
ಮಂಡ್ಯ (ಸೆ.12): ಭಯೋತ್ಪಾದನ ಕೃತ್ಯವು ಈ ರೀತಿ ನಡೆಯಲ್ಲ. ಕಾನೂನುನನ್ನ ಕೈಗೆತ್ತುಕೊಂಡಿದ್ದಾರೆ. ಕಳೆದ ಬಾರಿಯೂ ಗಣಪತಿ ವಿಚಾರಕ್ಕೆ ಗಲಾಟೆಯಾಗಿದೆ. ಅಧಿಕಾರಿಗಳಿಗೆ, ಪೊಲೀಸರಿಗೆ ಅಷ್ಟೂ ಪರಿಜ್ಞಾನವು ಇಲ್ವಾ. ಕತ್ತೆ ಕಾಯ್ತಿದ್ರಾ ಪೊಲೀಸರು? ಎಂದು ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದಿರುವ ಘಟನೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದರು. ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಕಾನೂನು ಹಾಗೂ ಸರ್ಕಾರ ನಮಗೆ ಏನೂ ಮಾಡಲ್ಲ ಎಂದು ಅವರ ತಲೆಗೆ ಬಂದಿದೆ. ಮಚ್ಚು ಲಾಂಗ್ ತಕೊಂಡು ಶಿವಮೊಗ್ಗದಲ್ಲಿ ಓಡಾಡಿದ್ರು ಎಂದರು.
ಆದ್ರೆ ಅವರಿಗೆ ಏನು ಮಾಡಲಿಲ್ಲ. ಇದೆಲ್ಲ ಕಾಂಗ್ರೆಸ್ಸಿನ ಪ್ರಚೋದನೆ ಇಲ್ಲದೆ ನಡೆಯಲು ಸಾಧ್ಯವಿಲ್ಲ. ಕೆರಗೋಡಿನಲ್ಲಿ ಏಕಾಏಕಿ ಹನುಮ ಧ್ವಜ ಇಳಿಸಿದ್ರು. ಬಳಿಕ ರಾಜ್ಯ ಪೂರ್ತಿ ಹನುಮ ಧ್ವಜ ಇಳಿಸಿದ್ರು. ಕಾಂಗ್ರೆಸ್ ಹನುಮನನ್ನ ವಿಲನ್ ಮಾಡಿ ಆಯ್ತು. ಇದೀಗ ಗಣೇಶನ ಕಂಡರು ಕಾಂಗ್ರೆಸ್ ನವರಿಗೆ ಆಗಲ್ಲ. ಗಣೇಶನ ಮೇಲೆ ಕಾಂಗ್ರೆಸ್ ವಕ್ರದೃಷ್ಟಿ ಬೀರಿದೆ. ಕಾಂಗ್ರೆಸ್ ಸರ್ಕಾರ ಸರ್ವನಾಶವಾಗುತ್ತೆ ಎಂದ ಅಶೋಕ್. ಹೋಮ್ ಮಿನಿಸ್ಟಿರ್ ಸಣ್ಣ ಘಟನೆ ಅಂತಾರೆ. ಪೆಟ್ರೋಲ್ ಬಾಂಬ್ ಹಾಕಿರೋದು ಅವರಿಗೆ ಸಣ್ಣ ಘಟನೆ ಎಂದು ಹೇಳಿದರು.
ಮುಖ್ಯಮಂತ್ರಿ ರೇಸ್‌ನಲ್ಲಿ ಯಾರೂ ಇಲ್ಲ, ಸಿದ್ದರಾಮಯ್ಯನವರೇ ಸಿಎಂ: ಸಚಿವ ದಿನೇಶ್ ಗುಂಡೂರಾವ್
ಮಿಸೆಲ್, ರಾಕೇಟ್ ಹಾಕಿದ್ರೆ ಅವರಿಗೆ ದೊಡ್ಡ ಘಟನೆ. ಇದು ಪೂರ್ವ ನಿಯೋಜಿತ ಘಟನೆ. ಮಸೀದಿಯಲ್ಲಿ ಪ್ಲಾನ್ ಮಾಡಿ ಗಲಭೆ ಏಳಿಸಿದ್ದಾರೆ. ಮಂಡ್ಯದಲ್ಲಿ ಗಣಪತಿ ಹಬ್ಬ ನಡೆಯಬಾರದು ಎಂದು ಪ್ಲಾನ್. ಕುತಂತ್ರ ಮಾಡಿ ಈ ಕೃತ್ಯ ಮಾಡಿದ್ದಾರೆ. ಹಲ್ಲೆ ಮಾಡಿದ್ದು ಮುಸ್ಲಿಂ ಟೆರೆರಿಸ್ಟ್ ಗಳು, ರೌಡಿಗಳು ಎಂದು ಕಿಡಿಕಾರಿದರಲ್ಲದೇ ಈ ಕೃತ್ಯದಲ್ಲಿ ಅಂಗಡಿ-ಮುಂಗಟ್ಟು ಕಳೆದುಕೊಂಡವರಿಗೆ ಪರಿಹಾರ ನೀಡಬೇಕು ಎಂದು ಅಶೋಕ್ ಆಗ್ರಹಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.