿತ್ರದುರ್ಗದ ಭೋವಿ ಗುರುಪೀಠದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ ಜಾತ್ಯಾತೀತ ದೇಶ. ಭಾರತೀಯರಿಗೆ ಸಂವಿಧಾನವೇ ಮೂಲ ಗ್ರಂಥವಾಗಿದೆ. 

Latest Videos

undefined

ಇಲ್ಲಿನ ಪ್ರಜೆ ಸಾಮಾಜಿಕ, ಶೈಕ್ಷಣಿಕ ಧಾರ್ಮಿಕ ಹಾಗೂ ಆರ್ಥಿಕವಾಗಿ ಸಬಲರಾದಾಗ ಮಾತ್ರ ಸಂವಿಧಾನಕ್ಕೆ ಗೌರವ ಕೊಟ್ಟಂತಾಗಲಿದೆ. ಸಂವಿಧಾನದ ಮೂಲ ಸಮಪಾಲು ಸಮಬಾಳು ಎಂಬ ನಿಟ್ಟಿನಲ್ಲಿ ಸಂವಿದಾನ ಆಶಯಗಳನ್ನು ಸಂಪೂರ್ಣವಾಗಿ‌ ಜಾರಿಗೆ ತರುವ ಕೆಲಸವನ್ನು ರಾಜಕೀಯ ಪಕ್ಷಗಳು ಮಾಡಬೇಕಿದೆ. ಭೋವಿ ಸಮಾದಾಯದ ಸುಮಾರು 10-15 ಕೋಟಿ ಜನರು ದೇಶದಲ್ಲಿ ಇದ್ದರು ಕೂಡ ಸಂಸತ್ ಭವನ ಪ್ರವೇಶಕ್ಕೆ ಅನುಕೂಲ ಮಾಡಿಕೊಡದೇ ಇರುವುದು. ರಾಜಕೀಯ ತುಳಿತ ಮಾಡಲಾಗುತ್ತಿದೆ ಎಂಬುದು ತಿಳಿಯುತ್ತದೆ ಎಂದು ಹೇಳಿದರು.

ಕಾಂಗ್ರೆಸ್ ಸಂಸ್ಕೃತಿ ರಾಜ್ಯ ಬಿಜೆಪಿಗೂ ಬಂದಿದೆ: ಕೆ.ಎಸ್‌.ಈಶ್ವರಪ್ಪ ಕಿಡಿ

ಬೋವಿ, ಬಂಜಾರ, ಕೊರುಮ, ಕೊರಚ ಸಮುದಾಯಗಳನ್ನು ನಿರ್ಲಕ್ಷ ಮಾಡಿದರೆ ಸೋಲನ್ನು ಅನುಭವಿಸುತ್ತಿರಾ ಎಂಬುದನ್ನು ಇದನ್ನು ಈಗಾಗಲೇ ತೋರಿಸಿಕೊಡಲಾಗಿದೆ.  ಬಿಜೆಪಿ ದಕ್ಷಿಣ ಭಾರತದಲ್ಲಿ ಗಟ್ಟಿಯಾಗಿ ನೆಲೆಯುರಲು ಭೋವಿ ಸಮಾಜ ಕೊಡುಗೆ ಅಪಾರ ಎಂಬುದನ್ನು ಮರೆಯಬಾರದು. ಈ ನಿಟ್ಟಿನಲ್ಲಿ ಚಿತ್ರದುರ್ಗ ಹಾಗೂ ಕೋಲಾರ ಕ್ಷೇತ್ರದಲ್ಲಿ ಭೋವಿ ಸಮಾಜದ ವ್ಯಕ್ತಿಗಳಿಗೆ ಟಿಕೇಟ್ ನೀಡಬೇಕು ಎಂದು ಆಗ್ರಹಿಸಿದರು. ಹಿಂದುಳಿದ, ಶೋಷಿತ ಸಮುದಾಯಗಳಿಗೆ ರಾಜಕೀಯ ಶಕ್ತಿಯನ್ನು‌ ನೀಡಬೇಕಾದ ರಾಜಕೀಯ ಪಕ್ಷಗಳು ನಿರ್ಲಕ್ಷ ತೋರಿಸುತ್ತಿರುವುದು ಖಂಡನೀಯ. 

ಕಾಂಗ್ರೆಸ್ ಸರ್ಕಾರದ ಆರ್ಥಿಕ ಸ್ಥಿತಿ ಅಯೋಮಯ: ಮಾಜಿ ಸಿಎಂ ಬೊಮ್ಮಾಯಿ

ಕೇವಲ‌ ನಮ್ಮನ್ನು‌ ಮತ ಹಾಕಲು ಬಳಸಿಕೊಳ್ಳಬೇಡಿ. ನಮ್ಮನ್ನು ಸಂಸತ್ ಭವನಕ್ಕೆ ಕಳಿಸಲು ಕೈ ಜೋಡಿಸಬೇಕಿತ್ತು. ಈ ನಿಟ್ಟಿನಲ್ಲಿ ನೀವು ಎಡವಿದ್ದಿರಾ. ಇದರ ಪರಿಣಾಮ‌ ಮುಂದೆ ಅನುಭವಿಸ ಬೇಕಾಗುತ್ತದೆ. ಬಿಜೆಪಿ ಹಾಗೂ ಕಾಂಗ್ರೇಸ್ ಪಕ್ಷಗಳಿಗೆ ಎಚ್ವರಿಸಿದರು. ಈಗಲೂ ಸಮಯ ಇದ್ದು, ಕೊಲಾರ ಹಾಗೂ ಚಿತ್ರದುರ್ಗ ಕ್ಷೇತ್ರದಲ್ಲಿ ನಮ್ಮ ಸಮುದಾಯದ ಆಭ್ಯರ್ಥಿಗಳಿಗೆ ಟಿಕೇಟ್ ನೀಡಬೇಕು ಇಲ್ಲವಾದರೆ, ಮುಂದಿನ ತೀರ್ಮಾನವನ್ನು‌ ರಾಜ್ಯ ಮಟ್ಟದಲ್ಲಿ ಸಭೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಬೇಕಾಗುತ್ತದೆ ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧೆ ನಡೆಸಬೇಕಾಗುತ್ತದೆ ಎಂದು ಎಚ್ವರಿಸಿದರು.

click me!