ಶಾಸಕ ಜ್ಞಾನೇಂದ್ರಗೆ ಬೊಮ್ಮಾಯಿ ಸಂಪುಟದಲ್ಲಿ ಸಚಿವ ಸ್ಥಾನ ಕನ್ಫರ್ಮ್..?

By Suvarna News  |  First Published Jul 29, 2021, 12:08 PM IST
  • ನನಗೆ ಯಡಿಯೂರಪ್ಪ, ಈಶ್ವರಪ್ಪ ಇಬ್ಬರು ಇದ್ದಾಗ ಕ್ಯಾಬಿನೆಟ್ ನಲ್ಲಿ ಅವಕಾಶ ಸಿಗಬೇಕು ಅಂತ ಅಪೇಕ್ಷೆ ಪಟ್ಟಿದ್ದೆ 
  • ನೂತನ ಸಂಪುಟದಲ್ಲಿ ಸಚಿವ ಸ್ಥಾನ ಸಿಗುವ ಭರವಸೆಯಲ್ಲಿ ತೀರ್ಥಹಳ್ಳಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ  

ಬೆಂಗಳೂರು (ಜು.29): ನನಗೆ ಯಡಿಯೂರಪ್ಪ, ಈಶ್ವರಪ್ಪ ಇಬ್ಬರು ಇದ್ದಾಗ ಕ್ಯಾಬಿನೆಟ್ ನಲ್ಲಿ ಅವಕಾಶ ಸಿಗಬೇಕು ಅಂತ ಅಪೇಕ್ಷೆ ಪಟ್ಟಿದ್ದೆ ಅದರೆ ಅವಕಾಶ ಸಿಗಲಿಲ್ಲ ಎಂದು ತೀರ್ಥಹಳ್ಳಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ  ಹೇಳಿದರು. 

ಬೆಂಗಳೂರಿನಲ್ಲಿಂದು ಮಾತನಾಡಿದ ಜ್ಞಾನೇಂದ್ರ ಯಡಿಯೂರಪ್ಪ, ಈಶ್ವರಪ್ಪ ಇಬ್ಬರು ಇದ್ದಾಗ ಕ್ಯಾಬಿನೆಟ್ ನಲ್ಲಿ ಅವಕಾಶ ಬಯಸಿದ್ದೆ. ಅದರೆ ಯಡಿಯೂರಪ್ಪ, ಈಶ್ವರಪ್ಪ ಜೊತೆಗೆ ಶಂಕರಮೂರ್ತಿ ಸೇರಿ ಮೂರು ಜನ ಇದ್ದರು. ಅದಕ್ಕೆ ನಾನು ಯಾವುದೇ ಒತ್ತಡ ಹಾಕಿರಲಿಲ್ಲ ಎಂದರು. 

Latest Videos

undefined

ಈಶ್ವರಪ್ಪಗೆ ಸಚಿವ ಸ್ಥಾನ ಕೊಡುತ್ತಾರೋ ಇಲ್ಲವೋ ಎಂದು ಗೊತ್ತಿಲ್ಲ, ಅವರು ಇರಲಿ ಎಂದೇ ಅಪೇಕ್ಷೆ ಪಡುತ್ತೀನಿ. ಸಿಎಂ ಸ್ಥಾನಕ್ಕೆ ಬಿಎಸ್‌ವೈ ರಾಜೀನಾಮೆ ನೀಡಿದ್ದು ನೋವಿದೆ. ಆದರೆ ಬೊಮ್ಮಾಯಿ ಆಯ್ಕೆಯೂ ಉತ್ತಮವಾದುದು ಎಂದು ಶಾಸಕರು ಹೇಳಿದರು.  

 ಹಿರಿಯರನ್ನು ಧರ್ಮ ಸಂಕಟಕ್ಕೆ ತಳ್ಳಿತಾ ಶೆಟ್ಟರ್ ನಿರ್ಧಾರ : ಈಶ್ವರಪ್ಪ ಕಣ್ಣು ಎಲ್ಲಿ..?

ಬೊಮ್ಮಾಯಿ ಸಂಪುಟದಲ್ಲಿ ಸಚಿವ ಆಗಿ ಉತ್ತಮ ಕೆಲಸ ಮಾಡುವ ಅವಕಾಶ ಸಿಗುತ್ತದೆ ಎನ್ನುವ ನಂಬಿಕೆ ಇದೆ. ಉತ್ತಮ ಕೆಲಸ ಮಾಡುವ ಉತ್ಸಾಹದಲ್ಲಿ ಇದ್ದೀನಿ ಎಂದು ಶಾಸಜ ಜ್ಞಾನೇಂದ್ರ ಹೇಳಿದರು.  

"

ಶಾಸಕನಾಗಿ ನಾನು ಬಿಜೆಪಿಯಲ್ಲಿ ಸೀನಿಯರ್ ಇದ್ದೀನಿ :  9 ಬಾರಿ ಚುನಾವಣೆ ನಿಂತು, ನಾಲ್ಕನೇ ಬಾರಿಗೆ ತೀರ್ಥಹಳ್ಳಿ ಜನ ನನ್ನ ಆಯ್ಕೆ ಮಾಡಿದ್ದಾರೆ.  ನಮ್ಮ ಹಿರಿಯರು ಮೆಚ್ಚುವ ರೀತಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೀನಿ. ನಾನು ಒತ್ತಡ ತಂತ್ರ ಲಾಬಿ ಮಾಡಿಲ್ಲ. ನಾನು ಶ್ರಮ ಪಟ್ಟು ಬಿಎಸ್ವೈ ಜೊತೆ ಪಕ್ಷ ಕಟ್ಟಿದ್ದೀನಿ.  ನಾನು ಪಕ್ಷಕ್ಕೆ ಹಿರಿಯ... ನಾಯಕರಿಗೆ ಮುಜುಗರ ಆಗಬಾರದು ಎಂದು ಒತ್ತಡ ಹಾಕಿರಲಿಲ್ಲ ಎಂದರು. 

ಈಗಲೂ ಸಚಿವ ಸ್ಥಾನಕ್ಕಾಗಿ ಒತ್ತಡ ಹೇರಲ್ಲ.  ಖಂಡಿತವಾಗಿಯೂ ಈ ಬಾರಿ ನಮ್ಮ ಹಿರಿಯರು ನನ್ನ ಮಂತ್ರಿಯಾಗಿ ಮಾಡುತ್ತಾರೆ ಎನ್ನುವ ನಂಬಿಕೆ ಇದೆ. ನಾನು ಉಸ್ತುವಾರಿಗಳನ್ನ ಭೇಟಿ ಮಾಡಿಲ್ಲ. ಅಂತಹ ಸಂದರ್ಭ ಬಂದಿಲ್ಲ. ಯಾಕೆಂದರೆ ಹಿರಿಯರಿಗೆಲ್ಲ ನಾನು ಏನು ಎಂದು ಗೊತ್ತಿದೆ. ನಮ್ಮ ಸಂಘಟನೆಗೆ ಗೊತ್ತಿದೆ. ಬೊಮ್ಮಾಯಿಗೂ ತಿಳಿದಿದೆ. ನಾನು ಹಿರಿಯ ಎಂದು ತೋರಿಸಿಕೊಳ್ಳುವ ಅವಶ್ಯಕತೆ ಇಲ್ಲ. ಹಾಗಾಗಿ ಸಹಜವಾಗಿ ಸ್ಥಾನ ಸಿಗುತ್ತದೆ ಎಂದು ಅನಿಸುತ್ತಿದೆ  ಎಂದರು.

click me!