ಗಣಪತಿ ಮೇಲೆ ಕಲ್ಲು, ಚಪ್ಪಲಿ, ಪೆಟ್ರೋಲ್ ಬಾಂಬ್ ಎಸೆದಿದ್ದು ಮತಾಂಧ ಮುಸ್ಲಿಮರು: ಸಿ.ಟಿ.ರವಿ ವಾಗ್ದಾಳಿ

By Govindaraj S  |  First Published Sep 14, 2024, 6:07 PM IST

ಗಣಪತಿ ಮೇಲೆ ಕಲ್ಲು, ಚಪ್ಪಲಿ, ಪೆಟ್ರೋಲ್ ಬಾಂಬ್ ಎಸೆದಿದ್ದು ಮತಾಂಧ ತುರುಕರು. ಆದರೆ, ಸರ್ಕಾರ ಕೇಸ್ ದಾಖಲಿಸಿದ್ದು ಮಾತ್ರ ಗಣಪತಿ ಕೂರಿಸಿದವರ ಮೇಲೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ. 


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಸೆ.14): ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಗಣಪತಿ ಮೆರವಣಿಗೆ ವೇಳೆ ಹಿಂದೂಗಳು ಮುಸ್ಲಿಮರ ಮೇಲೆ, ಮಸೀದಿ ಮೇಲೆ ಯಾವ ಕಲ್ಲು, ಪೆಟ್ರೋಲ್ ಬಾಂಬ್ ಎಸೆದಿಲ್ಲ. ಆದರೆ, ಗಣಪತಿ ಮೇಲೆ ಕಲ್ಲು, ಚಪ್ಪಲಿ, ಪೆಟ್ರೋಲ್ ಬಾಂಬ್ ಎಸೆದಿದ್ದು ಮತಾಂಧ ತುರುಕರು. ಆದರೆ, ಸರ್ಕಾರ ಕೇಸ್ ದಾಖಲಿಸಿದ್ದು ಮಾತ್ರ ಗಣಪತಿ ಕೂರಿಸಿದವರ ಮೇಲೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ. ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಣಪತಿ ಮೆರವಣಿಗೆ ಮಾಡುತ್ತಿದ್ದವರು ಯಾವ ಸಾಬರ ಮೇಲೂ ತಲ್ವಾರ್ ಝಳಪಿಸಿಲ್ಲ. ಮಸೀದೆ ಮೇಲೆ ಕಲ್ಲು ತೂರಿಲ್ಲ. ತಲ್ವಾರ್ ಝಳಪಿಸಿದ್ದೇ ಮತಾಂಧ ತುರುಕರು ಎಂದು ವಾಗ್ದಾಳಿ ನಡೆಸಿದ್ದಾರೆ. ಕಲ್ಲು ತೂರಿ, ಚಪ್ಪಲಿ ಎಸೆದು, ಪೆಟ್ರೋಲ್ ಬಾಂಬ್ ಹಾಕಿದ್ದು ಮತಾಂಧ ತುರುಕರು. ಆದರೆ, ಈ ಹೇಡಿ ಸರ್ಕಾರ ಮತಾಂಧರ ಬಿಟ್ಟು ಗಣಪತಿ ಕೂರಿಸಿದವರ ಮೇಲೆಯೇ ಎ1 ಆರೋಪಿಯಾಗಿ ಮಾಡಿದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

Latest Videos

undefined

ಲಾಡೆನ್ ಬಂದ್ರೆ ಹಮಾರ ಆದ್ಮಿ ಅಂತ ಬಿಟ್ಟುಕೊಳ್ತಾರೆ, ಮುತಾಲಿಕ್ ಹೋದ್ರೆ ಇವರಿಗೆ ಸಂಕಟ: 1 ರಿಂದ 18ನೇ ಆರೋಪಿಯವರೆಗೆ ಎಲ್ಲರೂ ಶಾಂತಿಯುತ ಮೆರವಣಿಗೆ ಮಾಡಿದ್ದೋರು. ಆದರೆ, ಈ ಹೇಡಿ ಸರ್ಕಾರ ಅವರ ಮೇಲೆ ಕೇಸ್ ದಾಖಲಿಸಿದೆ ಎಂದಿದ್ದಾರೆ. ಓಲೈಕೆ ರಾಜನೀತಿ ಪರಿಣಾಮ ಮತಾಂದತೆಗೆ ಕೊನೆ ಇಲ್ಲದಂತಾಗಿದೆ. ಗಣಪತಿ ಮೆರವಣಿಗೆ ಈ ರಸ್ತೆಯಲ್ಲಿ ಬರಬಾರದು ಅನ್ನೊಕೆ ಅವನ್ಯಾವನು. ಮೊದಲು ಅವನನ್ನ ಒದ್ದು ಒಳಗೆ ಹಾಕಬೇಕು. ಆದರೆ, ಗಣಪತಿ ಕೂರಿಸಿದವರನ್ನೇ ಎ1 ಮಾಡಿರೋ ಈ ಸರ್ಕಾರಕ್ಕೆ ನಾಚಿಕೆ ಆಗಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ. ಮಂಡ್ಯ ಜಿಲ್ಲೆ ನಾಗಮಂಗಲಕ್ಕೆ ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ಗೆ ನಿರ್ಬಂಧ ಹೇರಿರೋದ್ರ ಜೊತೆ ಶಾಂತಿ ಸಭೆಗೆ ಕೂಡ ಮಾಧ್ಯಮಗಳಿಗೆ ನಿರ್ಬಂಧ ಹೇರಿರೋದಕ್ಕೆ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. 

