ಸಿದ್ದರಾಮಯ್ಯಗೆ ಸೋಲಿನ ಭಯ ಕಾಡುತ್ತಿದೆ: ಸಚಿವ ಅಶೋಕ್‌ ವ್ಯಂಗ್ಯ

By Kannadaprabha News  |  First Published Feb 27, 2023, 11:05 AM IST

ನಾವು ಕೆಲಸ ಮಾಡಿದರೆ ಜನ ಪ್ರೀತಿಯಿಂದ ನೋಡುತ್ತಾರೆ. ಕೆಲಸ ಮಾಡದೇ ಸಿದ್ದರಾಮಯ್ಯನವರಿಗೆ ಪ್ರೀತಿ ತೋರಿಸು ಅಂದ್ರೆ ಯಾರು ತೋರಿಸಲ್ಲ. ಹಾಗಾಗಿ, ಸಿದ್ದರಾಮಯ್ಯ ಓಡು ಮಗಾ ಓಡು ಮೈಸೂರಿಂದ ಬಾದಾಮಿ, ಬಾದಾಮಿಯಿಂದ ಕೋಲಾರಕ್ಕೆ ಓಡು ಎಂದು ಊರಿಂದೂರಿಗೆ ಜಿಗಿಯುತ್ತಿದ್ದಾರೆ. 


ಬಾಗಲಕೋಟೆ (ಫೆ.27): ನಾವು ಕೆಲಸ ಮಾಡಿದರೆ ಜನ ಪ್ರೀತಿಯಿಂದ ನೋಡುತ್ತಾರೆ. ಕೆಲಸ ಮಾಡದೇ ಸಿದ್ದರಾಮಯ್ಯನವರಿಗೆ ಪ್ರೀತಿ ತೋರಿಸು ಅಂದ್ರೆ ಯಾರು ತೋರಿಸಲ್ಲ. ಹಾಗಾಗಿ, ಸಿದ್ದರಾಮಯ್ಯ ಓಡು ಮಗಾ ಓಡು ಮೈಸೂರಿಂದ ಬಾದಾಮಿ, ಬಾದಾಮಿಯಿಂದ ಕೋಲಾರಕ್ಕೆ ಓಡು ಎಂದು ಊರಿಂದೂರಿಗೆ ಜಿಗಿಯುತ್ತಿದ್ದಾರೆ. ಕೋಲಾರದಿಂದ ಇನ್ನೆಲ್ಲಿ ಜಿಗಿಯುತ್ತಾರೆ ಗೊತ್ತಿಲ್ಲ ಎಂದು ಕಂದಾಯ ಸಚಿವ ಆರ್‌.ಅಶೋಕ ವ್ಯಂಗ್ಯವಾಡಿದರು. ಭಾನುವಾರ ಕಲಾದಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಯಕರೆಂದರೆ ಒಂದು ಕಡೆ ನಿಲ್ಲಬೇಕು. ಜನರ ಪ್ರೀತಿ ಸಂಪಾದನೆ ಮಾಡಬೇಕು. 

ಆ ತೆರನಾದ ರಾಜಕಾರಣಿಗೆ ಗೌರವ ಬರುತ್ತೆ. ಬಿಎಸ್‌ವೈ ಶಿಕಾರಿಪುರದಲ್ಲೇ ನೆಲೆನಿಂತಿದ್ದರು ಅದಕ್ಕೆ ಅವರಿಗೆ ಅಪಾರ ಜನಮನ್ನಣೆ ಸಿಕ್ಕಿತು. ಬಹಳಷ್ಟುರಾಜಕಾರಣಿಗಳು ತಮ್ಮ ಸ್ವಂತ ಕ್ಷೇತ್ರದಲ್ಲಿ ಒಳ್ಳೆ ಕೆಲಸ ಮಾಡಿ ಗೆಲುವು ಸಾಧಿಸುತ್ತಾರೆ. ಆದರೆ, ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ನವರು ತಾವು ಗೆದ್ದ ಕ್ಷೇತ್ರಗಳಲ್ಲಿ ಕೆಲಸ ಮಾಡುವುದಿಲ್ಲ. ಅಧಿಕಾರ ಬಂದಾಗ ಅವರು ಊರೂರು ಸುತ್ತಾಡುತ್ತಾರೆ. ಅಧಿಕಾರ ಹೋದ ಮೇಲೆ ಕ್ಷೇತ್ರಕ್ಕೆ ಬಂದು ಇನ್ನೊಂದು ಅವಕಾಶ ಕೊಡಿ ಅನ್ನುತ್ತಾರೆ. ಇದು ಕಾಂಗ್ರೆಸ್‌ನ ಇತಿಹಾಸ, ಇದು ಕಾಂಗ್ರೆಸ್‌ ಪಾರ್ಟಿನಲ್ಲಿ ಸರ್ವೇಸಾಮಾನ್ಯ. ಜನ ಇದನ್ನ ನಂಬಬಾರದು ಎಂದರು. ಬಿಜೆಪಿಯವರು ಸುಳ್ಳುಗಾರರು ಅನ್ನುವ ಸಿದ್ದರಾಮಯ್ಯ ಖುದ್ದು ಸುಳ್ಳು ಹೇಳಿಯೇ ಬಾದಾಮಿ ಕ್ಷೇತ್ರವನ್ನು ಹೋಗಿದ್ದಾರೆ. 

