ಕಾಂಗ್ರೆಸ್‌ನಲ್ಲಿ ಗೊಂದಲ ಇದೆಯಾ?: ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಿಷ್ಟು

Published : Jan 07, 2025, 12:49 PM IST
ಕಾಂಗ್ರೆಸ್‌ನಲ್ಲಿ ಗೊಂದಲ ಇದೆಯಾ?: ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಿಷ್ಟು

ಸಾರಾಂಶ

ಬೆಂಗಳೂರಿನಲ್ಲಿ ಸಿಎಂ ಅವರಿಗೆ ಕೇಳೋದಕ್ಕೆ ನಿಮ್ಮವರಿಗೆ ಹೇಳಿ, ಅವರೇ ಉತ್ತರ ಕೊಡುತ್ತಾರೆ ಎಂದರು. ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ, ಎಲ್ಲವೂ ಸರಿಯಿದೆ. ಇನ್ನು, ದೆಹಲಿಯಲ್ಲಿ ಡಿಸಿಎಂ ಡಿಕೆಶಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಅವರು ಪಕ್ಷದ ಅಧ್ಯಕ್ಷರು, ಪತ್ರಿಕಾಗೋಷ್ಠಿ ನಡೆಸಿದರೆ ತಪ್ಪೇನು ಎಂದು ಪ್ರಶ್ನಿಸಿದ ಸಚಿವ ಸತೀಶ್ ಜಾರಕಿಹೊಳಿ

ಯಾದಗಿರಿ(ಜ.07):  ಕಾಂಗ್ರೆಸ್‌ನಲ್ಲಿ ಯಾವುದೇ ಗೊಂದಲವಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ. ಸೋಮವಾರ ಯಾದಗಿರಿ ಜಿಲ್ಲೆ ಸೈದಾಪುರ ಕ್ರಾಸ್ ಬಳಿ ಮಹರ್ಷಿ ವಾಲ್ಮೀಕಿ ವೃತ್ತ ಅನಾವರಣಕ್ಕೆಂದು ಆಗಮಿಸಿದ್ದ ಅವರು, ತಮ್ಮನ್ನು ಭೇಟಿಯಾದ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. 

ಮೇಲಿನಂತೆ ಗ್ಯಾರಂಟಿ ವಿಶ್ಲೇಷಣೆಗೆ ಹೈಕಮಾಂಡ್ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗೆ ದೆಹಲಿಗೆ ಕರೆದಿರುವ ವಿಚಾರ ಕುರಿತೂ ಪ್ರತಿಕ್ರಿಯಿಸಿದ ಸಚಿವರು, 'ನೀವು (ಮಾಧ್ಯಮದವರು) ಈ ಪ್ರಶ್ನೆ ನನಗೆ ಕೇಳಬೇಕಿಲ್ಲ. ಯಾರು ಹೋಗಿದ್ದಾರೋ, ಬಿಟ್ಟಿದಾರೋ ನನಗೆ ಗೊತ್ತಿಲ್ಲ. ಪ್ರಶ್ನೆ ಕೇಳಬೇಕಾಗಿರೋದು ನನಗಲ್ಲ, ಸಿಎಂಗೆ ಕೇಳಿ, ಇದನ್ನ ನೀವು ಸಿಎಂಗೆ ಕೇಳಬೇಕು' ಎಂದು ಹೇಳಿದರು. 

ಉತ್ತರ ಕರ್ನಾಟಕದವರು ಮುಖ್ಯಮಂತ್ರಿ ಆಗ್ಬೇಕು, ಜಾರಕಿಹೊಳಿ ಸಿಎಂ ಆದ್ರೆ ಸ್ವಾಗತ, ಜೆಡಿಎಸ್‌ ಶಾಸಕ ಕಂದಕೂರ

ನನಗೆ ನಮ್ಮ ಇಲಾಖೆ ಡೆವಲಪ್ಟೆಂಟ್ ಬಗ್ಗೆ ಕೇಳಿದರೆ ಹೇಳಬಹುದು ಎಂದ ಅವರು, ಬೆಂಗಳೂರಿನಲ್ಲಿ ಸಿಎಂ ಅವರಿಗೆ ಕೇಳೋದಕ್ಕೆ ನಿಮ್ಮವರಿಗೆ ಹೇಳಿ, ಅವರೇ ಉತ್ತರ ಕೊಡುತ್ತಾರೆ ಎಂದರು. ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ, ಎಲ್ಲವೂ ಸರಿಯಿದೆ. ಇನ್ನು, ದೆಹಲಿಯಲ್ಲಿ ಡಿಸಿಎಂ ಡಿಕೆಶಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಅವರು ಪಕ್ಷದ ಅಧ್ಯಕ್ಷರು, ಪತ್ರಿಕಾಗೋಷ್ಠಿ ನಡೆಸಿದರೆ ತಪ್ಪೇನು ಎಂದು ಪ್ರಶ್ನಿಸಿದರು.

