ಮಾತಾಡ್ಬೇಡ ಅಂತಾ ವರಿಷ್ಠರು ಹೇಳೋಕೆ.. ಆಕೆ ಏನು ಅಂಥ ದೊಡ್ಡ ಲೀಡರಾ? ಸಾಹುಕಾರ ಗರಂ

By Suvarna NewsFirst Published Dec 26, 2020, 7:09 PM IST
Highlights

ಸಚಿವ ರಮೇಶ್ ಜಾರಕಿಹೊಳಿ ಅವರು ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ವಿರುದ್ಧ ಸಾಹುಕಾರ ಏಕವಚನದಲ್ಲಿಯೇ ವಾಗ್ದಾಳಿ ಮಾಡಿದ್ದಾರೆ.

ಬೆಳಗಾವಿ, (ಡಿ.26): ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಮಾತಾಡದಂತೆ ಹಿತೈಷಿಗಳ ಸಲಹೆ ಕೊಟ್ಟಿದ್ದಾರೆ ಎಂದು ಸಚಿವ ರಮೇಶ್ ಜಾರಕಿಹೊಳಿ‌ ಹೇಳಿದರು. ಶಾಸಕಿ ಬಗ್ಗೆ ಮಾತನಾಡಬೇಡ ಎಂದು ವರಿಷ್ಠರು ಹೇಳಿಲ್ಲ. ನಮ್ಮ ವರಿಷ್ಠರಿಗೂ ಶಾಸಕಿ ಹೆಬ್ಬಾಳ್ಕರ್​ಗೂ ಏನು ಸಂಬಂಧ? ಎಂದು ಸಚಿವರು ಪ್ರಶ್ನಿಸಿದರು.

ನನ್ನ ಹಿತೈಷಿಗಳು ಆಕೆ ಬಗ್ಗೆ ಮಾತನಾಡಬೇಡ ಎಂದು ಸಲಹೆ ಕೊಟ್ಟಿದ್ದಾರೆ. ಹಿತೈಷಿಗಳು ಸಲಹೆ ಕೊಟ್ಟಿದ್ದಕ್ಕೆ ಆಕೆ ಬಗ್ಗೆ ಮಾತಾಡೋದನ್ನ ಬಿಟ್ಟಿದ್ದೇನೆ. ವರಿಷ್ಠರು ಹೇಳೋಕೆ ಆಕೆ ಏನು ಅಂತಹ ದೊಡ್ಡ ಲೀಡರಾ? ಎಂದು ಪರೋಕ್ಷವಾಗಿ ಏಕವಚನದಲ್ಲೇ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಸಾಹುಕಾರ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು.

ರಮೇಶ್ ಜಾರಕಿಹೊಳಿಗೆ ಹೈಕಮಾಂಡ್ ವಾರ್ನಿಂಗ್: ಆದ್ರೂ ಸವಾಲು ಹಾಕಿದ ಸಾಹುಕಾರ

ಉತ್ತರಾಯಣ ಕಾಲದಲ್ಲಿ ಎಲ್ಲಾ ಬದಲಾಗುತ್ತೆ ಎಂಬ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ವೈಯಕ್ತಿಕ. ಸಿಎಂ ಬದಲಾವಣೆ ಇಲ್ಲವೆಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಯಡಿಯೂರಪ್ಪನವರು ಸಿಎಂ ಆಗಿ ಮುಂದುವರಿಯುತ್ತಾರೆ. ಮುಂದಿನ ಎರಡೂವರೆ ವರ್ಷ ಬಿಎಸ್​ವೈ ಸಿಎಂ ಆಗಿರುತ್ತಾರೆ ಎಂದು ಸಚಿವ ರಮೇಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು.

ಬೆಳಗಾವಿ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡುವ ವಿಚಾರವಾಗಿ ದಿ.ಸುರೇಶ್ ಅಂಗಡಿ ಪತ್ನಿಗೆ ಟಿಕೆಟ್ ಕೊಟ್ಟರೆ ಒಳ್ಳೆಯದು. ವರಿಷ್ಠರು ಯಾರಿಗೆ ಟಿಕೆಟ್​ ಕೊಟ್ಟರೂ ಅವರ ಪರ ಕೆಲಸ ಮಾಡುತ್ತೇನೆ. ಗಟ್ಟಿಯಾಗಿ ದುಡಿದು ಅಭ್ಯರ್ಥಿ ಗೆಲ್ಲಿಸುವ ಕೆಲಸ ಮಾಡ್ತೇವೆ ಎಂದರು.

click me!