ಅನಿಲ ಬೆನಕೆ ಕೆಲಸ ಮಾಡಿದ್ದು ಎಲ್ಲಿ?: ಕಸಾಯಿ ಖಾನೆ ಹೇಳಿಕೆಗೆ ಸಚಿವ ಸತೀಶ ಜಾರಕಿಹೊಳಿ ತಿರುಗೇಟು

By Kannadaprabha News  |  First Published Jun 20, 2024, 11:43 PM IST

ಬೆಳಗಾವಿಯನ್ನು ಕಸಾಯಿ ಖಾನೆ ಮಾಡಿದ್ದೆ ಬಿಜೆಪಿ ಎಂದಿರುವ ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನಿಲ್ ಬೆನಕೆ ಎಲ್ಲಿ ಕೆಲಸ ಮಾಡಿದ್ದಾರೆ? ಅವರ ಅಧಿಕಾರದಲ್ಲಿ ಒಮ್ಮೆಯೂ ಹೊರಗಡೆ ಬಂದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ. 
 


ಬೆಳಗಾವಿ (ಜೂ.20): ಬೆಳಗಾವಿಯನ್ನು ಕಸಾಯಿ ಖಾನೆ ಮಾಡಿದ್ದೆ ಬಿಜೆಪಿ ಎಂದಿರುವ ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನಿಲ್ ಬೆನಕೆ ಎಲ್ಲಿ ಕೆಲಸ ಮಾಡಿದ್ದಾರೆ? ಅವರ ಅಧಿಕಾರದಲ್ಲಿ ಒಮ್ಮೆಯೂ ಹೊರಗಡೆ ಬಂದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೆಟ್ರೋಲ್ ಬೆಲೆ ಏರಿಕೆ ಮಾಡಿದ್ದು ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಕಡಿಮೆಯೇ ಇದೆ. ಈ ಹಿಂದೆ ಸಿಲಿಂಡರ್ ಬೆಲೆ ಏರಿಕೆ ಮಾಡಿದಾಗ ಬಿಜೆಪಿಯವರು ಏಕೆ ಪ್ರಶ್ನೆ‌ ಮಾಡಲಿಲ್ಲ ಎಂದು ಪ್ರಶ್ನಿಸಿದರು.

ಸಾಂಗ್ಲಿಯಲ್ಲಿ ಕನ್ನಡ ಶಾಲೆಗಳಿಗೆ ಮರಾಠಿ ಶಿಕ್ಷಕರ ನೇಮಕ ಮಾಡುತ್ತಿರುವ ಕುರಿತಾದ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಸಾಂಗ್ಲಿಯಲ್ಲಿ ಕನ್ನಡ ಶಿಕ್ಷಕರು ಯಾರೂ ಹೋಗುತ್ತಿಲ್ಲ. ಕನ್ನಡ ಶಿಕ್ಷಕರು ಉತ್ಪತ್ತಿ ಮಾಡುವುದನ್ನು ಮೊದಲೇ ಬಂದು ಮಾಡಿದ್ದಾರೆ. ಮಹಾರಾಷ್ಟ್ರ ಸರ್ಕಾರ. ಅಲ್ಲಿನ ಕನ್ನಡ ಶಾಲೆಯ ಮಕ್ಕಳು ಮರಾಠಿ ಕಲಿಯುವುದು ಅನಿವಾರ್ಯವಾಗಿದೆ ಎಂದು ಹೇಳಿದರು. ಖಾಸಬಾಗನಲ್ಲಿ ನಿರ್ಮಾಣ ಮಾಡಿರುವ ತರಕಾರಿ ಮಳೆಗೆಗಳು ಇಲ್ಲಿಯವರೆಗೂ ಹಂಚಿಕೆಯಾಗಿಲ್ಲ. ಅದು ಈಗ ಕಸಾಯಿ ಖಾನೆಯಾಗಿದೆ. ಅದರ ಬಗ್ಗೆ ಮಾತನಾಡಿದರೆ ದೊಡ್ಡ ಸಮಾವೇಶ ಮಾಡುತ್ತಾರೆ ಎಂದು ಲೇವಡಿ ಮಾಡಿದರು. 