ಪ್ರಿಯಾಂಕ್ ಯಾಕೆ ರಾಜೀನಾಮೆ ನೀಡಬೇಕು?

ಯಾದಗಿರಿ:  ಬೀದರ್‌ನ ಸಚಿನ್ ಪಂಚಾಳ್ ಆತ್ಮಹತ್ಯೆ ಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಕೈವಾಡವಿದೆ ಎಂದು ಆರೋಪಿಸಿ, ಸಚಿವ ಖರ್ಗೆ ರಾಜೀ ನಾಮೆ ನೀಡಬೇಕು ಎಂದು ಆಗ್ರಹಿಸಿ ಪ್ರತಿಭ ಟ ನೆಗಿಳಿದಿರುವ ಬಿಜೆಪಿ ವಿರುದ್ದ ಸಚಿವ ಸತೀ ಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ. 

ಸೋಮವಾರ ಸಂಜೆ, ಯಾದಗಿರಿಯಲ್ಲಿ ಸಭೆ ನಂತರ ಮಾಧ್ಯಮಗಳೊಂದಿಗೆ ಮಾತನಾ ಡುತ್ತಿದ್ದ ಅವರು, ಸಚಿವ ಖರ್ಗೆ ಏಕೆ ರಾಜೀ ನಾಮೆ ನೀಡಬೇಕು? ಅವರ ಮೇಲೆ ಆರೋಪ ಸಾಬೀತಾಗಿದೆಯೇ? ಡೆತ್‌ ನೋಟಿನಲ್ಲಿ ಅವ ರ ಹೆಸರು ಇದೆಯೇ? ಎಂದು ಪ್ರಶ್ನಿಸಿದರು. 

ಪ್ರಿಯಾಂಕ್ ಖರ್ಗೆಯವರ ಆಪ್ತ ಎಂದು ಡೆತ್‌ನೋಟಿನಲ್ಲಿ ಹೆಸರಿದೆ, ತನಿಖೆ ನಡೆ ಯು ತ್ತಿದೆ. ಸತ್ಯಾಸತ್ಯತೆ ಹೊರಬರುತ್ತದೆ. ತನಿಖೆ ಆದ್ದೇಲೆ ಸತ್ಯಾಸತ್ಯತೆ ಬರುತ್ತದೆ. ಬಿಜೆಪಿಯ ವರಿಗೆ ಮಾಡಲು ಬೇರೆ ಕೆಲಸಗಳಿಲ್ಲ. ಅದಕ್ಕೆ ಅನಾವಶ್ಯಕ ವಿವಾದಕ್ಕಿಳಿದಿದ್ದಾರೆ ಎಂದರು. 

ಈಶ್ವರಪ್ಪ ಪ್ರಕರಣದಲ್ಲಿ ಸಂತೋಷ ಪಾಟೀಲ್‌ ನೇರವಾಗಿ ಈಶ್ವರಪ್ಪ ಅವರ ಹೆಸರು ಬರೆದಿಟ್ಟು ಸತ್ತಿದ್ದರು. ಇಲ್ಲಿ ಪ್ರಿಯಾಂಕ್ ಖರ್ಗೆ ಆಪ್ತನ ಹೆಸರು ಬರೆದಿದ್ದಾರೆ. ಪ್ರಿಯಾಂಕ್ ಖರ್ಗೆ ಹೆಸರಿಲ್ಲ ಎಂದ ಸಚಿವ ಜಾರಕಿಹೊಳಿ, ಸಿಬಿಐಗೆ ಕೊಟ್ಟಾಗ ಅದು ಸರಿಯಿಲ್ಲ, ಸಿಐಡಿಗೆ ಕೊಟ್ಟಾಗ ಇದು ಸರಿಯಿಲ್ಲ ಅಂತ ಬಿಜೆಪಿಯ ವರು ವೃಥಾ ಆರೋಪ ಮಾಡುತ್ತಾರೆ. ಬಿಜೆಪಿ ಅವರನ್ನು ಕೇಳಿಕೊಂಡು ನಾವು ಸರ್ಕಾರ ನಡೆಸೋಕೆ ಆಗಲ್ಲ ಎಂದು ಟೀಕಿಸಿದರು. 

