ಜಗದೀಶ ಶೆಟ್ಟರ್‌ಗೆ ಯಾವುದೋ ಭಯ ಇರಬೇಕು: ಸಚಿವ ತಿಮ್ಮಾಪುರ

Published : Jan 27, 2024, 11:53 AM IST
ಜಗದೀಶ ಶೆಟ್ಟರ್‌ಗೆ ಯಾವುದೋ ಭಯ ಇರಬೇಕು: ಸಚಿವ ತಿಮ್ಮಾಪುರ

ಸಾರಾಂಶ

ಐಟಿ, ಇಡಿ ಯಾವುದೋ ಏನೋ ಒಂದು ಇರುತ್ತೆ. ಅದನ್ನು ಜನತೆ ಮುಂದೆ ಅವರು ಹೇಳಿಲ್ಲ, ಯಾಕೆ ಹೋಗಿದ್ದಾರೆ ಅನ್ನೋದನ್ನು ಜನತೆಗೆ ಅವರು ಹೇಳಬೇಕು. ನಾನು ಹೋಗಿಲ್ಲ ಅಲ್ವಾ ನಾನು ಹೇಳಕ್ಕಾಗಲ್ಲ. ಅವರೇ ಹೇಳಬೇಕು. ಕಾಲು ತುಳಿಸಿಕೊಂಡವನಿಗೆ, ತುಳಿದವನಿಗೆ ಇಬ್ಬರಿಗೆ ಗೊತ್ತು. ನನಗೆ, ನಿಮಗೆ ಹೇಗೆ ಗೊತ್ತಾಗುತ್ತೆ ಎಂದು ಮಾರ್ಮಿಕವಾಗಿ ಪ್ರತಿಕ್ರಿಯಿಸಿದ ಸಚಿವ ತಿಮ್ಮಾಪುರ 

ಬಾಗಲಕೋಟೆ(ಜ.27):  ಮಾಜಿ ಮಖ್ಯಮಂತ್ರಿ ಜಗದೀಶ್ ಶೆಟ್ಟರ್‌ ಯಾಕೆ ಬಂದರು? ಯಾಕೆ ಹೋದರೋ ಅವರನ್ನೇ ಕೇಳಬೇಕು. ಅವರಿಗೆ ಯಾವುದೋ ಭಯ ಇರಬೇಕು ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಐಟಿ, ಇಡಿ ಯಾವುದೋ ಏನೋ ಒಂದು ಇರುತ್ತೆ. ಅದನ್ನು ಜನತೆ ಮುಂದೆ ಅವರು ಹೇಳಿಲ್ಲ, ಯಾಕೆ ಹೋಗಿದ್ದಾರೆ ಅನ್ನೋದನ್ನು ಜನತೆಗೆ ಅವರು ಹೇಳಬೇಕು. ನಾನು ಹೋಗಿಲ್ಲ ಅಲ್ವಾ ನಾನು ಹೇಳಕ್ಕಾಗಲ್ಲ. ಅವರೇ ಹೇಳಬೇಕು. ಕಾಲು ತುಳಿಸಿಕೊಂಡವನಿಗೆ, ತುಳಿದವನಿಗೆ ಇಬ್ಬರಿಗೆ ಗೊತ್ತು. ನನಗೆ, ನಿಮಗೆ ಹೇಗೆ ಗೊತ್ತಾಗುತ್ತೆ ಎಂದು ಮಾರ್ಮಿಕವಾಗಿ ಪ್ರತಿಕ್ರಿಯಿಸಿದರು.

ಅದು ಇವತ್ತೊ, ನಾಳೆ ಹೊರಗೆ ಬರುತ್ತದೆ. ಆವಾಗ ಹೇಳೋಣ. ಅವರಿಗೆ ಥ್ರೆಟ್ ಇದೆಯೋ ಏನೋ ಗೊತ್ತಿಲ್ಲ. ಒಬ್ಬೊಬ್ಬರು ಥ್ರೆಟ್‌ಗೆ ಹೆದರಿ ಹೋಗುತ್ತಾರೆ. ಬರುವವರಿಗೆ ಹೋಗುವವರಿಗೆ ಏನೂ ಮಾಡಕ್ಕಾಗಲ್ಲ. ಬಹುಶಃ ಭಯಕ್ಕೆ ಹೋಗಿರಬಹುದು ಅನ್ನೋದು ನನ್ನ ಅನಿಸಿಕೆ. ಅವರ ತಂದೆಯವರು ಜನಸಂಘದಿಂದ ಬಂದವರು. ಅಂಥವರು ಮುನಿಸಿಕೊಂಡು ಇಲ್ಲಿಗೆ ಬಂದರು, ಮತ್ಯಾಕ ಓಡಿ ಹೋದರೋ ಗೊತ್ತಿಲ್ಲ. ಏನು ಕಾರಣಗಳನ್ನು ಹೇಳುತ್ತಾರೆ ಕಾದು ನೋಡೋಣ ಎಂದರು.

