Latest Videos

ನರೇಂದ್ರ ಮೋದಿ ಅಹಂಕಾರದ ಕೊನೆ ಹಂತ ಇದು ಅದಕ್ಕೆ ಏನೇನೋ ಮಾತಾಡ್ತಾರೆ: ಶಿವರಾಜ ತಂಗಡಗಿ ವಾಗ್ದಾಳಿ

By Ravi JanekalFirst Published May 25, 2024, 5:15 PM IST
Highlights

ಲೋಕಸಭಾ ಚುನಾವಣೇಲಿ ಬಿಜೆಪಿ ಗೆದ್ದು ಮೋದಿ ಇನ್ನೊಮ್ಮೆ ಪ್ರಧಾನಿಯಾದ್ರೆ ತಮ್ಮ ದೇವಸ್ಥಾನ ತಾವೇ ಕಟ್ಕೊತಾರೆ ಎಂದು ಸಚಿವ ಶಿವರಾಜ ತಂಗಡಗಿ ಲೇವಡಿ ಮಾಡಿದರು.

ಕೊಪ್ಪಳ (ಮೇ.25): ಲೋಕಸಭಾ ಚುನಾವಣೇಲಿ ಬಿಜೆಪಿ ಗೆದ್ದು ಮೋದಿ ಇನ್ನೊಮ್ಮೆ ಪ್ರಧಾನಿಯಾದ್ರೆ ತಮ್ಮ ದೇವಸ್ಥಾನ ತಾವೇ ಕಟ್ಕೊತಾರೆ ಎಂದು ಸಚಿವ ಶಿವರಾಜ ತಂಗಡಗಿ ಲೇವಡಿ ಮಾಡಿದರು.

ಇಂದು ಕೊಪ್ಪಳದ ಕಾರಟಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಈಗ ರಾಮನ ದೇವಸ್ಥಾನ ಕಟ್ಟಿದ್ದಾಯ್ತು, ಇನ್ನು ನನ್ನದೇ ಒಂದು ದೇವಸ್ಥಾನ ಅಂತಾ ಕಟ್ಕೋತಾರೆ ಯಾಕಂದರೆ ಅವರ ಇತ್ತೀಚಿನ ಹೇಳಿಕೆಗಳೇ ಹಾಗೆ ಇವೆ. ದೇವರೇ ನನಗೆ ದೀಕ್ಷೆ ನೀಡಿ ಭೂಮಿಗೆ ಕಳಿಸಿದ್ದಾನೆ, ಜನರ ಸೇವೆ ಮಾಡೋಕೆ ಕಳಿಸಿದ್ದಾನೆ ಅಂತಾ ಹೇಳ್ತಾರೆ. ಅದಕ್ಕೆ ಮೋದಿ ಇನ್ನೊಮ್ಮೆ ಗೆದ್ದುಬಿಟ್ರೆ ಪ್ರತಿ ಊರಲ್ಲಿ ಮೋದಿಯವರ ದೇವಸ್ಥಾನ ಕಟ್ಟಿ ಅನ್ನೋ ಸ್ಥಿತಿ ಬರುತ್ತೆ ಎಂದು ವಾಗ್ದಾಳಿ ನಡೆಸಿದರು.

'ಧರ್ಮಯುದ್ಧ ಆರಂಭಿಸುವ ಮುನ್ನ ಮಂಜುನಾಥನ ದರ್ಶನ ಪಡೆದಿದ್ದೇನೆ: ಡಿಕೆ ಶಿವಕುಮಾರ

ಪೂರಿ ಜಗನ್ನಾಥನೇ ಮೋದಿಯವರ ಭಕ್ತ ಅಂತಾ ಯಾರೋ ಒಬ್ಬ ಬಹಿರಂಗವಾಗಿ ಹೇಳಿದ್ದಾನೆ. ಎಲ್ಲಿಗೆ ಬಂದು ನಿಂತಿದೆ ಇವರ ಸ್ಥಿತಿ. ನಾವು ಜನಪ್ರತಿನಿಧಿಗಳು ದೇವರಾಗೋಕಾಗತ್ತಾ? ಎಂದು ಪ್ರಶ್ನಿಸಿದರು ಮುಂದುವರಿದು, ಮೋದಿಯವರು ಸಬ್‌ ಕಾ ಸಾಥ್ ಅಂತಾರೆ ಆದರೆ ವೇದಿಕೆ ಮೇಲೆ ಹಿಂದೂತ್ವ ಅಂತಾರೆ. ಇಂತಹ ಮಾತುಗಳನ್ನ ಹಿಂದಿನ ಯಾವ ಪ್ರಧಾನಿಗಳು ಮಾತಾಡಿಲ್ಲ. ಇದು ನರೇಂದ್ರ ಮೋದಿ ಅಹಂಕಾರದ ಕೊನೆ ಹಂತ ಅದಕ್ಕೆ ಹಾಗೆ ಮಾತಾಡುತ್ತಿದ್ದಾರೆ ಎಂದು ಕಿಡಿಕಾರಿದರು.

click me!