
ಬೆಂಗಳೂರು (ಜ.27): ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಬಿಜೆಪಿ ಸಂಸದರನ್ನು ಗೆಲ್ಲಿಸುವಂತೆ ಬಹಿರಂಗವಾಗಿ ಕರೆ ನೀಡಿದ್ದಾರೆಂದು ಕೇಳಿದೆ. ಅದರ ಬಗ್ಗೆ ಮಾಹಿತಿ ಇಲ್ಲ. ಅವರು ಪಕ್ಷದ ವೇದಿಕೆಯಲ್ಲಿ ಹೇಳಿಲ್ಲ ಅನ್ನಿಸುತ್ತದೆ. ಎಲ್ಲರೂ ಪಕ್ಷದ ಚೌಕಟ್ಟಿನಲ್ಲಿರಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದರು
ಶಿವಮೊಗ್ಗದ ಬೆಕ್ಕಿನ ಕಲ್ಮಟದಲ್ಲಿ ಆಯೋಜಿಸಿದ್ದ ಗುರು ಬಸವಶ್ರೀ ಪ್ರಶಸ್ತಿ ಪ್ರಧಾನ ಹಾಗೂ ಭಾವೈಕ್ಯತ ಸಮ್ಮೇಳನದಲ್ಲಿ ಸಂಸದ ಬಿವೈ ರಾಘವೇಂದ್ರರನ್ನು ಗೆಲ್ಲಿಸುವಂತೆ ಕರೆ ನೀಡಿದ್ದ ಶಾಮನೂರು ಶಿವಶಂಕರಪ್ಪ. ಈ ಸಂಬಂಧ ಮಾಧ್ಯಮದವರ ಪ್ರಶ್ನೆಗೆ ಸಚಿವರು ಪ್ರತಿಕ್ರಿಯಿಸಿದರು.
ಬಿಜೆಪಿ ಸಂಸದರನ್ನ ಮತ್ತೊಮ್ಮೆ ಗೆಲ್ಲಿಸುವಂತೆ ಕಾಂಗ್ರೆಸ್ ಶಾಸಕ ಕರೆ! ಬಿವೈ ರಾಘವೇಂದ್ರ ಪರ ಶಾಮನೂರು ಬ್ಯಾಟಿಂಗ್!
ಇನ್ನು ಕಾರ್ಯಕರ್ತರಿಗೆ ನಿಗಮ ಮಂಡಳಿಯಲ್ಲಿ ನೀಡುವ ವಿಚಾರ ಪ್ರಸ್ತಾಪಿಸಿದ ಸಚಿರು ಮುಂದಿನ ಆರು ತಿಂಗಳಲ್ಲಿ ನಿಗಮ ಮಾಡ್ತೀವಿ ಎಂದಿದ್ದೆವು, ಮಾಡಿದ್ದೇವೆ. ಖಂಡಿತ ಆದಷ್ಟು ಬೇಗ ಕಾರ್ಯಕರ್ತರಿಗೂ ಅಧಿಕಾರ ನೀಡುತ್ತೇವೆ. ಶಾಸಕರಿಗೆ ನಿಗಮ ಮಂಡಳಿ ನೀಡಲಾಗಿದೆ. ಯಾವುದೇ ಅಸಮಾಧಾನ ಇಲ್ಲ. ಬಿಜೆಪಿಯವರು ವಿರೋಧ ಪಕ್ಷದ ನಾಯಕ, ಮೇಲ್ಮನೆ ನಾಯಕರನ್ನು ನೇಮಕ ಮಾಡುವಲ್ಲಿ ವಿಳಂಬ ಮಾಡಿದ್ರು. ನೀವು ಅವರನ್ನ ಕೇಳಲ್ಲ, ನಮ್ಮನ್ನ ಕೇಳ್ತಿರಿ ಎಂದು ಮಾಧ್ಯಮದವರ ವಿರುದ್ಧವೇ ಬೇಸರ ವ್ಯಕ್ತಪಡಿಸಿದರು.
ನಿಗಮ ಮಂಡಳಿ ನೇಮಕ: 'ನಾವೇನು ನಿಮ್ಮ ಗುಲಾಮರಾ?' ಹೈಕಮಾಂಡ್ ವಿರುದ್ಧ ಸಿಡಿದೆದ್ದ ರಾಜಣ್ಣ!
ನಾವೇನು ಹೈಕಮಾಂಡ್ ಗುಲಾಮರಲ್ಲ ಎಂಬ ಸಚಿವ ಕೆಎನ್ ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಯಾರೂ ಯಾರ ಗುಲಾಮರಲ್ಲ, ನಾವೂ ಯಾರ ಗುಲಾಮರಲ್ಲ. ಟಿಕೆಟ್ ಸಿಗುವಾಗ ಹೈಕಮಾಂಡ್ ಮುಖ್ಯವಾಗುತ್ತೆ. ಟಿಕೆಟ್ ಸಿಕ್ಕಿ ಶಾಸಕರಾದ ಮೇಲೆ ಹೈಕಮಾಂಡ್ ಇಲ್ಲ ಅಂದ್ರೆ ಹೇಗೆ? ಪಕ್ಷದ ಚೌಕಟ್ಟಿನಲ್ಲಿ ಎಲ್ಲರೂ ನಡೆದುಕೊಳ್ಳಬೇಕು. ಪಕ್ಷದಿಂದ ನಾವು, ನಮ್ಮಿಂದ ಪಕ್ಷ ಅಲ್ಲ. ನಮ್ಮಿಂದಲೇ ಪಕ್ಷ ಅಂದುಕೊಂಡ್ರೆ ಅದು ಅವರ ಮೂರ್ಖತನ ಎನ್ನುವ ಮೂಲಕ ಸಚಿವ ಕೆಎನ್ ರಾಜಣ್ಣಗೆ ತಿರುಗೇಟು ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.