Latest Videos

undefined

ಸಿದ್ದುಗೆ ವಯಸ್ಸಾಗಿದೆ, ಡಿಕೆಶಿಗೆ ಸಿಎಂ ಸ್ಥಾನ ಬಿಟ್ಟುಕೊಡಲಿ: ಶಾಸಕ ಪ್ರಭು ಚವ್ಹಾಣ್‌

ಸವದತ್ತಿ ಯಲ್ಲಮ್ಮನ ದೇವಸ್ಥಾನ ಅಭಿವೃದ್ಧಿಗೆ ₹ 120 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು. ನಗರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಫ್ಲೈ ಓವರ್ ನಿರ್ಮಾಣದ ನೀಲನಕ್ಷೆಯನ್ನು ಕಳುಹಿಸಲಾಗಿದೆ. ಅದು ಶೀಘ್ರದಲ್ಲೇ ಪ್ರಾರಂಭವಾಗುವುದು ಎಂದು ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ವಿನಯ ಕುಲಕರ್ಣಿ ಅವರಿಗೆ ಸಚಿವ ಸ್ಥಾನ ಸಿಗಬಹುದು. ನಮ್ಮ ಸರ್ಕಾರ ಇನ್ನೂ ನಾಲ್ಕು ವರ್ಷ ಇದೆ. ಸಾಕಷ್ಟು ಜನರಿಗೆ ಅವಕಾಶ ಸಿಗಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಕಸಾಯಿಖಾನೆ ರೀತಿ ಆಡಳಿತ ನಡೆಸುತ್ತಿದೆ ಕಾಂಗ್ರೆಸ್‌: ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಗಾಗಿ ಸರ್ಕಾರ ಬೆಲೆ ಏರಿಕೆ ಧೋರಣೆ ಅನುಸರಿಸುವುದರ ಜೊತೆಗೆ ಕಾಂಗ್ರೆಸ್‌ ಕಸಾಯಿಖಾನೆಯಂತೆ ಸರ್ಕಾರ ನಡೆಸುತ್ತಿದೆ. ಹಣಕ್ಕಾಗಿ ಕರ್ನಾಟಕವನ್ನು ಹರಾಜಿಗಿಟ್ಟಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನಿಲ ಬೆನಕೆ ಕಿಡಿಕಾರಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳಿಗಾಗಿ ಸರ್ಕಾರ ರಾಜ್ಯದ ಬಡವರನ್ನು ಮತ್ತು ಮಧ್ಯಮ ವರ್ಗದ ಜನರ ಕುತ್ತಿಗೆ ಮೇಲೆ ಕುಳಿತಿದೆ. ಗ್ಯಾರಂಟಿ ಯೋಜನೆಗಳಿಗಾಗಿ ಹಣ ಹೊಂದಿಸಲು ಸರ್ಕಾರ ಬೆಲೆ ಏರಿಕೆಯಂತಹ ಧೋರಣೆ ಅನುಸರಿಸುತ್ತದೆ ಎಂಬುವುದನ್ನು ಯಾರೂ ಊಹಿಸಿರಲಿಲ್ಲ.

ಕಾಂಗ್ರೆಸ್ ಕಸಾಯಿಖಾನೆಯಂತೆ ಸರ್ಕಾರವನ್ನು ನಡೆಸುತ್ತಿದೆ ಎಂದು ದೂರಿದರು.ನೋಂದಣಿ ಕ್ರಯ-ವಿಕ್ರಮ, ಅಡುಗೆ ಅನಿಲ, ತೈಲ ಬೆಲೆ ಏರಿಕೆಗಳನ್ನು ಮಾಡಿ ಜನ ಸಾಮಾನ್ಯರ ಮನೆಯ ಬಜೆಟ್‌ ಅನ್ನೇ ಅಲುಗಾಡಿಸುತ್ತಿದೆ. ಹಿಂದಿನ ಬಿಜೆಪಿ ಸರ್ಕಾರ ಎಲ್ಲ ರೀತಿಯ ಅಭಿವೃದ್ಧಿಗೆ ನೀಡಿದ ಅನುದಾನ ಕೂಡ ಕಸಿದುಕೊಂಡಿದೆ. ಬೆಲೆ ಏರಿಕೆಯನ್ನು ತಕ್ಷಣವೇ ಹಿಂಪಡೆದು ರಾಜ್ಯದ ಜನರ ಹಿತ ಕಾಪಾಡದಿದ್ದರೆ ಬಿಜೆಪಿಯಿಂದ ತೀವ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ರಸ್ತೆ ಗುಂಡಿ ದೂರು ಸಲ್ಲಿಸಲು ‘ಪೇಸ್‌ ಆ್ಯಪ್‌’: ಬಿಬಿಎಂಪಿಯಿಂದ ಅಭಿವೃದ್ಧಿ

ಶಾಸಕ ಅಭಯ ಪಾಟೀಲ ಮಾತನಾಡಿ, ಈ ಹಿಂದೆ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದ ಆಡಳಿತಾವಧಿಯಲ್ಲಿ ಬೆಳಗಾವಿ ದಕ್ಷಿಣ ಕ್ಷೇತ್ರದ ಅಭಿವೃದ್ಧಿಗೆ ಸುಮಾರು ₹300 ಕೋಟಿ ಟೆಂಡರ್ ಕರೆಯಲಾಗಿತ್ತು. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಟೆಂಡರ್‌ ಅನ್ನು ರದ್ಧುಗೊಳಿಸಲಾಗಿದೆ. ಗುತ್ತಿಗೆದಾರರು ಆರ್ಥಿಕ ಸಂಕಷ್ಟ ಅನುಭವಿಸಿ ಆತ್ಮಹತ್ಯೆಯ ಯತ್ನಗಳಿಗೆ ಮುಂದಾಗುತ್ತಿದ್ದಾರೆ. ಎಲ್ಲಿ ಬಿಜೆಪಿ ಶಾಸಕರಿದ್ದಾರೋ ಅಲ್ಲಿ ಕಾಂಗ್ರೆಸ್ ಸರ್ಕಾರ ಅನುದಾನ ಕಡಿತಗೊಳಿಸಿದೆ. ಸಿದ್ಧರಾಮಯ್ಯ ಮುಖ್ಯಮಂತ್ರಿ ಸ್ಥಾನದ ಅನುಭವ ಉಳ್ಳವರು. ಆದರೂ ಈ ಬಾರಿ ಆಡಳಿತವನ್ನು ಸಮರ್ಪಕವಾಗಿ ನಡೆಸುವಲ್ಲಿ ಎಡವಿದ್ದಾರೆ ಎಂದು ಆರೋಪಿಸಿದರು.

click me!