ಮುಂಬರುವ ಲೋಕಸಭೆ ಚುನಾವಣೆಯಲ್ಲಿ ದೇಶದ ಜನ ಬಿಜೆಪಿಗೆ ಮತ ನೀಡದೆ ಚಿಪ್ಪು ಕೊಡುವುದು ಗ್ಯಾರಂಟಿ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ ತಂಗಡಗಿ ಲೇವಡಿ ಮಾಡಿದ್ದಾರೆ.
ಚಿತ್ರದುರ್ಗ (ಜು.19): ಮುಂಬರುವ ಲೋಕಸಭೆ ಚುನಾವಣೆಯಲ್ಲಿ ದೇಶದ ಜನ ಬಿಜೆಪಿಗೆ ಮತ ನೀಡದೆ ಚಿಪ್ಪು ಕೊಡುವುದು ಗ್ಯಾರಂಟಿ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ ತಂಗಡಗಿ ಲೇವಡಿ ಮಾಡಿದ್ದಾರೆ. ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳ ಜನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಚಿತ್ರದುರ್ಗಕ್ಕೆ ಆಗಮಿಸಿದ್ದ ಅವರು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದರು. ಕಾಂಗ್ರೆಸ್ ನುಡಿದಂತೆ ನಡೆಯುವ ಪಕ್ಷ. ರಾಜ್ಯದಲ್ಲಿ ನಾಲ್ಕು ವರ್ಷಗಳ ಬಿಜೆಪಿ ದುರಾಡಳಿತದಿಂದ ಜನ ಬೇಸತ್ತು, ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದಾರೆ. ಬಿಜೆಪಿಯವರು ನಾಲ್ಕು ವರ್ಷ ಜನತೆಗೆ ಚಿಪ್ಪು ನೀಡಿದ್ದರು.
ವಿಧಾನಸಭಾ ಚುನಾವಣೆಯಲ್ಲಿ ಜನ ಆ ಪಕ್ಷಕ್ಕೆ ಚಿಪ್ಪು ನೀಡಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿಯೂ ಬಿಜೆಪಿಗೆ ಜನ ಚಿಪ್ಪು ನೀಡುವುದು ಗ್ಯಾರಂಟಿ ಎಂದರು. 9 ವರ್ಷದ ಹಿಂದೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ವಿದೇಶದಿಂದ ಕಪ್ಪು ಹಣ ತರುತ್ತೇವೆ. ಉದ್ಯೋಗ ಸೃಷ್ಟಿಹಾಗೂ ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಸುಳ್ಳು ಆಶ್ವಾಸನೆ ನೀಡುತ್ತಾ ಜನತೆಗೆ ಮೋಸ ಮಾಡಿದ್ದಾರೆ. ದೇಶ ಹಾಳು ಮಾಡಲು ಬೇಕಾದ ಕೆಲಸವನ್ನು ಬಿಜೆಪಿ ಮಾಡಿದೆ ಎಂದು ವಾಗ್ದಾಳಿ ನಡೆಸಿದರು.
undefined
ರೈತರ ಆತ್ಮಹತ್ಯೆ ತಡೆಗೆ ಪ್ಯಾಕೇಜ್ ಘೋಷಿಸಿ: ದರ್ಶನ್ ಪುಟ್ಟಣ್ಣಯ್ಯ
ಕಾಂಗ್ರೆಸ್ ಪಕ್ಷ ಚುನಾವಣಾ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಐದು ಗ್ಯಾರಂಟಿಗಳನ್ನು ಜಾರಿಗೆ ತರುತ್ತಿದೆ. ಈಗಾಗಲೇ ಮೂರು ಗ್ಯಾರಂಟಿಗಳು ಜಾರಿಗೆ ಬಂದಿವೆ. ಮುಂದಿನ ತಿಂಗಳು ಪ್ರತಿ ಮಹಿಳೆಗೆ 2 ಸಾವಿರ ಹಣ ನೀಡುವ ಗೃಹ ಲಕ್ಷ್ಮೀ ಗ್ಯಾರಂಟಿ ಜಾರಿಗೆ ಬರಲಿದೆ. ಇದನ್ನು ಸಹಿಸಲು ಆಗದ ವಿಪಕ್ಷಗಳ ನಾಯಕರು ಬಾಯಿ ಚಪಲಕ್ಕೆ ಆರೋಪ ಮಾಡುತ್ತಿದ್ದಾರೆ. ರೈತರ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣದ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ.ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಏನೆಲ್ಲಾ ಕಾರ್ಯಕ್ರಮ ರೂಪಿಸಿದ್ದಾರೆ ಎಂಬುದು ಜನತೆಗೆ ಗೊತ್ತಿದೆ. ಯಾವುದೇ ವಿಚಾರ ಇಲ್ಲದ ಕಾರಣಕ್ಕಾಗಿ ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ ಎಂದರು.