ಅಂಬಿಗರ ಸಮುದಾಯ ಎಸ್ಟಿಗೆ ಸೇರ್ಪಡೆಗೆ ಕೇಂದ್ರಕ್ಕೆ ಶಿಫಾರಸ್ಸು: ಸಚಿವ ತಿಮ್ಮಾಪೂರ

ಮುಂದಿನ ಸರದಿ ಲಕ್ಷ್ಮಣ ಸವದಿ ಅಂತಿದ್ದಾರೆ ಎಂಬ ಪ್ರಶ್ನೆಗೆ, ಇವೆಲ್ಲ ಊಹಾಪೋಹ, ಊಹಾಪೋಹಕ್ಕೆ ಬೆಲೆ ಇಲ್ಲ ಎಂದು ಹೇಳಿದರು. ನಿಗಮ ಮಂಡಳಿ ಆಯ್ಕೆಯಲ್ಲಿ ಸಚಿವರಾದ ಪರಮೇಶ್ವರ್‌ ಮತ್ತು ರಾಜಣ್ಣ ಅಸಮಾಧಾನಗೊಂಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅದು ಅಸಮಾಧಾನ ಅಲ್ಲ. ನಮಗೂ ಒಂದು ಮಾತು ಕೇಳಬೇಕಿತ್ತು ಎಂಬುದು ಅವರ ವಾದ. ಪಕ್ಷದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ. ತಮ್ಮ ಭಾವನೆ ವ್ಯಕ್ತಪಡಿಸಿದ್ದು ತಪ್ಪೇನಿಲ್ಲ. ಗುಲಾಮರ ರೀತಿ ಎಂಬ ಪದ ಬಳಸಿದ್ದಾರೋ ಇಲ್ಲವೋ ನನಗೆ ಗೊತ್ತಿಲ್ಲ. ನಿಗಮ-ಮಂಡಳಿ ಆಯ್ಕೆ ಪಕ್ಷದ ಕೆಲಸ. ಸಿಎಂ ಜೊತೆ ಸೇರಿ ಮಾಡಲಾಗುತ್ತದೆ. ಸೌಜನ್ಯಕ್ಕೆ ನಮ್ಮನ್ನೂ ಕೇಳಲಿ ಎಂಬ ಭಾವನೆ ಹೊರಹಾಕಿದ್ದು ತಪ್ಪಲ್ಲ ಎಂದು ಸಮರ್ಥಿಸಿಕೊಂಡರು.

ಲೋಕಸಭೆ ಚುನಾವಣೆಯಲ್ಲಿ ತಮ್ಮ ಕುಟುಂಬದಿಂದ ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇದರಲ್ಲಿ ನನ್ನ ಪಾತ್ರವೇನೂ ಇಲ್ಲ. ನನ್ನ ಮಗ ನಿಲ್ಲುತ್ತಿದ್ದರೆ ಅವನು ಬಂದಾಗ ಕೇಳೋಣ. ಅವನು ನಿಲ್ಲುತ್ತೇನೆ ಎಂದು ಹೇಳುತ್ತಿದ್ದಾನೆ. ಎಲ್ಲಿ ಅಂತ ನೋಡೋಣ. ನನಗೆ ಚಿತ್ರದುರ್ಗ ಲೋಕಸಭೆ ಕ್ಷೇತ್ರದಲ್ಲೆ ನಿಲ್ಲುವುದಾಗಿ ಎನ್ನುತ್ತಿದ್ದಾನೆ. ವಿಜಯಪುರದಿಂದ ನಿಲ್ಲಲಿ ಎಂದು ನಾನು ಹೇಳುತ್ತೇನೆ. ಆ ತೀರ್ಮಾನವನ್ನು ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದು ಸಚಿವ ತಿಮ್ಮಾಪುರ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ನಾನು ಲಂಚ ಪಡೆದಿದ್ದು ಸಾಬೀತಾದರೆ ರಾಜೀನಾಮೆ: ಗೃಹ ಸಚಿವ ಪರಮೇಶ್ವರ್‌