ದಕ್ಷಿಣ ಕನ್ನಡ ಜಿಲ್ಲೆಗೆ ದಕ್ಕದ ನಿಗಮ ಮಂಡಳಿ ಸ್ಥಾನಮಾನ: ಕಾರ್ಯಕರ್ತರಲ್ಲಿ ಭಾರೀ ನಿರಾಸೆ

By Girish Goudar  |  First Published Jan 27, 2024, 11:08 AM IST

ಕೆ.ಸಿ.ವೇಣುಗೋಪಾಲ್ ಪಟ್ಟಿಯಲ್ಲಿ ಖಾದರ್ ಆಪ್ತೆ ಮಮತಾ ಗಟ್ಟಿ ಅವರು ಹೆಸರಿತ್ತು ಎಂದು ಹೇಳಲಾಗುತ್ತಿದೆ. ಮಂಗಳೂರಿನ ಉಳ್ಳಾಲ ವಲಯದ ಕಾಂಗ್ರೆಸ್ ನಾಯಕಿ ಮಮತಾ ಗಟ್ಟಿ ಅವರ ಹೆಸರು ವೇಣುಗೋಪಾಲ್ ಫೈನಲ್ ಮಾಡಿದ್ದ 39 ಜನರ ಪಟ್ಟಿಯಲ್ಲಿತ್ತು. ಸದ್ಯ ದ.ಕ ಜಿಲ್ಲೆಯಲ್ಲಿ ಖಾದರ್ ಹೊರತುಪಡಿಸಿ ಪುತ್ತೂರಿನಲ್ಲಿ ಮಾತ್ರ ಕಾಂಗ್ರೆಸ್ ಗೆ ಬಲ ಇದೆ. ಅಶೋಕ್ ರೈ ಮಾತ್ರ ದ‌.ಕ ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕರಾಗಿದ್ದಾರೆ. 

ಮಂಗಳೂರು(ಜ.27):  ಸ್ಪೀಕರ್ ಯು.ಟಿ.ಖಾದರ್ ಆಪ್ತೆಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ. ಈ ಮೂಲಕ ದಕ್ಷಿಣ ಕನ್ನಡ ಜಿಲ್ಲೆಗೆ ನಿಗಮ ಮಂಡಳಿ ಸ್ಥಾನಮಾನ ದಕ್ಕಿಲ್ಲ. ಕೆ.ಸಿ.ವೇಣುಗೋಪಾಲ್ ಪಟ್ಟಿಯಲ್ಲಿದ್ದ ಹೆಸರನ್ನೂ ಸಿಎಂ ಸಿದ್ದರಾಮಯ್ಯ ಕೈ ಬಿಟ್ಟರಾ? ಎಂಬ ಪ್ರಶ್ನೆಗಳು ಇದೀಗ ಎದ್ದಿವೆ. 

ಕೆ.ಸಿ.ವೇಣುಗೋಪಾಲ್ ಪಟ್ಟಿಯಲ್ಲಿ ಖಾದರ್ ಆಪ್ತೆ ಮಮತಾ ಗಟ್ಟಿ ಅವರು ಹೆಸರಿತ್ತು ಎಂದು ಹೇಳಲಾಗುತ್ತಿದೆ. ಮಂಗಳೂರಿನ ಉಳ್ಳಾಲ ವಲಯದ ಕಾಂಗ್ರೆಸ್ ನಾಯಕಿ ಮಮತಾ ಗಟ್ಟಿ ಅವರ ಹೆಸರು ವೇಣುಗೋಪಾಲ್ ಫೈನಲ್ ಮಾಡಿದ್ದ 39 ಜನರ ಪಟ್ಟಿಯಲ್ಲಿತ್ತು. ಸದ್ಯ ದ.ಕ ಜಿಲ್ಲೆಯಲ್ಲಿ ಖಾದರ್ ಹೊರತುಪಡಿಸಿ ಪುತ್ತೂರಿನಲ್ಲಿ ಮಾತ್ರ ಕಾಂಗ್ರೆಸ್ ಗೆ ಬಲ ಇದೆ. ಅಶೋಕ್ ರೈ ಮಾತ್ರ ದ‌.ಕ ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕರಾಗಿದ್ದಾರೆ. 

Tap to resize

Latest Videos

ದೈವ ಸನ್ನಿಧಿಯಲ್ಲಿ ರಿಷಬ್ ಶೆಟ್ಟಿ ದಂಪತಿ: ಕೋಲದ ವಿಡಿಯೋ ಹಂಚಿಕೊಂಡ ಕಾಂತಾರ ನಟ!

ಯು.ಟಿ.ಖಾದರ್ ಶಾಸಕರಾಗಿದ್ದರೂ ಹೈಕಮಾಂಡ್ ಸ್ಪೀಕರ್ ಸ್ಥಾನ ಕೊಟ್ಟಿದೆ. ದ‌.ಕ ಜಿಲ್ಲೆಗೆ ಸಚಿವ ಸ್ಥಾನದ ನಿರೀಕ್ಷೆ ಇದ್ದರೂ ಕೂಡ ಖಾದರ್ ಅವರಿಗೆ ಸ್ಪೀಕರ್ ಸ್ಥಾನ ನೀಡಿದೆ. ಹೀಗಾಗಿ ನಿಗಮ ಮಂಡಳಿಗೆ ದ.ಕ ಜಿಲ್ಲೆಯಲ್ಲಿ ಹಲವು ಆಕಾಂಕ್ಷಿಗಳಿದ್ದರು. ಹಾಲಿ ಪುತ್ತೂರು ಶಾಸಕ ಅಶೋಕ್ ರೈ, ಎಂಎಲ್ ಸಿಗಳಾದ ಹರೀಶ್ ಕುಮಾರ್, ಮಂಜುನಾಥ್ ಭಂಡಾರಿ ರೇಸ್ ನಲ್ಲಿದ್ದರು. ಇವರ ಜೊತೆಗೆ ಹಲವು ಕಾಂಗ್ರೆಸ್ ಸ್ಥಳೀಯ ನಾಯಕರು, ಕಾರ್ಯಕರ್ತರು ಆಕಾಂಕ್ಷೆ ಹೊಂದಿದ್ದರು. ಅಂತಿಮವಾಗಿ ಖಾದರ್ ಆಪ್ತೆ ಮಮತಾ ಗಟ್ಟಿಗೆ ಸ್ಥಾನ ಸಿಗೋ ಸಾಧ್ಯತೆ ಇತ್ತು. ಆದರೆ ಕೊನೆಗೂ ಖಾದರ್ ಆಪ್ತೆ ಮಮತಾ ಗಟ್ಟಿಗೂ ಸ್ಥಾನ ತಪ್ಪಿದೆ. ಈ ಮೂಲಕ ನಿಗಮ ಮಂಡಳಿ ಹಂಚಿಕೆಯಲ್ಲೂ ದ.ಕ ಜಿಲ್ಲೆಗೆ ಭಾರೀ‌ ನಿರಾಸೆಯಾಗಿದೆ.  

click me!