ಗ್ಯಾರಂಟಿ ಯೋಜನೆ ಸ್ಥಗಿತಗೊಳಿಸಲು ನಾನೇ ಹೇಳಿದ್ದೇನೆಂದು ಸುದ್ದಿ ಬರುತ್ತಿವೆ. ಈ ವಿಚಾರದಲ್ಲಿ ನನ್ನ ಹೆಸರು ಪದೆ ಪದೇ ಮುನ್ನೆಲೆಗೆ ಬರುತ್ತಿದೆ. ಜನರ ಅಭಿಪ್ರಾಯದ ಮೇರೆಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ. ಜನರು ಗ್ಯಾರಂಟಿ ಇರಲಿ ಅಂದ್ರೆ ಅವು ಮುಂದುವರೆಯುತ್ತವೆ. ಜನರೇ ಬೇಡ ಅಂದ್ರೆ ಈ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದ ಸಚಿವ ಸತೀಶ ಜಾರಕಿಹೊಳಿ
ಬೆಳಗಾವಿ(ಆ.15): ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸುವ ಚಿಂತನೆಯಿಲ್ಲ. ಆದರೆ ಜನರ ಅಭಿಪ್ರಾಯ ಏನಿದೆ ನೋಡಬೇಕು. ಗ್ಯಾರಂಟಿ ಯೋಜನೆ ನಿಲ್ಲಿಸುವ ಚಿಂತನೆ ಸರ್ಕಾರದ ಮುಂದಿಲ್ಲ. ಆದರೆ ಗ್ಯಾರಂಟಿ ಯೋಜನೆ ಸ್ಥಗಿತಗೊಳಿಸಲು ನಾನೇ ಹೇಳಿದ್ದೇನೆಂದು ಸುದ್ದಿ ಬರುತ್ತಿವೆ. ಈ ವಿಚಾರದಲ್ಲಿ ನನ್ನ ಹೆಸರು ಪದೆ ಪದೇ ಮುನ್ನೆಲೆಗೆ ಬರುತ್ತಿದೆ. ಜನರ ಅಭಿಪ್ರಾಯದ ಮೇರೆಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ. ಜನರು ಗ್ಯಾರಂಟಿ ಇರಲಿ ಅಂದ್ರೆ ಅವು ಮುಂದುವರೆಯುತ್ತವೆ. ಜನರೇ ಬೇಡ ಅಂದ್ರೆ ಈ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದು ಸಚಿವ ಸತೀಶ ಜಾರಕಿಹೊಳಿ ತಿಳಿಸಿದ್ದಾರೆ.
ಪಂಚ ಗ್ಯಾರಂಟಿ ಯೋಜನೆಗಳ ಸ್ಥಗಿತ ಬಗ್ಗೆ ಚರ್ಚೆ ತಾರಕಕ್ಕೆ ವಿಚಾರದ ಬಗ್ಗೆ ಇಂದು(ಗುರುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಸತೀಶ ಜಾರಕಿಹೊಳಿ ಅವರು, ಸಿದ್ದರಾಮಯ್ಯ ಈ ಅವಧಿಯಲ್ಲಿ ಎರಡು ಸಲ ಬಜೆಟ್ ಮಂಡಿಸಿದ್ದಾರೆ. ರಾಜ್ಯದ ಪ್ರಗತಿಗೆ ಅನುದಾನ ನೀಡ್ತಿದ್ದಾರೆ, ಅಭಿವೃದ್ಧಿಗೆ ಆದ್ಯತೆ ಸಿಗ್ತಿದೆ. ಇನ್ನೂ ನಾಲ್ಕು ವರ್ಷ ಆರೋಗ್ಯ, ಶಿಕ್ಷಣಕ್ಕೆ ಆದ್ಯತೆ ನೀಡುತ್ತೇವೆ ಎಂದು ಹೇಳಿದ್ದಾರೆ.
undefined
ಮೀಸಲಾತಿಯೇ ಪರಿಹಾರವಲ್ಲ, ವೈಯಕ್ತಿಕ ಬದುಕು ಕಟ್ಟಿಕೊಳ್ಳಿ: ಸಚಿವ ಸತೀಶ್ ಜಾರಕಿಹೊಳಿ
ಗ್ರಾಮೀಣ ಮಟ್ಟದಲ್ಲಿ ಕ್ವಾಲಿಟಿ ಶಿಕ್ಷಣ ಸಿಗಬೇಕು, ಅದಕ್ಕಾಗಿ ಇನ್ನೂ ಹೆಚ್ಚಿನ ಶಾಲೆಗಳ ಮಂಜೂರಿಗೆ ಕ್ರಮ ಕೈಗೊಳ್ಳಲಾಗುವುದು. ನೀರಾವರಿ ಯೋಜನೆ ಹಾಗೂ ಕೆರೆ ತುಂಬಿಸುವ ಯೋಜನೆ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗ್ತಿದೆ. ಮಳೆಯಿಂದ ಹಾನಿಯಾದ ರಸ್ತೆಗಳನ್ನ ಡಿಸೆಂಬರ್ ವೇಳೆಗೆ ರೆಡಿ ಮಾಡಲಾಗುವುದು ಎಂದಿದ್ದಾರೆ.
ಬೆಳಗಾವಿ ಜಿಲ್ಲೆ, ತಾಲೂಕು ವಿಭಜನೆ ಆಗಬೇಕು. ಬೆಳಗಾವಿ ತಾಲೂಕಿನಲ್ಲಿ 8 ಲಕ್ಷ ಜನಸಂಖ್ಯೆ ಇದೆ. ಜಿಲ್ಲಾ ವಿಭಜನೆ, ತಾಲೂಕು ವಿಭಜನೆಗೆ ಸಮಯ ಬರುತ್ತೆ, ಕಾಯಬೇಕು. ಇದರ ಬಗ್ಗೆ ಸರ್ಕಾರ ನಿರ್ಧಾರ ಮಾಡುತ್ತದೆ ಎಂದು ತಿಳಿಸಿದ್ದಾರೆ.
ದೆಹಲಿಯಲ್ಲಿ ಕೇಂದ್ರ ಸಚಿವ ನಿತೀನ್ ಗಡ್ಕರಿ ಭೇಟಿ ಮಾಡಲಾಗಿದೆ. 12 ವರ್ಷಗಳ ಹಿಂದೆ ಕೊಟ್ಟ 20 ರಾಷ್ಟ್ರೀಯ ಹೆದ್ದಾರಿ ಪೂರ್ಣಗೊಳಿಸಲು ಸೂಚಿಸಿದ್ದಾರೆ. ನಮ್ಮಿಂದ ವಿಳಂಬ ಆಗಿದೆ ಭೂ ಸ್ವಾಧೀನ, ಅರಣ್ಯ ಇಲಾಖೆ ಅನುಮತಿ ಸಿಗ್ತಿಲ್ಲ. ಡಿಸೆಂಬರ್ ವರೆಗೆ ಅವಕಾಶ ಕೇಳಿದ್ದೇವೆ ಎಂದ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ.