ಗೆಲ್ಲುವ ಯೋಗ್ಯತೆ ಇಲ್ಲದ ಬಿ.ಎಲ್.ಸಂತೋಷ್ ರಾಜ್ಯ ನಿಯಂತ್ರಿಸ್ತಿದಾರೆ: ಸಚಿವ ಆರ್‌.ಬಿ.ತಿಮ್ಮಾಪುರ

By Kannadaprabha NewsFirst Published Sep 18, 2024, 6:46 PM IST
Highlights

ಚುನಾವಣೆಯಲ್ಲಿ ಯಾವತ್ತೂ ಆರಿಸಿ ಬಾರದಂತಹ ಬಿ.ಎಲ್.ಸಂತೋಷ್ ಅವರು ಕರ್ನಾಟಕವನ್ನು ನಿಯಂತ್ರಿಸುತ್ತಿದ್ದಾರೆ. ಯಾವ ಚುನಾವಣೆಯಲ್ಲೂ ಗೆಲ್ಲುವ ಯೋಗ್ಯತೆಯಿಲ್ಲ. ಅಂತವರ ಕಡೆ ಬಿಜೆಪಿ ಇದೆ. ಆರ್.ಎಸ್.ಎಸ್‌ನವರು ದೇಶ ಆಳುವವರನ್ನು ಆಳುತ್ತಿದ್ದಾರೆ ಎಂದು ಸಚಿವ ಆರ್‌.ಬಿ.ತಿಮ್ಮಾಪುರ ಹೇಳಿದರು. 

ಮುಧೋಳ (ಸೆ.18): ಚುನಾವಣೆಯಲ್ಲಿ ಯಾವತ್ತೂ ಆರಿಸಿ ಬಾರದಂತಹ ಬಿ.ಎಲ್.ಸಂತೋಷ್ ಅವರು ಕರ್ನಾಟಕವನ್ನು ನಿಯಂತ್ರಿಸುತ್ತಿದ್ದಾರೆ. ಯಾವ ಚುನಾವಣೆಯಲ್ಲೂ ಗೆಲ್ಲುವ ಯೋಗ್ಯತೆಯಿಲ್ಲ. ಅಂತವರ ಕಡೆ ಬಿಜೆಪಿ ಇದೆ. ಆರ್.ಎಸ್.ಎಸ್‌ನವರು ದೇಶ ಆಳುವವರನ್ನು ಆಳುತ್ತಿದ್ದಾರೆ ಎಂದು ಸಚಿವ ಆರ್‌.ಬಿ.ತಿಮ್ಮಾಪುರ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್.ಎಸ್.ಎಸ್ ಮುಖಂಡರು ಹಿಂಬಾಗಿಲಿನಿಂದ ಆಡಳಿತ ನಡೆಸುತ್ತ ದೇಶದ ಪ್ರಧಾನಿಗಳನ್ನು ನಿಯಂತ್ರಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಇಂತಹ ದೇಶಕ್ಕೆ ಕಂಟಕಪ್ರಾಯವಾದ ಆರ್‌.ಎಸ್.ಎಸ್ ದೇಶದ ಹಿತ ಕಾಪಾಡುವ ಬದಲು ಒಡೆಯುವ ಹುನ್ನಾರದಲ್ಲಿದೆ. ಇಂತಹ ಸಂಘಟನೆಯಿಂದ ಬಿಜೆಪಿ ಅವರು ದೂರ ಇರದಿದ್ದರೆ ಬಿಜೆಪಿಗೆ ಕಂಟಕ ಗ್ಯಾರಂಟಿ ಎಂದರು.

ದೇಶ, ಜಾತಿ ಒಡೆಯುವ ಕುತಂತ್ರ: ಮುನಿರತ್ನ ಅವರು ಈ ಮೊದಲು ಕಾಂಗ್ರೆಸ್‌ನಲ್ಲಿದ್ದರು. ಈಗ ಬಿಜೆಪಿಗೆ ಹೋಗಿದ್ದಾರೆ. ಬಿಜೆಪಿಗೆ ಯಾರ್‍ಯಾರು ಬರ್ತಾರೆ ಎಂಬುವುದರ ಕಡೆಗೆ ಗಮನ ಇದೆಯೇ ಹೊರತು ಪಕ್ಷ ಸಂಘಟನೆ ಮಾಡುವುದರ ಕಡೆ ಇಲ್ಲ. ದಲಿತ ವಿರೋಧಿ ಬಿಜೆಪಿಗೆ ದಲಿತರು ರಾಜ್ಯಾದ್ಯಂತ ಮತ್ತು ದೇಶಾದ್ಯಂತ ತಕ್ಕಪಾಠ ಕಲಿಸಲಿದ್ದಾರೆ. ಬಿಜೆಪಿ ಅವರಿಗೆ ದಲಿತರ ಮತ್ತು ಅಲ್ಪಸಂಖ್ಯಾತರ ಬಗ್ಗೆ ಎಳ್ಳಷ್ಟು ಕಾಳಜಿಯಿಲ್ಲ. ದೇಶ, ಜಾತಿಯನ್ನು ಹೇಗೆ ಒಡೆಯಬೇಕೆಂಬ ಕುತಂತ್ರದಲ್ಲಿದ್ದಾರೆ ಎಂದು ಆರೋಪಿಸಿದರು.

