ಮತ್ತೆ ಖಾತೆ ಬದಲಾವಣೆ ಮಾಡಿದ್ದಕ್ಕೆ ಅಸಮಾಧಾನಗೊಂಡಿದ್ದ ಸಚಿವ ಆರ್.ಶಂಕರ್, ಮುಖ್ಯಮಂತ್ರಿ ಭೇಟಿ ಬಳಿಕ ಕೂಲ್ ಆಗಿದ್ದಾರೆ.
ಬೆಂಗಳೂರು, (ಜ.22): ಮೊದಲು ನೀಡಲಾಗಿದ್ದ ಪೌರಾಡಳಿತ ಖಾತೆ ಬದಲಾವಣೆ ಮಾಡಿದ್ದಕ್ಕೆ ಬೇಸರಗೊಂಡಿದ್ದ ಸಚಿವ ಆರ್.ಶಂಕರ್ ಅವರನ್ನ ಸಿಎಂ ಬಿಎಸ್ ಯಡಿಯೂರಪ್ಪ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೌದು..ಮೊದಲು ಶಂಕರ್ ಅವರಿಗೆ ಪೌರಾಡಳಿ ಇಲಾಖೆ ನೀಡಲಾಗಿತ್ತು. ಆದ್ರೆ, ಕೆಲಸ ಸಚಿವರು ಅಸಮಾಧಾನಗೊಂಡ ಹಿನ್ನೆಲೆಯಲ್ಲಿ ಶಂಕರ್ ಅವರಿಗೆ ನೀಡಲಾದ್ದ ಪೌರಾಡಳಿತ ಖಾತೆಯನ್ನು ಎಂಟಿಬಿ ನಾಗರಾಜ್ ಅವರಿಗೆ ನೀಡಲಾಗಿದೆ.
ಇನ್ನು ಆರ್.ಶಂಕರ್ ಅವರಿಗೆ ತೋಟಗಾರಿಕೆ, ರೇಷ್ಮೆ ಖಾತೆ ಕೊಡಲಾಗಿದೆ. ಇದರಿಂದ ಅಸಮಾಧನಗೊಂಡಿದ್ದ ಶಂಕರ್ ಅವರನ್ನ ಕರೆದು ಸಿಎಂ ಸಮಧಾನ ಮಾಡಿ ಕಳುಹಿಸಿದ್ದಾರೆ.
ಮತ್ತೆ ಖಾತೆ ಬದಲಾಯ್ತಾ? ಸಚಿವ ಮಾಧುಸ್ವಾಮಿ ಅಚ್ಚರಿ ಹೇಳಿಕೆ
ಸಿಎಂ ಭೇಟಿ ಬಳಿಕ ಶಂಕರ್ ಮಾತು
ಸಿಎಂ ಯಡಿಯೂರಪ್ಪ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಆರ್ ಶಂಕರ್, ಪೌರಾಡಳಿತ ಖಾತೆ ಬದಲಾವಣೆ ಮಾಡಿದ್ದಕ್ಕೆ ಬೇಸರವಾಗಿತ್ತು. ಸಿ.ಎಂ ಯಡಿಯೂರಪ್ಪ ಅನಿವಾರ್ಯ ಕಾರಣಗಳಿಂದ ಮತ್ತೆ ಖಾತೆ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದಿದ್ದು, ಮುಂದಿನ ದಿನಗಳಲ್ಲಿ ಬೇರೆ ಖಾತೆ ಕೊಡುವ ಬಗ್ಗೆ ಭರವಸೆ ನೀಡಿದ್ದಾರೆ. ಹೀಗಾಗಿ ಸದ್ಯಕ್ಕೆ ನನಗೆ ಯಾವುದೇ ಅಸಮಧಾನ ಇಲ್ಲ ಎಂದು ಸ್ಪಷ್ಟಪಡಿಸಿದರು.
ಪೌರಾಡಳಿತ ಖಾತೆ ಬದಲಾವಣೆ ಮಾಡಿದ್ದಕ್ಕೆ ಬೇಸರವಾಗಿ, ಅದೇ ಖಾತೆ ಬೇಕು ಎಂದು ಸಿಎಂ ಬಳಿ ಪಟ್ಟು ಹಿಡಿದಿದ್ದೆ. ಆದ್ರೆ ಈಗಿರುವ ತೋಟಗಾರಿಕೆ, ರೇಷ್ಮೆ ಖಾತೆಯಲ್ಲೆ ಮುಂದುವರೆಯುವಂತೆ ಯಡಿಯೂರಪ್ಪ ತಿಳಿಸಿದ್ದಾರೆ. ಹೀಗಾಗಿ ಭರವಸೆಯಿಂದ ಇದೀಗ ಸಿಎಂ ಮಾತಿಗೆ ಒಪ್ಪಿ ಬಂದಿದ್ದೇನೆ ಎಂದರು.
ಅಸಮಾಧಾನ ಸ್ಫೋಟ: ಮತ್ತೆ ಸಚಿವರ ಖಾತೆ ಬದಲಿಸಿದ ಸಿಎಂ
ಜನವರಿ 26 ರಂದು ಧ್ವಜಾರೋಹಣ ಆದ ನಂತರ ಹಾವೇರಿ ಜಿಲ್ಲಾ ಉಸ್ತುವಾರಿ ಕೊಡುವುದಾಗಿ ಭರವಸೆ ಕೂಡ ನೀಡಿದ್ದಾರೆ. ಸಿಎಂ ಮಾತಿಗೆ ಬೆಲೆ ಕೊಟ್ಟು ಈಗ ತೋಟಗಾರಿಕೆ, ರೇಷ್ಮೆ ಖಾತೆಯಲ್ಲೇ ಸಂತೋಷದಿಂದ ಮುಂದುವರೆಯುತ್ತೇನೆ ಎಂದು ಹೇಳಿದರು.