
ಬೆಳಗಾವಿ(ಜ. 15) ಕುಂದಾನಗರಿಯಲ್ಲಿ ಮತ್ತೆ ಜಾರಕಿಹೊಳಿ ಸಹೋದರರ ಟಾಕ್ ಫೈಟ್ ಆರಂಭವಾಗಿದೆ ಸತೀಶ್ ಜಾರಕಿಹೊಳಿ ರಮೇಶ್ ಜಾರಕಿಹೊಳಿ ಮಧ್ಯೆ ಆರ್‌ಎಸ್‌ಎಸ್ ವಾರ್ ನಡೆದಿದೆ.
ಆರ್‌ಎಸ್‌ಎಸ್ ಗೂ ನಮ್ಮ ಕುಟುಂಬಕ್ಕೂ ಸಂಬಂಧ ಇಲ್ಲ ಎಂಬ ಸತೀಶ್ ಹೇಳಿಕೆ ವಿಚಾರ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಸತೀಶ್ ಜಾರಕಿಹೊಳಿ ಹೇಳಿಕೆ ಕೇಳಿ ನಗು ಬರುತ್ತದೆ. ಜವಾಬ್ದಾರಿಯುತ ಸ್ಥಾನದಲ್ಲಿದ್ದು ಮಾತನಾಡೋದು ವಿಚಿತ್ರ ಅನಿಸುತ್ತದೆ. ನಮ್ಮ ತಂದೆ ಲಕ್ಷ್ಮಣ್ ಜಾರಕಿಹೊಳಿ ಸಂಘದಲ್ಲಿ ಇದ್ದರೋ ಇಲ್ಲವೋ ಸರ್ವೇ ಮಾಡಿ. ಬೇಕಾದರೆ ಗೋಕಾಕ್‌ನಲ್ಲಿ ಹೋಗಿ ಸರ್ವೇ ಮಾಡಿ. ಜಗನ್ನಾಥ್ ಜೋಶಿ ನೇತೃತ್ವದಲ್ಲಿ ಗೋವಾ ವಿಮೋಚನೆ ಚಳವಳಿ ಆರಂಭವಾಗಿತ್ತು. ಅದು ಸಂಘ ಪರಿವಾರ ಹೌದೋ ಅಲ್ವೋ? ಎಂದು ರಮೇಶ್ ಪ್ರಶ್ನೆ ಮಾಡಿದ್ದಾರೆ.
ನಾನು ಜನಸಂಘ ಮೂಲದಿಂದ ಬಂದಿದ್ದು ನಿಜ. ಬಳಿಕ ಕಾಂಗ್ರೆಸ್ ಪಕ್ಷಕ್ಕೆ ಹೋಗಿ ಜಾತ್ಯಾತೀತನಾಗಿದ್ದು ನಿಜ. ಅಜ್ಮೇರ್ ದರ್ಗಾಗೆ ಹೋಗಿ ಟೋಪಿ ಹಾಕಿದ್ದು ನಿಜ, ಅದನ್ನು ಡಿನೈ ಮಾಡ್ತಿಲ್ಲ. ಮುಸ್ಲಿಂ ಕಾರ್ಯಕ್ರಮಕ್ಕೆ ಹೋದರೆ ಟೋಪಿ ಹಾಕಿ ಅತ್ತರ್ ಹಚ್ತಾರೆ. ಹಿಂದೂ ಕಾರ್ಯಕ್ರಮಕ್ಕೆ ಹೋದರೆ ಪೇಟ ಸುತ್ತುತ್ತಾರೆ ಅದರಲ್ಲಿ ನೀವು ರಾಜಕಾರಣ ಮಾಡಿದ್ರೆ ನಿಮ್ಮಂತ ಮೂರ್ಖರಿಲ್ಲ. ಈಗಲೂ ನಾವು ಮುಸಲ್ಮಾನ, ಎಸ್‌ಸಿ, ಹಿಂದುಳಿದ ಪರವಾಗಿ ಇದ್ದೇವೆ. ಪಾಕಿಸ್ತಾನ ಜಿಂದಾಬಾದ್ ಅನ್ನೋ ದೇಶದ್ರೋಹಿ ಪರವಾಗಿಲ್ಲ ಎಂದು ಠಕ್ಕರ್ ಕೊಟ್ಟರು.
