ಮಕ್ಕಳ ಆರೋಗ್ಯ ಕಾಳಜಿವಹಿಸಿದ ಸಚಿವೆ ಶಶಿಕಲಾ ಜೊಲ್ಲೆ

By Suvarna NewsFirst Published Jan 8, 2021, 8:57 PM IST
Highlights

ಕೊರೋನಾ ಭೀತಿಯ ಮಧ್ಯೆ ಶಾಲಾ-ಕಾಲೇಜುಗಳು ಆರಂಭವಾಗಿವೆ. ಈ ಹಿನ್ನೆಯಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಶಾಲೆ-ಕಾಲೇಜುಗಳಿಗೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಇತ್ತ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರು ಸಹ ಕಾರ್ಯಪ್ರವೃತರಾಗಿದ್ದು, ಮಕ್ಕಳ ಆರೋಗ್ಯ ಕಾಳಜಿವಹಿಸಿದರು.

ಬೆಂಗಳೂರು, (ಜ.08): ಕೋವಿಡ್-19 ಹಿನ್ನಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಬಂದ್ ಆಗಿದ್ದ ಶಾಲಾ-ಕಾಲೇಜುಗಳು ಪುನಾರಾರಂಭಗೊಂಡಿವೆ.

ಈ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರು, ಇಂದು (ಶುಕ್ರವಾರ)  ಬೆಂಗಳೂರಿನ ಲಿಂಗರಾಜಪುರಂನಲ್ಲಿರುವ, ಡಾ. ಎಸ್.ಆರ್ ಚಂದ್ರಶೇಖರ್ ವಾಕ್ ಮತ್ತು ಶ್ರವಣ ಸಂಸ್ಥೆಗೆ ಭೇಟಿ ನೀಡದರು.

ನಿಮ್ಗೆ ಕೊರೋನಾ ಲಸಿಕೆ ಬೇಕಾ? ಇದಕ್ಕೆ ಏನ್ಮಾಡ್ಬೇಕು? ಇಲ್ಲಿದೆ ಸಂಪೂರ್ಣ ಡಿಟೇಲ್ಸ್..!

 ಸಂಸ್ಥೆಯ ಮೂಲಸೌಕರ್ಯ ವ್ಯವಸ್ಥೆಯನ್ನು ಪರಿಶೀಲಿಸಿ, ಸಿಬ್ಬಂದಿ ವರ್ಗದ ಜತೆ ಸಮಾಲೋಚನೆ ನಡೆಸಿದರು. ನಂತರ ಮಕ್ಕಳ ಶೈಕ್ಷಣಿಕ ಚಟುವಟಿಕೆ ಹಾಗೂ ಅವರು ತಯಾರಿಸಿದ ಕರಕುಶಲ ವಸ್ತುಗಳನ್ನು ವೀಕ್ಷಿಸಿ, ಅವರ ಪ್ರತಿಭೆ ಉತ್ತುಂಗದ ಶಿಖರಕ್ಕೇರಲಿ ಎಂದು ಹಾರೈಸಿದರು.

ಈ ವೇಳೆ ಮಕ್ಕಳೊಂದಿಗೆ ಮಾತನಾಡಿ,  ಕೋವಿಡ್‌ನಿಂದ ರಕ್ಷಿಸಿಕೊಳ್ಳಲು ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ ಧರಿಸುವ   ಬಗ್ಗೆ ತಿಳಿಸಿದರು. ನಂತರ ಶಾಲೆಯಲ್ಲಿ ಕೈಗೊಂಡಿರುವ ಸಿದ್ಧತೆಗಳ ಬಗ್ಗೆ ಆಡಳಿತ ಮಂಡಳಿಯ ಸದಸ್ಯರೊಂದಿಗೆ ಚರ್ಚಿಸಿದರು.

ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಶ್ರೀಮತಿ ಪದ್ಮಪ್ರಭಾ, ಆಡಳಿತಾಧಿಕಾರಿ ಜಯರಾಮ್ ಹಾಗೂ ಸಂಸ್ಥೆಯ ಸಿಬ್ಬಂದಿ ಉಪಸ್ಥಿತರಿದ್ದರು.

click me!