ಬಿ.ಎಸ್.ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ. ಹೀಗಾಗಿ ಒಬ್ಬ ನಾಯಕ ಅವರಿಗೆ (ಬಿಜೆಪಿ) ಸಿಗುತ್ತಿಲ್ಲ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.
ಬಾಗಲಕೋಟೆ (ಸೆ.18): ಬಿ.ಎಸ್.ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ. ಹೀಗಾಗಿ ಒಬ್ಬ ನಾಯಕ ಅವರಿಗೆ (ಬಿಜೆಪಿ) ಸಿಗುತ್ತಿಲ್ಲ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ವಿರುದ್ಧ ಬಿಎಸ್‌ವೈ ಹೋರಾಟ ಮಾಡುವ ವಿಚಾರವಾಗಿ ಈ ರೀತಿಯಾಗಿ ಪ್ರತಿಕ್ರಿಯೆ ನೀಡಿದರು. ಬಿಜೆಪಿಗೆ ವಯಸ್ಸಾದ ಇವ್ರೆ (ಯಡಿಯೂರಪ್ಪ) ಬೇಕು. ವಯಸ್ಸಿದ್ದಾಗೆಲ್ಲಾ ಅಧಿಕಾರದಿಂದ ತೆಗೆದು ಹಾಕಿದರು. ಈಗ ಅವರನ್ನ ಹಿಡ್ಕೊಂಡ ನೀನ ಅಡ್ಡಾಡಪ್ಪ ಎನ್ನುತ್ತಿದ್ದಾರೆ. ಯಾವುದಕ್ಕಾಗಿ ಯಡಿಯೂರಪ್ಪ ಅಡ್ಡಾಡುತ್ತಾರೆ ನನಗಂತೂ ಗೊತ್ತಿಲ್ಲ.
ಅಧಿಕಾರದಾಗ ಇದ್ದಾಗೆಲ್ಲ ಅವರಿಗೆ (ಬಿಎಸ್‌ವೈಗೆ) ತೊಂದರೆ ಕೊಟ್ಟರು. ಅಧಿಕಾರ ಬೇಕಾದಾಗ ನೀನ್ ನಡಿಯಪ್ಪ,ಅಡ್ಡಾಡಪ್ಪ ಅಂತ ತಳ್ಳುತ್ತಿರುತ್ತಾರೆ ಎಂದರು. ಪಾಪಾ ಯಡಿಯೂರಪ್ಪಗೆ ವಯಸ್ಸಾಗಿದೆ. ಹಿರಿಯ ನಾಯಕ, ಮುತ್ಸದ್ಧಿ ಎಲ್ಲವೂ ಇದೆ. ವಯಸ್ಸು ಪರ್ಮಿಟ್ ಮಾಡಬೇಕಲ್ಲ. ಹಾಗಾಗಿ ಅಲ್ಲಿ (ಬಿಜೆಪಿ) ಯಾರೂ ನಾಯಕರೇ ಇಲ್ಲ. ಅವ್ರಿಗೆ ತುರಿಸೋದು (ಬೆನ್ನು ತಟ್ಟೋದು), ಅವ್ರಿಗೆ ಕಷ್ಟ ಕೊಟ್ಟಿದ್ದು ಬಿಎಸ್‌ವೈಗೆ ನೆನಪಿಲ್ಲೇನು?. ಅವರಿಗೆ ಗೊತ್ತಿದೆ ಏನು ಮಾಡಬೇಕಂತ ಅವ್ರು ಮಾಡ್ತಾರೆ ಎಂದರು.
undefined
ಮೂವರು ಡಿಸಿಎಂ ಹುದ್ದೆ ನೀಡಬೇಕು ಎಂಬ ಚರ್ಚೆ ಕುರಿತು ಮಾತನಾಡಿದ ಅವರು, ಅವರವರ ಅಭಿಪ್ರಾಯ ಹೇಳುತ್ತಿರುತ್ತಾರೆ. ಆಂತರಿಕ ಪ್ರಜಾಪ್ರಭುತ್ವದಲ್ಲಿ ವಿಚಾರಗಳನ್ನು ಜನತೆಗೆ ತಿಳಿಸುತ್ತಾರೆ. ಅದನ್ನು ಮಾಡೋದು ಬಿಡೋದು ಹೈಕಮಾಂಡ್‌ಗೆ ಬಿಟ್ಟಿದ್ದು. ಸಮರ್ಥ ನಾಯಕ ಮಲ್ಲಿಕಾರ್ಜುನ ಖರ್ಗೆ ಕರ್ನಾಟದವರು ಇದ್ದಾರೆ. ಅವರಿಗೆ ಇದೆಲ್ಲದರ ಅರಿವಿದೆ. ಪಕ್ಷದ ಶಾಸಕರು, ಮುಖಂಡರು ಹೇಳುತ್ತಿರುತ್ತಾರೆ. ಅದನ್ನು ಇಷ್ಟು ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ಅದು ಪಕ್ಷದ ತೀರ್ಮಾನ. ಮೂರು ಜನ ಡಿಸಿಎಂ ಆದ್ರೆ ಒಳ್ಳೆದು ಅಂತ ರಾಜಣ್ಣ ಹೇಳಿದ್ದಾರೆ ಅದ್ರಲ್ಲಿ ಗೊಂದಲ ಇಲ್ಲ ಎಂದು ತಿಮ್ಮಾಪುರ ಹೇಳಿದರು.