ಕೆಲ ಸಚಿವರು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಐದು ವರ್ಷ ಅವಧಿ ಪೂರೈಸುತ್ತಾರೆ ಅಂತಲೂ ಹೇಳುತ್ತಾರೆ, ತಾವು ಮುಖ್ಯಮಂತ್ರಿ ಆಗಬೇಕು ಅಂತಲೂ ಹೇಳಿಕೆ ನೀಡುತ್ತಾರೆ. ಆ ರೀತಿ ಮಾತನಾಡುವುದಕ್ಕೆ ಅರ್ಥವೇ ಇಲ್ಲ. ಹಾಗೆ ಮಾತನಾಡಬೇಡಿ ಎಂದು ಅವರಿಗೆ ನಾನು ಮನವಿ ಮಾಡುತ್ತೇನೆ: ಸಚಿವ ರಾಮಲಿಂಗಾರೆಡ್ಡಿ
ಶನಿವಾರಸಂತೆ (ಕೊಡಗು)(ಸೆ.13): ತಾವೂ ಮುಖ್ಯಮಂತ್ರಿ ಆಗಬೇಕು ಎಂದು ಕೆಲ ಹಿರಿಯರು ಸೇರಿದಂತೆ ಏಳೆಂಟು ಸಚಿವರು ಹೇಳಿಕೆ ನೀಡಿದ್ದಾರೆ. ಆದರೆ, ಮುಖ್ಯಮಂತ್ರಿ ಸ್ಥಾನದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಕೊಡಗಿನ ಶನಿವಾರಸಂತೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೆಲ ಸಚಿವರು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಐದು ವರ್ಷ ಅವಧಿ ಪೂರೈಸುತ್ತಾರೆ ಅಂತಲೂ ಹೇಳುತ್ತಾರೆ, ತಾವು ಮುಖ್ಯಮಂತ್ರಿ ಆಗಬೇಕು ಅಂತಲೂ ಹೇಳಿಕೆ ನೀಡುತ್ತಾರೆ. ಆ ರೀತಿ ಮಾತನಾಡುವುದಕ್ಕೆ ಅರ್ಥವೇ ಇಲ್ಲ. ಹಾಗೆ ಮಾತನಾಡಬೇಡಿ ಎಂದು ಅವರಿಗೆ ನಾನು ಮನವಿ ಮಾಡುತ್ತೇನೆ. ಅಷ್ಟಕ್ಕೂ ಅವರೆಲ್ಲರೂ ಸಿಎಂ ಆಗುತ್ತೇನೆ ಎನ್ನುತ್ತಿರುವುದು 2028ರ ಚುನಾವಣೆಗೆ ಎಂದರು. ದೀಪಾವಳಿ ಬಳಿಕ ಕಾಂಗ್ರೆಸ್ ಸರ್ಕಾರ ಬಿದ್ದು ಹೋಗಲಿದೆ ಎಂಬ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿ, ನಮ್ಮ ಸರ್ಕಾರಕ್ಕೆ ಬಹುಮತ ಇಲ್ವ?, 136 ಶಾಸಕರು ನಮ್ಮ ಜೊತೆಗಿದ್ದಾರೆ. ಸರ್ಕಾರ ಏಕೆ ಬೀಳುತ್ತೆ ಎಂದರು.
undefined
ಬಿಜೆಪಿ ಕುತಂತ್ರದಿಂದ ವಾಲ್ಮೀಕಿ ಹಗರಣದಲ್ಲಿ ನಾಗೇಂದ್ರ ಕಿಂಗ್‌ಪಿನ್: ಸಚಿವ ರಾಮಲಿಂಗಾರೆಡ್ಡಿ ಗರಂ
ಕೇಂದ್ರದಲ್ಲಿ ನರೇಂದ್ರ ಮೋದಿಯವರ ಸರ್ಕಾರಕ್ಕೆ ಸ್ವಂತ ಬಲವಿಲ್ಲ. ಬೇರೆ, ಬೇರೆ ಪಕ್ಷಗಳನ್ನು ನಂಬಿಕೊಂಡು ರಾಜ್ಯಭಾರ ಮಾಡುತ್ತಿದ್ದಾರೆ. ಹೀಗಾಗಿ, ವಿಜಯೇಂದ್ರ ಮತ್ತು ಆರ್. ಅಶೋಕ್ ಅವರು ಕೇಂದ್ರ ಸರ್ಕಾರದ ಬಗ್ಗೆ ಯೋಚಿಸಲಿ. ವಿಜಯೇಂದ್ರ ಅವರು ಸಿಎಂ ಆದಂತೆ ಕನಸು ಕಾಣುತ್ತಿರಬಹುದು, ಕಾಣಲಿ ಬಿಡಿ ಎಂದರು.