Latest Videos

Grama Vastavya: ಹಾಸ್ಟೆಲ್‌ ಮಕ್ಕಳಿಗೆ ಉಪಾಹಾರ ಬಡಿಸಿದ ಸಚಿವ ಅಶೋಕ್‌

ಈ ಮೊದಲು ಸುಳ್ಳು ಹೇಳಿಯೇ ಅವರು ವರುಣಾ ಹಾಗೂ ಚಾಮುಂಡೇಶ್ವರಿ ಕ್ಷೇತ್ರ ಬಿಟ್ಟು ಹೋಗಿದ್ದರು. ಸಿದ್ದರಾಮಯ್ಯ ಪ್ರತಿ ಸಾರಿ ಜನರಿಗೆ ಸುಳ್ಳು ಹೇಳಿ ಮೋಸ ಮಾಡಿದರು. ಹಾಗಾಗಿ, ಮತ್ತೆ ಈ ಬಾರಿ ಬಾದಾಮಿಯಲ್ಲಿ ನಿಂತರೆ ಸೋಲುತ್ತೇನೆ ಎಂದು ತಿಳಿದು ಈ ಬಾರಿ ಬಾದಾಮಿ ಕ್ಷೇತ್ರ ತೊರೆದು ಹೋಗಿದ್ದಾರೆ. ಕಲಾದಗಿ ಗ್ರಾಮ ವಾಸ್ತವ್ಯದ ಕಾರ್ಯಕ್ರಮಕ್ಕೆ ಬಾದಾಮಿ ಕ್ಷೇತ್ರದಿಂದ ಜನ ಬಂದಿದ್ದರು. ಅವರು ನನಗೆ ಅಹವಾಲು ಸಲ್ಲಿಸಿದರು. ಅಲ್ಲಿಯ ಜನ ನನಗೆ ಅಹವಾಲು ಸಲ್ಲಿಸಿದ್ದಾರೆ ಎಂದರೆ ಅದರರ್ಥ ಸಿದ್ದರಾಮಯ್ಯ ಬಾದಾಮಿಯಲ್ಲಿ ಕೆಲಸ ಮಾಡಿಲ್ಲ ಎಂದು ಅರ್ಥ ಎಂದರು.

ಇದೇ ಸರ್ಕಾರದ ಕಡೆ ಗ್ರಾಮ ವಾಸ್ತವ್ಯ: ಬಹುಶಃ ಇದೇ ಈ ಸರ್ಕಾರದ ಕೊನೆಯ ಗ್ರಾಮ ವಾಸ್ತವ್ಯ ಆಗಬಹುದು. ಮತ್ತೆ ನಮ್ಮ ಸರ್ಕಾರ ಬಂದರೆ ಗ್ರಾಮ ವಾಸ್ತವ್ಯವನ್ನು ಮುಂದುವರೆಸುತ್ತೇವೆ ಎಂದು ಹೇಳುವ ಮೂಲಕ ತಮ್ಮ ಮಹತ್ವಾಕಾಂಕ್ಷೆಯ ಗ್ರಾಮ ವಾಸ್ತವ್ಯದ ಕುರಿತು ಕಂದಾಯ ಸಚಿವ ಆರ್‌.ಅಶೋಕ ಹೇಳಿದ ಮಾತಿದು. ಕಲಾದಗಿ ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ರಾಜ್ಯದ 18 ಕಡೆ ಗ್ರಾಮ ವಾಸ್ತವ್ಯವನ್ನು ಮಾಡಿದ ತೃಪ್ತಿ ನನ್ನದಾಗಿದೆ. ಜನತೆ ಸಹಕಾರ ನೀಡಿದ್ದಾರೆ. ಅವರಿಗೆ ಧನ್ಯವಾದಗಳು. ಗ್ರಾಮದಲ್ಲಿಯೇ 24 ಗಂಟೆಗಳ ಕಾಲ ಕಳೆದು ಅವರ ಜೊತೆಯಲ್ಲಿಯೇ ಊಟ ಉಪಹಾರ ಮಾಡಿ ದಲಿತಕೇರಿಗೆ ತೆರಳಿ ಅವರ ಜೊತೆ ಅವರೇ ಮಾಡಿದ ಕೈ ಊಟವನ್ನು ಮಾಡಿದ ತೃಪ್ತಿ ನನ್ನದಾಗಿದೆ ಎಂದರು.

Grama Vastavya: ಬಿಜೆಪಿಗೆ ಅಧಿಕಾರ ಸೂರ್ಯ ಚಂದ್ರರಷ್ಟೇ ಸತ್ಯ: ಸಚಿವ ಅಶೋಕ್‌

ಹಾರ, ತುರಾಯಿ ಬದಲು ಪುಸ್ತಕ: ಗ್ರಾಮ ವಾಸ್ತವ್ಯ ಕಾರ್ಯಕ್ರಮ ಅದ್ಧೂರಿಯಾಗಿದ್ದರೂ ಸಚಿವ ಆರ್‌.ಅಶೋಕ ಅವರು ಮಾತ್ರ ಆಡಂಬರಕ್ಕೆ ಅವಕಾಶವನ್ನೇ ಕೊಡಲಿಲ್ಲ. ವೇದಿಕೆಯ ಕಾರ್ಯಕ್ರಮದಲ್ಲಿ ಹಾರ, ತುರಾಯಿಗೆ ಅವಕಾಶವೇ ಇರಲಿಲ್ಲ. ಬದಲಾಗಿ ಸ್ವಾಗತಿಸುವ ಸಂದರ್ಭದಲ್ಲಿ ಪುಸ್ತಕ ಹಾಗೂ ಗುಲಾಬಿ ಹೂ ಮಾತ್ರ ಕೊಡಲು ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದರು. ಹೀಗಾಗಿ ಎಲ್ಲಿಯೂ ಸಹ ಆಡಂಬರಕ್ಕೆ ಅವಕಾಶವೇ ಇರಲಿಲ್ಲ.

click me!