ನಾಗಮಂಗಲದಲ್ಲಿ ಬಿಜೆಪಿಯವರಿಂದಲೇ ಕೋಮುಗಲಭೆ ಆಗಿದೆ. ಗಲಭೆ ಮಾಡಿಸಿ ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಕು ಎನ್ನುವುದು ಬಿಜೆಪಿಯ ಪ್ರಯತ್ನ ಎಂದು ಮಡಿಕೇರಿಯಲ್ಲಿ ಸಣ್ಣ ನೀರಾವರಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವ ಎನ್.ಎಸ್ ಭೋಸರಾಜ್ ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು.
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಸೆ.14): ನಾಗಮಂಗಲದಲ್ಲಿ ಬಿಜೆಪಿಯವರಿಂದಲೇ ಕೋಮುಗಲಭೆ ಆಗಿದೆ. ಗಲಭೆ ಮಾಡಿಸಿ ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಕು ಎನ್ನುವುದು ಬಿಜೆಪಿಯ ಪ್ರಯತ್ನ ಎಂದು ಮಡಿಕೇರಿಯಲ್ಲಿ ಸಣ್ಣ ನೀರಾವರಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವ ಎನ್.ಎಸ್ ಭೋಸರಾಜ್ ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು. ಈಗ ಸರ್ಕಲ್ ಇನ್ಸ್ಪೆಕ್ಟರ್ ಅಮಾನತು ಆಗಿದೆ, ಅಲ್ಲಿನ ಎಸ್ಪಿ ಅವರಿಗೆ ನೋಟಿಸ್ ನೀಡಲಾಗಿದೆ. ತನಿಖೆ ಆರಂಭವಾಗಿದ್ದು, ಎಲ್ಲವೂ ಕೂಡ ನಾಲ್ಕೈದು ದಿನಗಳಲ್ಲಿ ಹೊರಬರಲಿದೆ. ಯಾರು ತಪ್ಪು ಮಾಡಿರುತ್ತಾರೋ ಅವರ ವಿರುದ್ಧ ಕ್ರಮವಾಗುತ್ತದೆ. ಅದು ಬಿಜೆಪಿಯವರಾಗಿರಲಿ, ಆರ್ ಎಸ್ ಎಸ್ ಅಥವಾ ಜೆಡಿಎಸ್ ನವರಾಗಿರಲಿ. ಯಾರೇ ಆದರೂ ಕ್ರಮ ಆಗುತ್ತದೆ ಎಂದು ಎಚ್ಚರಿಸಿದರು.
ಆದರೆ ಕುಮಾರಸ್ವಾಮಿಯವರಿಗೆ ಬೆಳಿಗ್ಗೆಯಿಂದ ಸಂಜೆವರೆಗೆ ಆರೋಪ ಮಾಡುವುದೇ ಕೆಲಸವಾಗಿಬಿಟ್ಟಿದೆ. ಆರೋಪ ಮಾಡುವುದಕ್ಕೆ ಕುಮಾರಸ್ವಾಮಿ, ಜೋಷಿಯವರಿಗೂ ಮತ್ತು ಜಗದೀಶ್ ಶೆಟ್ಟರಿಗೂ ಕಾಂಪಿಟೇಷನ್ ಶುರುವಾಗಿದೆ. ಅಮಿತ್ ಶಾ ಅವರ ಮುಂದೆ ಕುಮಾರಸ್ವಾಮಿ ಅವರು ಸ್ಟ್ರಾಂಗ್ ಆಗಬಾರದು ಎಂದು ಜೋಷಿಯವರಿಗೆ ಅನ್ನಿಸಿದೆ. ಹೀಗಾಗಿ ಇಷ್ಟು ವರ್ಷ ಕೇಂದ್ರದಲ್ಲಿ ಸಚಿವರಾಗಿದ್ದರೂ ಕೇಂದ್ರದಲ್ಲಿ ಮಾತನಾಡದ ಜೋಷಿಯವರು ಈಗ ಪ್ರತಿನಿತ್ಯ ನಮ್ಮ ಪಕ್ಷ ಹಾಗೂ ಸರ್ಕಾರದ ಬಗ್ಗೆ ಕಾಮೆಂಟ್ ಮಾಡುತ್ತಾರೆ ಎಂದರು. ಸಂಬಂಧ ಇರಲಿ ಇಲ್ಲದಿರಲಿ, ಸರಿಯಿರಲಿ ತಪ್ಪಿರಲಿ ನಿತ್ಯ ಇಲ್ಲಿ ಮಾತನಾಡುತ್ತಿದ್ದಾರೆ. ಇವರೆಲ್ಲ ಮಾತನಾಡಿದ ಮೇಲೆ ಅಲ್ಲಿ ಬಸನಗೌಡ ಯತ್ನಾಳ್ ಇವರೆಲ್ಲರ ವಿರುದ್ಧ ಮಾತನಾಡುತ್ತಾರೆ. ಇವರೆಲ್ಲರನ್ನು ಸರಿಪಡಿಸಲು ಆರ್ ಎಸ್ ಎಸ್ ನವರು ಡೀಲಿಗೆ ಇಳಿಯುತ್ತಾರೆ.
