ದೇಶದ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದಾದರೆ ಎನ್‌ಡಿಎಗೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಬೆಂಬಲಿಸುತ್ತದೆ: ಗಂಗಾವತಿ ಶಾಸಕ ಜನಾರ್ದನ ರೆಡ್ಡಿ
ಕುಷ್ಟಗಿ(ಜ.27): ಬಿಜೆಪಿ ಬಯಸಿದರೆ ನಮ್ಮ ಕೆಆರ್‌ಪಿಪಿ ಪಕ್ಷದ ಜೊತೆಗೆ ಲೋಕಸಭಾ ಸೀಟುಗಳ ಹಂಚಿಕೆ ಮಾಡಿಕೊಂಡು ಬಿಜೆಪಿ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುವ ಚಿಂತನೆ ನಡೆದಿದೆ. ಆದರೆ ಕಾಂಗ್ರೆಸ್ ಜತೆ ಯಾವತ್ತೂ ಹೊಂದಾಣಿಕೆ ಸಾಧ್ಯವಿಲ್ಲ ಎಂದು ಶಾಸಕ ಕೆಆರ್‌ಪಿಪಿ ಸಂಸ್ಥಾಪಕ ಅಧ್ಯಕ್ಷ ಗಾಲಿ ಜನಾರ್ದನ ರೆಡ್ಡಿ ಹೇಳಿದರು.
ಪಟ್ಟಣದ ಚಂದ್ರಶೇಖರಯ್ಯ ಹಿರೇಮಠ ಮನೆಗೆ ಬೆಂಕಿ ಹತ್ತಿದ ಹಿನ್ನೆಲೆಯಲ್ಲಿ ಅವರನ್ನು ಕಂಡು ಸಾಂತ್ವನ ಹೇಳಲು ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಆನೆಗೊಂದಿ ಉತ್ಸವ ಮಾಡುವ ಬಗ್ಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದ್ದು ಮಾರ್ಚಲ್ಲಿ ಉತ್ಸವ ಜರುಗುವ ನಿರೀಕ್ಷೆ ಇದೆ ಎಂದು ಹೇಳಿದರು.
undefined
ಹೋಗೋದಾದ್ರೆ ಮೊದಲೇ ಕಾಂಗ್ರೆಸ್‌ಗೆ ಬರಬಾರದಿತ್ತು: ಜಗದೀಶ್ ಶೆಟ್ಟರ್ ವಿರುದ್ಧ ರಾಯರೆಡ್ಡಿ ಕಿಡಿ!
ಮೋದಿ ಪ್ರಧಾನಿ ಆಗೋದಾದ್ರೆ ಎನ್‌ಡಿಎಗೆ ಬೆಂಬಲ
ಗಂಗಾವತಿ: ದೇಶದ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದಾದರೆ ಎನ್‌ಡಿಎಗೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಬೆಂಬಲಿಸುತ್ತದೆ ಎಂದು ಶಾಸಕ ಜನಾರ್ದನ ರೆಡ್ಡಿ ಹೇಳಿದರು. ನಗರದ ತಾಲೂಕು ಕ್ರೀಡಾಂಗಣದಲ್ಲಿ ಜರುಗಿದ 75ನೇಗಣರಾಜೋತ್ಸವಸಮಾರಂಬದ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು. ನರೇಂದ್ರ ಮೋದಿ ಅವರನ್ನು ಇಡೀ ದೇಶ ಮೆಚ್ಚುತ್ತದೆ. ಅಯೋಧ್ಯೆ ರಾಮಮಂದಿರದಲ್ಲಿ ಶ್ರೀರಾಮಚಂದ್ರನನ್ನು ಪ್ರತಿಷ್ಠಾಪಿಸಿ ಇಡಿ ಇತಿಹಾಸ ನಿರ್ಮಿಸಿದ್ದಾರೆ. ಇಂತಹ ನಾಯಕರು ದೇಶದ ಪ್ರಧಾನಿ ಮತ್ತೊಮ್ಮೆ ಆಗಬೇಕು. ಈ ನಿಟ್ಟಿನಲ್ಲಿ ತಮ್ಮ ಪಕ್ಷಸಂಪೂರ್ಣವಾಗಿ ಬೆಂಬಲಿಸು ಇದೆ ಎಂದರು. ತಾವು ಬಿಜೆಪಿ ಸೇರುವ ಪ್ರಶ್ನೆಯೆ ಇಲ್ಲ. ನನ್ನದು ಗಂಗಾವತಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವ ಗುರಿ ಹೊಂದಿದ್ದೇನೆ. ತಮಗೆ ರಾಜಕೀ ಯಕ್ಕಿಂತ ಜನರ ಸಮಸ್ಯೆ, ಕ್ಷೇತ್ರದ ಅಭಿವೃದ್ಧಿ ಮಾಡುವುದೇ ನನ್ನ ಗುರಿಯಾಗಿದೆ ಎಂದರು.
ಅನ್ಸಾರಿ ಅವರು ಅಭಿವೃದ್ಧಿಗೆ ಬೆಂಬಲಿಸಬೇಕೇ ಹೊರತು ಕೀಳು ಮಟ್ಟದ ರಾಜಕೀಯ ಮಾಡಬಾರದು. ಲೋಕಸಭೆ ಚುನಾವಣೆ ನಂತರ ಅನ್ಸಾರಿ ಮೂಲೆ ಸೇರುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಶಾಸಕರು ಉತ್ತರಿಸಿದರು.