Latest Videos

ಬಿಜೆಪಿಗೆ ಸುಳ್ಳೇ ಬಂಡವಾಳ, ಯಾಮಾರಿಸೋದರಲ್ಲಿ ನಿಸ್ಸೀಮರು: ಸಚಿವ ಬೈರತಿ ಸುರೇಶ್

By Kannadaprabha NewsFirst Published May 25, 2024, 4:25 PM IST
Highlights

ಬಿಜೆಪಿಯವರು ಸುಳ್ಳಿನ ಜೊತೆಗೆ ಮೋಸ ಮಾಡಿ ಯಾಮಾರಿಸೋದರಲ್ಲಿ ನಿಸ್ಸೀಮರು ಇನ್ನೂ ಜೆಡಿಎಸ್‌ನವರು ವೈಯಕ್ತಿಕ ವಿಚಾರದಲ್ಲಿ ಮುಳಗಿದ್ದಾರೆ ಅವರ ಬಗ್ಗೆ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಸುರೇಶ್ ತಿಳಿಸಿದರು. 
 

ಕೋಲಾರ (ಮೇ.25): ಬಿಜೆಪಿಯವರು ಸುಳ್ಳಿನ ಜೊತೆಗೆ ಮೋಸ ಮಾಡಿ ಯಾಮಾರಿಸೋದರಲ್ಲಿ ನಿಸ್ಸೀಮರು ಇನ್ನೂ ಜೆಡಿಎಸ್‌ನವರು ವೈಯಕ್ತಿಕ ವಿಚಾರದಲ್ಲಿ ಮುಳಗಿದ್ದಾರೆ ಅವರ ಬಗ್ಗೆ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಸುರೇಶ್ ತಿಳಿಸಿದರು. ನಗರದ ಹೊರವಲಯದ ಆರಾಧ್ಯ ಹೋಟೆಲ್‌ನಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದರು. 

ಲೋಕಸಭೆ ಚುನಾವಣೆಯಲ್ಲಿ ಜಿಲ್ಲೆಯ ಸ್ಥಳೀಯ ಶಾಸಕರು ಹಾಗೂ ಕಾರ್ಯಕರ್ತರು ಹೆಚ್ಚು ದುಡಿದಿದ್ದಾರೆ ಅವರ ಶ್ರಮದಿಂದ ಕಾಂಗ್ರೆಸ್ ಗೆಲ್ಲಲಿದೆ, ಪೊಲೀಸ್ ವರದಿ ಕೂಡ ಅದನ್ನೇ ಹೇಳಿದೆ, ನಾವು ಈ ಚುನಾವಣೆಯನ್ನು ಸಹ ಅದೇ ರೀತಿಯಲ್ಲಿ ಎದುರಿಸುತ್ತೇವೆ ಎಂದರು. ಸಚಿವ ಡಾ.ಎಂ.ಸಿ.ಸುಧಾಕರ್ ತಮ್ಮ ಮಗನ ಶಿಕ್ಷಣದ ಕೆಲಸದ ಮೇಲೆ ಅಮೇರಿಕಾಕ್ಕೆ ಹೋಗಿದ್ದಾರೆ ಅವರನ್ನು ಬೇಗನೇ ಬರಲು ಹೇಳಿದ್ದೇನೆ ಆದರೆ, ಬಿಜೆಪಿ ಅಪಪ್ರಚಾರ ಮಾಡುತ್ತಿದೆ, ಅವರಿಗೆ ಬೇರೆ ಕೆಲಸ ಇಲ್ಲ ದುಡ್ಡು ಕಾಸಿನಿಂದ ಚುನಾವಣೆ ನಡೆಯಲ್ಲ, ಕಾರ್ಯಕರ್ತರ ಶ್ರಮದಿಂದ ಚುನಾವಣೆ ಎದುರಿಸೋಣ. 

ಡಿ.ಟಿ.ಶ್ರೀನಿವಾಸ್ ಬಹು ವರ್ಷಗಳ ಸ್ನೇಹಿತ ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಅವರ ಗೆಲುವಿಗೆ ನಾವೆಲ್ಲರೂ ಒಗ್ಗಟ್ಟಿನಿಂದ ಸಹಕರಿಸಬೇಕು ಎಂದು ಹೇಳಿದರು. ಮಾಲೂರು ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ, ಬಿಜೆಪಿ ಸರಕಾರದ ಧೋರಣೆಗಳ ವಿರುದ್ದ ಮೇಲ್ಮನೆಯಲ್ಲಿ ಕಾಂಗ್ರೆಸ್ ಬಹುಮತ ಪಡೆಯಬೇಕಾಗಿದೆ, ಜಿಲ್ಲೆಯ ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತನು ಕೂಡ ಒಗ್ಗಟ್ಟಿನಿಂದ ಚುನಾವಣೆ ಎದುರಿಸಿ ಅಭ್ಯರ್ಥಿ ಗೆಲುವಿಗೆ ಸಹಕರಿಸಬೇಕು ಎಂದರು.

ಲೋಕಸಭೆಯಲ್ಲಿ ರಾಹುಲ್ ಗಾಂಧಿಯನ್ನು ಕಾಂಗ್ರೆಸ್ ನಾಯಕರೇ ಸೋಲಿಸುತ್ತಾರೆ: ಪ್ರಲ್ಹಾದ್‌ ಜೋಶಿ

ಶಾಸಕ ಕೊತ್ತೂರು ಜಿ.ಮಂಜುನಾಥ್, ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿದರು. ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್, ಆಗ್ನೇಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್, ಮಾಜಿ ಶಾಸಕ ಕೆಪಿಸಿಸಿ ಉಸ್ತುವಾರಿ ವೆಂಕಟರಮಣಪ್ಪ, ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹರ್ಷದ್ ಉಲ್ಲಾ ಖಾನ್, ಶ್ರೀಧರ್, ಕಾರ್ಯದರ್ಶಿ ಕಾರ್ತಿಕ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮೀನಾರಾಯಣ, ಮುಖಂಡರಾದ ಆದಿನಾರಾಯಣ, ರತ್ನಮ್ಮ, ಜಯದೇವ್, ಇದ್ದರು.

click me!