ಸಿಡಿದೆದ್ದ ಯತ್ನಾಳ್ ಗೆ ಬಿಎಸ್ ವೈ ಕೊಟ್ಟ ಶಾಕ್
ಬಿಜೆಪಿ ಮುಸ್ಲಿಂ ವಿರೋಧಿ ಅಲ್ಲ. ಪಾಕಿಸ್ತಾನ ಜಿಂದಾಬಾದ್ ಅನ್ನುವವರಿಗೆ ಗಡಿಪಾರು ಮಾಡಬೇಕೆಂಬುದಕ್ಕೆ ಸಮರ್ಥನೆ ನೀಡಿದರು. ರಮೇಶ್ ಕರಿ ಟೋಪಿ ಹಾಕಿದ್ದು ನೋಡಿಲ್ಲ ಎಂಬ ಸತೀಶ್ ಹೇಳಿಕೆ ಬಗ್ಗೆ ಮಾತನಾಡಿ ಸತೀಶ್ ಜಾರಕಿಹೊಳಿ ಬಾಲ್ಯ ಜೀವನ ನಿಮಗೆ ಗೊತ್ತಿಲ್ಲ. ಕಾಲೇಜು ಎಲೆಕ್ಷನ್ ವೇಳೆ ನಾನು ಬೋರ್ಡ್ ಬರೆಯಲು ಕಳಿಸುತ್ತಿದ್ದೆ. ಅಬ್ದುಲ್ ದೇಸಾಯಿ ಅಂತಾ ಸ್ನೇಹಿತ ಇದ್ದಾನೆ ಅವನನ್ನ ಕೇಳಿ.. ಸತೀಶ್ ಜಾರಕಿಹೊಳಿ ಏನು ದೊಡ್ಡ ಲೀಡರಾ? ಸತೀಶ್ ಜಾರಕಿಹೊಳಿ ಹತಾಶರಾಗಿದ್ದಾರೆ. ಸತೀಶ್ ಜಾರಕಿಹೊಳಿ ಲೀಡರ್‌ಶಿಪ್ ಕೊಲ್ಯಾಪ್ಸ್ ಆಗುತ್ತಿದೆ. ಸತೀಶ್ ಜಾರಕಿಹೊಳಿ ಏಳು ವರ್ಷ ಅರಾಮ ತಗೋದು ಒಳ್ಳೆಯದು. ಈಗ ಎರಡು ವರ್ಷ, ಮುಂದಿನ ಐದು ವರ್ಷ ಕಾಂಗ್ರೆಸ್ ಪಕ್ಷಕ್ಕೆ ಕೆಲಸ ಇಲ್ಲ. ಸಿಎಂ ಅಲ್ಲ ಮಾಜಿ ಆಗ್ತಾನೆ, ಯಮಕನಮರಡಿಯಲ್ಲಿ ಎಂಎಲ್‌ಎ ಆಗಿ ಆರಿಸಿ ಬರಲಿ ಮೊದಲು ಎಂದು ಸವಾಲು ಹಾಕಿದರು.
ಜಾರಕಿಹೊಳಿ ಕುಟುಂಬದಲ್ಲಿ ದೊಡ್ಡವನಾಗಿ ನಾನು ತ್ಯಾಗ ಮಾಡುತ್ತಿದ್ದೇನೆ ಅವನು ಎಷ್ಟೋ ಹತಾಶರಾಗಿ ಮಾತನಾಡಿದರೂ ಉತ್ತರ ಕೊಟ್ಟಿಲ್ಲ. ನಿಜವಾಗಿಯೂ ಜಾರಕಿಹೊಳಿ ಮನುಷ್ಯ ಆಗಿದ್ರೆ ವೈಯಕ್ತಿಕವಾಗಿ ಕೇಳಿ ಅನ್ನಬೇಕಿತ್ತು. ಸತೀಶ್ ಜಾರಕಿಹೊಳಿ ಎಲ್ಲಾ ಹಂತದಲ್ಲಿ ಫೇಲ್ ಆಗಿದ್ದಾನೆ ಅದಕ್ಕೆ ಹತಾಶರಾಗಿ ಮಾತನಾಡುತ್ತಿದ್ದಾನೆ. ಸತೀಶ್ ಜಾರಕಿಹೊಳಿ ಆರ್ಟಿಫಿಶಿಯಲ್ ರಾಜಕಾರಣಿ. ಮೊದಲ ಬಾರಿ ದೆಹಲಿಗೆ ಶಂಕರಾನಂದ ಮನೆಗೆ ಹೋಗಿ ಬಂದು ಗನ್‌ಮ್ಯಾನ್ ಇಟ್ಟುಕೊಂಡ ಸಾಮಾನ್ಯ ಮನುಷ್ಯ ಇದ್ದಾಗ ಗನ್‌ಮ್ಯಾನ್ ಇಟ್ಟುಕೊಂಡಿದ್ದ ಎಂದು ಸಹೋದರನ ಮೇಲೆ ಏಕವಚನದಲ್ಲೇ ದಾಳಿ ಮಾಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.