ಗಣಪತಿ ಮೇಲೆ ಕಲ್ಲು, ಚಪ್ಪಲಿ, ಪೆಟ್ರೋಲ್ ಬಾಂಬ್ ಎಸೆದಿದ್ದು ಮತಾಂಧ ಮುಸ್ಲಿಮರು: ಸಿ.ಟಿ.ರವಿ ವಾಗ್ದಾಳಿ
ಇವರು ನಮಗೆ ಪಾಠ ಮಾಡಲು ಬರುತ್ತಾರೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮತ್ತು ಬಿಜೆಪಿ ವಿರುದ್ಧ ಭೋಸರಾಜ್ ವಾಗ್ದಾಳಿ ನಡೆಸಿದರು. ರಾಷ್ಟ್ರೀಯ ಪಕ್ಷ, ಮೋದಿಯವರ ನಾಯಕತ್ವ ಮತ್ತು ಅಮಿತ್ ಶಾ ಅವರ ನಾಯಕತ್ವ ಅಂತಾರೆ. ಆದರೆ ನಾಚಿಕೆ ಇಲ್ಲ ಅವರಿಗೆ, ಯಾಕಿಷ್ಟು ಮಾತನಾಡುತ್ತಾರೆ ಅಂತ ಸಣ್ಣ ಮಕ್ಕಳು ಕೂಡ ಅವರ ಬಗ್ಗೆ ಮಾತನಾಡುವಂತೆ ಆಗಿದೆ. ಸಮಯ ಸಂದರ್ಭ ಎನ್ನುವುದೇ ಇಲ್ಲ ಅವರಿಗೆ, ಪ್ರತಿನಿತ್ಯ ಬೆಳಿಗ್ಗೆಯಿಂದ ಸಂಜೆ ವರೆಗೆ ಮಾತನಾಡುವುದೇ ಆಗಿದೆ. ಮಾತನಾಡುವುದಕ್ಕೆ ಬಿಜೆಪಿ, ಜೆಡಿಎಸ್ ನನವರಲ್ಲಿ ಕಾಂಪಿಟೇಷನ್ ಶುರುವಾಗಿದೆ.