Latest Videos

ಕಾಂಗ್ರೆಸ್‌ ಸರ್ಕಾರದಿಂದ ಭಾಗ್ಯಗಳ ಹೆಸರಲ್ಲಿ ಹಣ ಕೊಳ್ಳೆ: ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ

ಅಸ್ಥಿರಗೊಳಿಸುವ ಹುನ್ನಾರ: ಅಲ್ಪಸಂಖ್ಯಾತರನ್ನು ಮತ್ತು ದಲಿತರನ್ನು ವಿರೋಧಿಗಳನ್ನಾಗಿ ಮಾಡಿಕೊಳ್ತಾರೆ. ಈಗ ಯಾವ ವರ್ಗದವರೂ ಬಿಜೆಪಿಯವರ ಜೊತೆ ಇಲ್ಲ. ಬಿಜೆಪಿ ಅವರು ನಾಟಕೀಯವಾದ ರಾಜಕಾರಣ ನಡಿತಾ ಇದೆ. ರಾಜ್ಯದಲ್ಲಿ ಸರ್ಕಾರವನ್ನು ಅಸ್ಥಿರಗೊಳಿಸುವ ಹುನ್ನಾರವನ್ನು ಬಿಜೆಪಿ ವ್ಯವಸ್ಥಿತವಾಗಿ ನಡೆಸುತ್ತಿದೆ. ಅವರ ಕಪಟ ಪ್ರಯತ್ನ ಎಂದಿಗೂ ಫಲ ನೀಡುವುದಿಲ್ಲ ಎಂದರು.

ರಾಜ್ಯ ಸರ್ಕಾರದ ವಿರುದ್ಧ ಮಾತನಾಡಲು ಶಾಸಕ ಯತ್ನಾಳರನ್ನು ಮುಂದೆ ಬಿಟ್ಟಿದೆ. ಇದರಿಂದ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರಾಗಲಿ, ನಮ್ಮ ನಾಯಕರಾದ ರಾಹುಲ್ ಗಾಂಧಿಯವರಾಗಲಿ ಎಂದಿಗೂ ಎದೆಗುಂದುವುದಿಲ್ಲ. ಬಿಜೆಪಿಯಲ್ಲಿನ ಒಳಬೇಗುದಿ ಹಾಗೂ ಬಣ ರಾಜಕೀಯದಿಂದಾಗಿ ಶೀಘ್ರದಲ್ಲಿಯೇ ರಾಜಕೀಯ ರಂಗದಲ್ಲಿ ನಾಟಕೀಯ ಬೆಳವಣಿಗೆಗಳಾಗಲಿದೆ. ನಮ್ಮ ರಾಜ್ಯದಲ್ಲಿ ಬಿಜೆಪಿಯಲ್ಲಿ ಒಳಬೇಗುದಿ ಹೆಚ್ಚಾದ ರೀತಿಯಲ್ಲಿಯೇ ಬೇರೆ ರಾಜ್ಯದಲ್ಲಿಯೂ ಆ ಪಕ್ಷದ ವೈಮನಸ್ಸು ಉದ್ಭವವಾಗಿ ಶೀಘ್ರದಲ್ಲಿಯೇ ಕೇಂದ್ರ ಸರ್ಕಾರ ಪತನಗೊಳ್ಳಲಿದೆ ಎಂದು ಭವಿಷ್ಯ ನುಡಿದರು.

25 ವರ್ಷದ ಹಿಂದಿನದು, ತಪ್ಪಿಲ್ಲ ಎಂದು ತೀರ್ಪು ಬಂದಿದೆ, ಈಗ ವಿವಾದ ಏಕೆ?: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್

ಪ್ರಧಾನಿಯಿಂದ ಚಿಲ್ರೆ ರಾಜಕಾರಣ: ನಾಗಮಂಗಲದ ಗಣೇಶೋತ್ಸವದ ಬೆಳವಣಿಗೆ ಕುರಿತು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ತಿಮ್ಮಾಪುರ, ರಾಜ್ಯದಲ್ಲಿನ ಬೆಳವಣಿಗೆ ಅರಿಯದೇ ಇಲ್ಲಿನ ಪರಿಸ್ಥಿತಿ ಬಗ್ಗೆ ಮಾತನಾಡುವ ನರೇಂದ್ರ ಮೋದಿ ಅವರು ಚಿಲ್ಲರೆ ರಾಜಕಾರಣ ಮಾಡುತ್ತಿದ್ದಾರೆ. ಓರ್ವ ಪ್ರಧಾನಿಗಳಿಗೆ ಇದು ಶೋಭೆ ತರುವುದಿಲ್ಲ ಎಂದರು.

click me!