60% ಕಮೀಷನ್ ಆರೋಪಿಸಿರುವ ಪ್ರತಿಪಕ್ಷ ಗಳ ಕುರಿತ ಮಾತನಾಡಿದ ಸಚಿವ ಜಾರಕಿಹೊಳಿ, ಆರೋಪ ಮಾಡೋಕೆ ಅಧಿಕೃತವಾಗಿ ಬೇಕಲ್ಲ, ಆರೋಪ ಮಾಡಲು ಅಧಿಕೃತ ಅಧಿಕಾರಿ, ಗುತ್ತಿಗೆದಾರರು, ಅಸೋಶಿಯೇಷನ್ ಬೇಕು. ಮುಂಜಾನೆ ನಾವು ಹತ್ತು ಹೇಳ್ತಿವಿ, ನಾವು ಹತ್ತು ಆರೋಪ ಮಾಡ್ತೀವಿ ಎಂದರು.

ಊಟಕ್ಕೆ ಸೇರಿದರೆ ಅದರಲ್ಲಿ ರಾಜಕೀಯ ಯಾಕೆ ಬೆರೆಸುತ್ತೀರಿ: ಡಿ.ಕೆ. ಶಿವಕುಮಾರ್

ಕೆಪಿಸಿಸಿ ಅಧ್ಯಕ್ಷ ಸ್ಥಾನ ಒಕ್ಕಲಿಗರಿಗೆ ಆದ್ರೂ, ಲಿಂಗಾಯತರಿಗಾದ್ರೂ ಕೊಡಲಿ

ಯಾದಗಿರಿ: ಕೆಪಿಸಿಸಿ ಅಧ್ಯಕ್ಷಸ್ಥಾನದಿಂದ ಡಿಕೆಶಿ ಕೆಳಗಿಳಿದರೆ ಒಕ್ಕಲಿಗರಿಗೆ ನೀಡಬೇಕೆಂಬ ಪ್ಲಾನ್ ವಿಚಾರವಾಗಿ ನಡೆದಿರುವ ಚರ್ಚೆಗಳ ಕುರಿತು ಮಾತನಾಡಿರುವ ಸಚಿವ ಸತೀಶ್ ಜಾರಕಿಹೊಳಿ, ಒಕ್ಕಲಿಗರಿಗಾದರೂ ಮಾಡಲಿ, ಲಿಂಗಾಯತರಿಗಾದರೂ ಮಾಡಲಿ ಯಾರಿಗಾದರೂ ಮಾಡಲಿ ನಮಗೆ ಸಂಬಂಧವಿಲ್ಲ. ಸಿಎಂ, ಕೆಪಿಸಿಸಿ ಅಧ್ಯಕ್ಷ ಬದಲಾವಣೆ ಆಗಬೇಕು ಎಂಬ ಪರಿಸ್ಥಿತಿ ಇನ್ನೂ ನಿರ್ಮಾಣವಾಗಿಲ್ಲ ಎಂದರು. 

ಕೆಪಿಸಿಸಿ ಅಧ್ಯಕ್ಷ ಸ್ಥಾನ ನಮಗೆ ಬೇಕು ಅಂತ ಎಲ್ಲಿಯಾದರೂ ನಾನು ಹೇಳಿದ್ದೀನಾ ಎಂದು ಪ್ರಶ್ನಿಸಿದ ಜಾರಕಿಹೊಳಿ, ನಮಗೆ ಬೇಕೇ ಬೇಕು ಅಂತ ಎಲ್ಲಿಯೂ ಹೇಳಿಲ್ಲ. ನಮಗೆ ಇದೇ ಇಲಾಖೆಯಲ್ಲಿ (ಪಿಡಬ್ಲ್ಯುಡಿ) ಕೆಲಸ ಮಾಡುವುದು ಬಹಳಷ್ಟಿದೆ ಎಂದು. ಇನ್ನು, ಸತೀಶ್ ಜಾರಕಿಹೊಳಿ ಮುಂದಿನ ಸಿಎಂ ಎಂದು ಕಾರ್ಯಕರ್ತರು ಘೋಷಣೆ ಕೂಗಿದರೆ ಆಗಲ್ಲ, ಶಾಸಕರಿಂದ ಮುಖ್ಯಮಂತ್ರಿ ಆಗ್ತಾರೆ, ಕಾರ್ಯಕರ್ತರಿಂದ ಸರ್ಕಾರ ಆಗುತ್ತದೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
'ಅಹಿಂದ ಕಿಂಗ್ ಸಿದ್ದರಾಮಯ್ಯ' ಜೀವಂತ ಇರುವಾಗಲೇ ಪರ್ಯಾಯ ನಾಯಕತ್ವದ ಕೂಗು ಏಕೆ?: ಬೈರತಿ ಸುರೇಶ್