ಬೊಮ್ಮಾಯಿ ಸಿಎಂ ಆದ್ರೆ ಕಿಂಗ್ ಮೇಕರ್ BSY : ಯಡಿಯೂರಪ್ಪ ನಿವಾಸಕ್ಕೆ ಶಾಸಕರ ಟೀಂ

By Suvarna News  |  First Published Jul 29, 2021, 12:58 PM IST
  • ಯಡಿಯೂರಪ್ಪ ಮಾಜಿ ಸಿಎಂ ಆದರೇನು ಪಕ್ಷದ ಶಾಸಕರಿಗೆ ಹಾಲಿ ಸಿಎಂ
  • ಬೊಮ್ಮಾಯಿ ಮುಖ್ಯಮಂತ್ರಿ ಆಗಿರಬಹುದು, ಆದರೆ ಕಿಂಗ್ ಮೇಕರ್ ಯಡಿಯೂರಪ್ಪ
  • ಹೀಗಾಗಿ ಮಾಜಿ ಸಿಎಂ ಯಡಿಯೂರಪ್ಪ ನಿವಾಸ ಸದ್ಯ ಪವರ್ ಸೆಂಟರ್ 

ಬೆಂಗಳೂರು (ಜು.29):   ಯಡಿಯೂರಪ್ಪ ಮಾಜಿ ಸಿಎಂ ಆದರೇನು ಪಕ್ಷದ ಶಾಸಕರಿಗೆ ಅವರೇ ಹಾಲಿ ಸಿಎಂ ! ಬೊಮ್ಮಾಯಿ ಮುಖ್ಯಮಂತ್ರಿ ಆಗಿರಬಹುದು, ಆದರೆ ಕಿಂಗ್ ಮೇಕರ್ ಯಡಿಯೂರಪ್ಪ ಎನ್ನುವುದು ಯಡಿಯೂರಪ್ಪ ಫಾಲೊವರ್ಸ್ ಮಾತಾಗಿದೆ. 

"

Tap to resize

Latest Videos

undefined

ಹೀಗಾಗಿ ಮಾಜಿ ಸಿಎಂ ಯಡಿಯೂರಪ್ಪ ನಿವಾಸ ಸದ್ಯ ಪವರ್ ಸೆಂಟರ್ ಆಗಿ ಬದಲಾಗಿದೆ. ಸಚಿವ ಸ್ಥಾನಾಕಾಂಕ್ಷಿಗಳು ಮುಖಂಡರು ಯಡಿಯೂರಪ್ಪ ಅವರನ್ನು ನಿವಾಸದಲ್ಲೆ ಭೇಟಿ ಮಾಡಲಾಗುತ್ತಿದೆ.  ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಲು ಯಡಿಯೂರಪ್ಪರ ಹಿಂದೆ ಬೆಂಬಲಿಗರು ಬಿದ್ದಿದ್ದು ಕಸರತ್ತು ನಡೆಸುತ್ತಿದ್ದಾರೆ.

ಶಾಸಕ ಜ್ಞಾನೇಂದ್ರಗೆ ಬೊಮ್ಮಾಯಿ ಸಂಪುಟದಲ್ಲಿ ಸಚಿವ ಸ್ಥಾನ ಕನ್ಫರ್ಮ್..?

ಯಡಿಯೂರಪ್ಪ ಸಾಹೇಬರು ಹೇಳಿದರೆ ಸಚಿವ ಆಗುತ್ತೇನೆ ಎನ್ನುವ ನಂಬಿಕೆ ಇದೆ ಎಂದು ಮೇಲಿಂದ ಮೇಲೆ ಯಡಿಯೂರಪ್ಪ ನಿವಾಸಕ್ಕೆ ಸಚಿವ ಸ್ಥಾನದ ಆಕಾಂಕ್ಷಿಗಳು ಭೇಟಿ ನೀಡುತ್ತಿದ್ದಾರೆ. ಒಮ್ಮೆ ಬೊಮ್ಮಾಯಿ ಭೇಟಿ ಮಾಡಿ, ಪವರ್ ಸೆಂಟರ್ ಯಡಿಯೂರಪ್ಪ ಮನೆಗೆ ಎಡತಾಕುತ್ತಿರುವ ಶಾಸಕರು. ನೆನ್ನೆಯಿಂದಲೂ ನಿರಂತರವಾಗಿ ಬಿಎಸ್‌ವೈ ಭೇಟಿ ಮಾಡುತ್ತಿದ್ದು, ತಮ್ಮ ಬೇಡಿಕೆ ಮಾಜಿ ಸಿಎಂ ಮುಂದಿಡುತ್ತಿದ್ದಾರೆ. 

ಎಸ್ ಆರ್ ವಿಶ್ವನಾಥ್, ಅಪ್ಪುಗೌಡ ಪಾಟೀಲ್, ರೇಣುಕಾಚಾರ್ಯ, ಮುನೇನಕೊಪ್ಪ, ತಿಪ್ಪಾರೆಡ್ಡಿ ನಿನ್ನೆ ಯಡಿಯೂರಪ್ಪರ ಮನೆಗೆ ಬಂದು ಮಾತುಕತೆ ನಡೆಸಿದ್ದಾರೆನ್ನಲಾಗಿದೆ. ಇಂದು ಬೆಳಗ್ಗೆ  ತೀರ್ಥಹಳ್ಳಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ, ಎಂಪಿ ಕುಮಾರಸ್ವಾಮಿ, ಅಂಗಾರ ಭೇಟಿ ಮಾಡಿದ್ದಾರೆ. ಜೊತೆಗೆ ನಿನ್ನೆ ಸಂಜೆ ಸಂಘದ ಪ್ರಮುಖ ಮುಕುಂದ್ ಅವರೂ ಯಡಿಯೂರಪ್ಪರ ಜೊತೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ಮಾಡಿ ತೆರಳಿದ್ದಾರೆ. 

ಈ ನಿಟ್ಟಿನಲ್ಲಿ ಸಚಿವ ಸ್ಥಾನಾಕಾಂಕ್ಷಿಗಳ ನಿರಂತರ ಭೇಟಿಯಿಂದಾಗಿ ಯಡಿಯೂರಪ್ಪರನ್ನು ವಿಶ್ವಾಸಕ್ಕೆ ಪಡೆದೆ ಸಂಪುಟ ವಿಸ್ತರಣೆ ನಡೆಯುತ್ತಾ  ಎನ್ನುವ ಪ್ರಶ್ನೆಗಳು ಎದ್ದಿವೆ.

click me!