ಆದರೆ ಯಾರು ಏನೇ ಮಾತನಾಡಲಿ, ಸರ್ಕಾರ ಚನ್ನಾಗಿ ನಡೆಯುತ್ತಿದೆ ಯಾರು ಅಲ್ಲಾಡಿಸುವುದಕ್ಕೆ ಆಗಲ್ಲ. ರಾಜ್ಯದಲ್ಲಿ ಒಳ್ಳೆಯ ಅಭಿವೃದ್ಧಿ ಕೆಲಸಗಳು ನಡೆಯುತ್ತವೆ ಎಂದು ಬೋಸರಾಜ್ ಹೇಳಿದರು. ಸಿಎಂ ಸ್ಥಾನಕ್ಕಾಗಿ ಡಿಕೆಶಿ ಅಮೆರಿಕಾದಲ್ಲಿ ರಾಹುಲ್ ಗಾಂಧಿಯವರನ್ನು ಭೇಟಿ ಆಗುತ್ತಿದ್ದಾರೆಂಬ ಎನ್ನುವುದೆಲ್ಲಾ ಬಿಜೆಪಿ, ಜೆಡಿಎಸ್ ನವರು ಮಾಡುವುದು ಸುಳ್ಳು ಆರೋಪ ಅಷ್ಟೇ. ಬಿಜೆಪಿ, ಜೆಡಿಎಸ್ ನವರಿಗೆ ಮಾಡಲು ಬೇರೆ ಕೆಲಸವಿಲ್ಲ. ಬೆಳಿಗ್ಗೆಯಿಂದ ಸಂಜೆಯವರೆಗೆ ಬರೀ ಸುಳ್ಳು ಹೇಳುವ ಮೂಲಕ ಜನರನ್ನು ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ರಾಜ್ಯಕ್ಕೆ ಏನು ಅಭಿವೃದ್ಧಿ ಕೆಲಸ ಆಗಬೇಕಾಗಿದೆ, ಕೇಂದ್ರದಿಂದ ರಾಜ್ಯಕ್ಕೆ ಏನು ಅನ್ಯಾಯವಾಗಿದೆ ಅಂತ ಮಾತನಾಡಲ್ಲ. ರಾಜ್ಯಕ್ಕೆ ಮಲತಾಯಿ ಧೋರಣೆ ಆಗುತ್ತಿದೆ, ರಾಜ್ಯಕ್ಕೆ ಕೊಡಬೇಕಾಗಿರುವ ಅನುದಾನ ದೊರೆಯುತ್ತಿಲ್ಲ.
ಕಾಂಗ್ರೆಸ್ ಗ್ಯಾರಂಟಿ ಯೋಜನೆ ಬಡವರ ಆಸರೆಯ ಬೆಳಕು: ಶಾಸಕ ಬೇಳೂರು ಗೋಪಾಲಕೃಷ್ಣ
ಇದ್ಯಾವುದರ ಬಗ್ಗೆ ಕುಮಾರಸ್ವಾಮಿ ಅವರಾಗಲಿ, ಪ್ರಹ್ಲಾದ್ ಜೋಷಿ ಅಥವಾ ಆರ್ ಅಶೋಕ್ ಅವರು ಮಾತನಾಡಲ್ಲ. ಅವರಿಗೆ ಏನಿದ್ದರೂ ಅಧಿಕಾರ ಪಡೆಯಬೇಕು ಅಷ್ಟೇ. ಸಿದ್ದರಾಮಯ್ಯ, ಡಿಕೆಶಿ ಮತ್ತು ನಮ್ಮ ಪಕ್ಷದ ಬಗ್ಗೆ ಮಾತನಾಡುವುದಕ್ಕಿಂತ ಅವರು ತಮ್ಮ ಪಕ್ಷದಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ತಿಳಿದುಕೊಳ್ಳಲಿ. ನೀವೆಲ್ಲರೂ ಅಶಕ್ತರಿದ್ದೀರಿ ಅಂತ ಆರ್ ಎಸ್ ಎಸ್ ಬಿಜೆಪಿಯವರಿಗೆ ಛೀಮಾರಿ ಹಾಕಿದೆ. ಇದಕ್ಕಿಂತ ಅವರಿಗೆ ಹೆಚ್ಚಿನ ಛೀಮಾರಿ ಬೇಕಾ.? ಆರ್ ಎಸ್ ಎಸ್ ಬಂದು ಅವರನ್ನು ಸರಿಪಡಿಸಬೇಕಾ. ನಾಚಿಕೆ ಇಲ್ಲ ಅವರಿಗೆ, ನಮ್ಮ ಬಗ್ಗೆ ಮಾತನಾಡುವುದಕ್ಕೆ ಅವರು ಅಯೋಗ್ಯರು ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು.