ಡಿಕೆಶಿ ಜೈಲಿಗೆ ಹೋಗ್ತಾರೆ ಎನ್ನಲು ಈಶ್ವರಪ್ಪ ಏನ್‌ ಜಡ್ಜಾ?: ಸಚಿವ ತಂಗಡಗಿ

By Kannadaprabha News  |  First Published Oct 24, 2023, 2:31 PM IST

ಕೆ.ಎಸ್‌. ಈಶ್ವರಪ್ಪ ಮೊದಲು ತಮ್ಮ ಭವಿಷ್ಯ ನೋಡಿಕೊಳ್ಳಲಿ. ಮತ್ತೊಬ್ಬರ ಭವಿಷ್ಯ ನಂತರ ಹೇಳಲಿ. ಈಶ್ವರಪ್ಪ ದೊಡ್ಡ ಸುಳ್ಳುಗಾರ. ಕ್ಷೇತ್ರಕ್ಕೆ ಬಂದಾಗಲೇ ತಮ್ಮ ಕಾರ್ಯಕರ್ತರಿಗೆ ಸುಳ್ಳು ಹೇಳಿ ರಾಜಕಾರಣ ಮಾಡಬೇಕು. ವೋಟು ಹಾಕಿಸಿಕೊಳ್ಳಬೇಕು ಎಂದು ಹೇಳಿದವ ಆತ, ಅವರಿಂದ ನಾವು ಕಲಿಯಬೇಕಿಲ್ಲ ಎಂದು ಏಕವಚನದಲ್ಲಿಯೇ ತಿರುಗೇಟು ನೀಡಿದ ಸಚಿವ ಶಿವರಾಜ ತಂಗಡಗಿ 


ಕಾರಟಗಿ(ಅ.24): ಡಿಸಿಎಂ ಡಿ.ಕೆ. ಶಿವಕುಮಾರ ಜೈಲಿಗೆ ಹೋಗುತ್ತಾರೆ ಎಂದು ಹೇಳಲು ಮಾಜಿ ಡಿಸಿಎಂ ಈಶ್ವರಪ್ಪ ಏನು ನ್ಯಾಯಾಧೀಶರಾ? ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಪ್ರಶ್ನಿಸಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ಕೆ.ಎಸ್‌. ಈಶ್ವರಪ್ಪ ಮೊದಲು ತಮ್ಮ ಭವಿಷ್ಯ ನೋಡಿಕೊಳ್ಳಲಿ. ಮತ್ತೊಬ್ಬರ ಭವಿಷ್ಯ ನಂತರ ಹೇಳಲಿ. ಈಶ್ವರಪ್ಪ ದೊಡ್ಡ ಸುಳ್ಳುಗಾರ. ಕ್ಷೇತ್ರಕ್ಕೆ ಬಂದಾಗಲೇ ತಮ್ಮ ಕಾರ್ಯಕರ್ತರಿಗೆ ಸುಳ್ಳು ಹೇಳಿ ರಾಜಕಾರಣ ಮಾಡಬೇಕು. ವೋಟು ಹಾಕಿಸಿಕೊಳ್ಳಬೇಕು ಎಂದು ಹೇಳಿದವ ಆತ, ಅವರಿಂದ ನಾವು ಕಲಿಯಬೇಕಿಲ್ಲ ಎಂದು ಏಕವಚನದಲ್ಲಿಯೇ ತಿರುಗೇಟು ನೀಡಿದರು. ಬಿಜೆಪಿ ಈಗ ಮುಳುಗುವ ಹಡಗು. ಬಿಜೆಪಿಗೆ ಕಾಂಗ್ರೆಸ್‌ ಎದುರಿಸುವ ಶಕ್ತಿ ಇಲ್ಲ ಎಂದರು.

Tap to resize

Latest Videos

undefined

ಕಾಂಗ್ರೆಸ್‌ ಸರ್ಕಾರ ಬೀಳುತ್ತದೆ ಎನ್ನುವುದು ಬಿಜೆಪಿ ಭ್ರಮೆ: ಜಗದೀಶ್ ಶೆಟ್ಟರ್ ತಿರುಗೇಟು

ಬಿಜೆಪಿಯಲ್ಲಿದ್ದವರು ನಮ್ಮ ಪಕ್ಷ ಸೇರುತ್ತಿದ್ದಾರೆ. ಹೀಗಾಗಿ ಬೇರೆ ಮೂಲದಿಂದ ನಮ್ಮನ್ನು ಕುಗ್ಗಿಸಲು ಬಿಜೆಪಿ ಕೇಂದ್ರ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ. ಹಿಂದೆ ನಮ್ಮ ಅಧ್ಯಕ್ಷರನ್ನು ಅರೆಸ್ಟ್ ಮಾಡಿಸಿದ್ದ ಬಿಜೆಪಿ 68 ಸ್ಥಾನಕ್ಕೆ ಬಂದಿತ್ತು. ಈಗ ಮತ್ತೆ ಮುಟ್ಟಿದರೆ 38ಕ್ಕೆ ಬರೋದು ಗ್ಯಾರಂಟಿ ಎಂದು ತಂಗಡಗಿ ವಾಗ್ದಾಳಿ ನಡೆಸಿದರು.

click me!