'ಸರ್ಕಾರದ ಗೊಂದಲದಿಂದ ಜನತೆಗೆ ಆತಂಕ'

Published : Dec 26, 2020, 06:31 PM IST
'ಸರ್ಕಾರದ ಗೊಂದಲದಿಂದ ಜನತೆಗೆ ಆತಂಕ'

ಸಾರಾಂಶ

ರಾಜ್ಯದಲ್ಲಿ ಹೊಸ ತಳಿ ವೈರಸ್ ಭೀತಿ ಶುರುವಾಗಿದೆ. ಈ ಬಗ್ಗೆ ಸರ್ಕಾರದ ದಿನ್ಕೊಂದು ಆದೇಶ ಹೊರಡಿಸುತ್ತಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಈ ಬಗ್ಗೆ ಕಾಂಗ್ರೆಸ್‌ ನಾಯಕ ಸಹ ಕಿಡಿಕಾರಿದ್ದಾರೆ.

ಮಂಗಳೂರು, (ಡಿ.26): ರಾತ್ರಿ ಕರ್ಫ್ಯೂ ವಿಧಿಸಿದ್ರು, ಬದಲಾಯಿಸಿದ್ರು ಮತ್ತು ಹಿಂಪಡೆದ ಕಾರಣಗಳನ್ನು ಸರ್ಕಾರ ಬಹಿರಂಗ ಪಡಿಸಲಿ ಎಂದು ಕಾಂಗ್ರೆಸ್ ಶಾಸಕ ಯು.ಟಿ.ಖಾದರ್ ಒತ್ತಾಯಿಸಿದರು.

ಮಂಗಳೂರಿನಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ನಿರ್ಧಾರಗಳು ರಾಜಕೀಯವಾಗಿ ಕೈಗೊಂಡರೇ? ವೈಜ್ಞಾನಿಕ ಕಾರಣಗಳಿವೆಯೇ? ಎಂಬುದನ್ನು ಜನತೆಗೆ ತಿಳಿಸಲಿ. ಸರ್ಕಾರದ ಗೊಂದಲಮಯ ನಿರ್ಧಾರಗಳಿಂದಾಗಿ ಜನರಲ್ಲಿ ಆತಂಕ ಹೆಚ್ಚಿದೆ ಎಂದು ಆರೋಪಿಸಿದರು.

ಹೊಸ ಕೊರೋನಾ ತಳಿಯ ರೋಗಲಕ್ಷಣ ಏನು? ಕಿದ್ವಾಯಿ ನಿರ್ದೇಶಕ ಡಾ. ರಾಮಚಂದ್ರ ಮಾತು

ಸರ್ಕಾರದ ಆದೇಶಗಳು ತಾಂತ್ರಿಕ ಕಾರಣ ಹಾಗೂ ತಜ್ಞರ ಸಮಿತಿ ವರದಿ ಆಧರಿಸಿರುತ್ತವೆ. ಅಂತಹ ದಾಖಲೆಗಳಿದ್ದರೆ ನೀಡಲಿ. ಗೊಂದಲ ಸೃಷ್ಟಿಸುವ ಬದಲಾಗಿ, ಕೋವಿಡ್ 2ನೇ ಅಲೆ ನಿರ್ವಹಿಸಲು ಬೇಕಾದ ಸಿದ್ಧತೆಗಳನ್ನು ಮಾಡಲಿ. ಲಸಿಕೆಯ ಬಗ್ಗೆಯೂ ಸ್ಪಷ್ಟಪಡಿಸಲಿ. ಜಾಗೃತಿ ಮೂಡಿಸಲಿ. ಕೊರೋನಾದ ಖರ್ಚು-ವೆಚ್ಚಗಳ ಬಗ್ಗೆ ಲೆಕ್ಕ ನೀಡಲಿ ಎಂದು ಸಲಹೆ ನೀಡಿದರು.

ಕೋವಿಡ್ ಕಡಿಮೆಯಾದ ಮೇಲೆ ಸಿದ್ಧತೆ ಮಾಡಿದಂತೆ 2ನೇ ಹಂತದಲ್ಲಿ ಎಡವುದು ಬೇಡ. ಮುಖ್ಯಮಂತ್ರಿ, ಸಚಿವರುಗಳ ನಡುವಿನ ಸಮನ್ವಯತೆ ಕೊರತೆಯ ಹೊರೆಯನ್ನು ಜನರ ಮೇಲೆ ಹೇರುವುದು ಬೇಡ. ಬೆಳಿಗ್ಗೆ, ಮಧ್ಯಾಹ್ನ, ರಾತ್ರಿಗೊಂದು ಆದೇಶಗಳೂ ಬೇಡ. ಇದರಿಂದ ಆಡಳಿತದ ಅತಂತ್ರ ಮಾತ್ರವಲ್ಲ, ಜನರೂ ಆತಂಕಕ್ಕೀಡಾಗುತ್ತಿದ್ದಾರೆ ಎಂದು ಹೇಳಿದರು. 

ವಿದೇಶದಿಂದ ಬರುವವರನ್ನು ಪರೀಕ್ಷಿಸಿದರೆ ಸಾಕೇ? ವೈರಸ್‌ ದೇಶದೊಳಗೆ ರೂಪಾಂತರಗೊಳ್ಳುವ ಸಾಧ್ಯತೆ ಇಲ್ಲವೇ? ಕೋವಿಡ್ ಮೊದಲ ಹಂತದ ನಿರ್ವಹಣೆ, ರೋಗದ ಬಗ್ಗೆ ಏನು ಸಂಶೋಧನೆ-ಅಧ್ಯಯನ ನಡೆಸಿದ್ದಾರೆ? ವರದಿ ಏನಿದೆ? ಆಯುಷ್ಮಾನ್‌ ಯೋಜನೆಯಿಂದ ಸಾಮಾನ್ಯ ಕೋವಿಡ್ ಸೋಂಕಿತರನ್ನು ಹೊರಗಿಟ್ಟದ್ದೇಕೆ?' ಎಂದು ಪ್ರಶ್ನಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗೃಹಸಚಿವರು ಏನು ಬೇಕಾದ್ರೂ ಮಾಡಬಹುದು, ಅವರ ಕಣ್ಣುಗಳನ್ನು ನೋಡಿದರೆ ನನಗೆ ಭಯವಾಗುತ್ತೆ: ಮಮತಾ ಬ್ಯಾನರ್ಜಿ
ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?