ಮೋದಿ ಸಾಧನೆ ಪ್ರಸ್ತಾಪಿಸಿದ್ದಕ್ಕೆ ಸದನದಲ್ಲಿ ಗದ್ದಲ: ರಾಜ್ಯಪಾಲರ ಭಾಷಣ, ಬಜೆಟ್ ಮೇಲಿನ ಚರ್ಚೆಯ ವೇಳೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಏನೂ ಸಾಧನೆ ಮಾಡಿಲ್ಲ ಎಂಬ ಕಾಂಗ್ರೆಸ್‌ನ ವಿವಿಧ ಸದಸ್ಯರ ಆರೋಪ, ಟೀಕೆಗಳಿಗೆ ಪ್ರತ್ಯುತ್ತರವಾಗಿ ಮಂಗಳವಾರ ಬಿಜೆಪಿಯ ವೇದವ್ಯಾಸ ಕಾಮತ್ ಸದನದಲ್ಲಿ ಮೋದಿ ಸರ್ಕಾರ ಸಾಧನೆಗಳ ಪಟ್ಟಿಓದಲಾರಂಭಿಸಿದ್ದಕ್ಕೆ ಆಡಳಿತ ಪಕ್ಷದ ಸದಸ್ಯರಿಂದ ತೀವ್ರ ವಿರೋಧ ವ್ಯಕ್ತವಾಗಿ ಸದನಲ್ಲಿ ಉಭಯ ಪಕ್ಷಗಳ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು.
ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿದ ವೇದವ್ಯಾಸ ಕಾಮತ್, ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ 28 ಬಾರಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಟೀಕಿಸಿರುವುದು ದುರದೃಷ್ಟಕರ. ಮಾತೆತ್ತಿದರೆ ಕಾಂಗ್ರೆಸ್‌ನವರು ಮೋದಿ ಸರ್ಕಾರ ಏನೂ ಮಾಡಿಲ್ಲ ಎನ್ನುತ್ತಾರೆ. ಕಳೆದ 9 ವರ್ಷಗಳ ಆಡಳಿತದಲ್ಲಿ ಮೋದಿ ಸರ್ಕಾರ ಏನೇನು ಮಾಡಿದೆ ಎಂದು ಅಂಕಿ ಅಂಶಗಳ ಸಹಿತವಾಗಿ ಪಟ್ಟಿಮಾಡಿ ತಂದಿದ್ದೇನೆ. ಅದನ್ನು ಸದನದಲ್ಲಿ ತಿಳಿಸುತ್ತೇನೆ ಎಂದು ಪಟ್ಟಿಓದಲಾರಂಭಿಸಿದರು. ಮೋದಿ ಸರ್ಕಾರದ ಅಧಿಕಾರದಲ್ಲಿ ದೇಶದಲ್ಲಿ 26000 ಕಿ.ಮೀ. ಇದ್ದ ರಾಷ್ಟ್ರೀಯ ಹೆದ್ದಾರಿ 54,000 ಕಿ.ಮೀ.ಗೆ ಹೆಚ್ಚಾಗಿದೆ.
ಸಚಿವರ ಗೈರು: ಸ್ಪೀಕರ್ ಅಸಹಾಯಕತೆ ಅಣಕಿಸಿದ ಬಿಜೆಪಿ
3.8 ಲಕ್ಷ ಕಿ.ಮೀ ಇದ್ದ ಗ್ರಾಮೀಣ ರಸ್ತೆಗಳು 7.3 ಲಕ್ಷ ಕಿ.ಮೀ.ಗೆ, ಇತರೆ ರಸ್ತೆಗಳು 91 ಸಾವಿರ ಕಿ.ಮೀ.ನಿಂದ 1.9 ಲಕ್ಷ ಕಿ.ಮೀಟರ್‌ಗೆ, 5 ನಗರಗಳಲ್ಲಿದ್ದ ಮೆಟ್ರೋ 15 ನಗರಗಳಿಗೆ ವಿಸ್ತರಣೆಯಾಗಿದೆ. ಏರ್‌ಪೋರ್ಚ್‌ಗಳ ಸಂಖ್ಯೆ 74ರಿಂದ 148, ಐಐಟಿಗಳು 16ರಿಂದ 23ಕ್ಕೆ, ವೈದ್ಯಕೀಯ ಕಾಲೇಜುಗಳ ಸಂಖ್ಯೆ 64ರಿಂದ 1341ಕ್ಕೆ, ವಿಶ್ವವಿದ್ಯಾಲಯಗಳ ಸಂಖ್ಯೆ 720ರಿಂದ 1603ಕ್ಕೆ ಏರಿಕೆಯಾಗಿದೆ. 3.91 ಕೋಟಿ ಯಷ್ಟಿದ್ದ ಆದಾಯ ತೆರಿಗೆ ಮರುಪಾವತಿ ಈಗ 7.9 ಕೋಟಿಗಿಂತ ಹೆಚ್ಚಾಗಿದೆ. 87 ಲಕ್ಷ ಕೋಟಿಯಷ್ಟಿದ್ದ ಬ್ಯಾಂಕ್ ಠೇವಣಿಗಳು 185 ಲಕ್ಷ ಕೋಟಿಗೆ ಏರಿದೆ. 120 ಕೋಟಿಯಷ್ಟಿದ್ದ ಬ್ಯಾಂಕ್ ಖಾತೆಗಳು 300 ಕೋಟಿ ತಲುಪಿದೆ. ಯೂನಿಕಾರ್ನ್ 115ಕ್ಕೆ ಏರಿಕೆಯಾಗಿವೆ ಎಂದು ಸುದೀರ್ಘ ಪಟ್ಟಿಓದತೊಡಗಿದರು.