ಲಾಡೆನ್ ಬಂದ್ರೆ ಹಮಾರ ಆದ್ಮಿ ಅಂತ ಬಿಟ್ಟುಕೊಳ್ತಾರೆ. ಮುತಾಲಿಕ್ ಹೋದ್ರೆ ಇವರಿಗೆ ಸಂಕಟ. ಬಾಂಬ್ ಹಾಕೋನೋ, ತಾಲಿಬಾನಿಗಳು ಬಂದ್ರೆ ನಮ್ದುಕೆ ಆದ್ಮಿ ನಮ್ಗೆ ಓಟ್ ಹಾಕ್ತಾರೆ ಅಂತ ಕಾಂಗ್ರೆಸ್ಸಿಗರು ತಲೆ ಮೇಲೆ ಟೋಪಿ ಹಾಕ್ಕೊಂಡ್ ಕರೆದುಕೊಳ್ತಾರೆ. ತಾಲಿಬಾನ್ಗಳು ಅವ್ರೋ... ಇವ್ರೋ.... ಯಾರು ಅಂತಾನೆ ಗೊತ್ತಾಗದಂತೆ ನಾಟಕ ಮಾಡ್ತಾರೆ ಎಂದು ವ್ಯಂಗ್ಯವಾಡಿದ್ದಾರೆ. ಮಾಧ್ಯಮವನ್ನ ಮುಚ್ಚಿಟ್ಟು ಶಾಂತಿ ಸಭೆ ಏಕೆ. ನಿಮ್ಮ ಹುಳುಕು ಮುಚ್ಚಿಕೊಳ್ಳೋಕಾ ಎಂದು ಪ್ರಶ್ನಿಸಿದ್ದಾರೆ. ಮೊದಲು ಇಂಟಾಲರೆನ್ಸ್ ಮೈಂಡ್ ಸೆಟ್ ಸರಿಪಡಿಸಿ, ಪೆಟ್ರೋಲ್ ಬಾಂಬ್ ತಯಾರಿಸಿದವನ ಮನೆ ಮೇಲೆ ಬುಲ್ಡೋಜರ್ ಹತ್ತಿಸಿ ಆಗ ಶಾಂತಿ ತಾನಾಗೇ ನೆಲೆಸುತ್ತೆ ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. 

ಹೊಸದಾಗಿ 51 ಇಂದಿರಾ ಕ್ಯಾಂಟೀನ್‌ ನಿರ್ಮಾಣ: ಬಿಬಿಎಂಪಿ ಮುಖ್ಯ ಆಯುಕ್ತ ಸೂಚನೆ

ಭಾರತ ವಿರೋಧಿ ನಾಯಕರೋ ರಾಹುಲ್?: ರಾಹುಲ್ ಗಾಂಧಿ ಲೋಕಸಭೆ ವಿರೋಧ ಪಕ್ಷದ ನಾಯಕರೋ ಅಥವ ಭಾರತ ವಿರೋಧಿ ನಾಯಕರೋ ಎಂಬ ಅನುಮಾನ ಕಾಡುತ್ತಿದೆ ಎಂದು ರಾಹುಲ್ ಗಾಂಧಿ ವಿರುದ್ಧ ಸಿ.ಟಿ ರವಿ ವಾಗ್ದಾಳಿ ನಡೆಸಿದ್ದಾರೆ. ಭಾರತಕ್ಕೆ ಚೀನಾ-ಪಾಕಿಸ್ತಾನ ವಿರೋಧಿಗಳು. ಆದರೆ, ರಾಹುಲ್ ಗಾಂಧಿ ಹೇಳಿಕೆ ಭಾರತಕ್ಕೆ ವಿರೋಧಿಯಂತಿದೆ ಎಂದು ಕಿಡಿಕಾರಿದ್ದಾರೆ. ರಾಹುಲ್ ಗಾಂಧಿ ಅಮೇರಿಕಾಲದಲ್ಲಿ ಇಲಿಯಾಣ್ ಓಮರ್ ಎಂಬ ಭಾರತ ವಿರೋಧಿ ಸಂಸದೆಯನ್ನ ಭೇಟಿಯಾಗಿದ್ದಾರೆ. ಇಂಗ್ಲೆಂಡಿಗೆ ಭೇಟಿ ನೀಡಿದಾಗ ಭಾರತ ವಿರೋಧಿಗಳನ್ನ ಭೇಟಿ ಮಾಡುತ್ತಾರೆ. ಅಮೆರಿಕಾದಲ್ಲಿ ಭಾರತ ವಿರೋಧಿಯನ್ನ ಭೇಟಿ ಮಾಡಿ ಮಾತುಕತೆ ಮಾಡ್ತಾರೆ. ಚೀನಾವನ್ನ ಹೊಗಳುತ್ತಾರೆ. ಹೊರದೇಶದಲ್ಲಿ ಭಾರತವನ್ನ ತೆಗಳುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

click me!