ಕಾಂಗ್ರೆಸ್ ಗ್ಯಾರಂಟಿ ಯೋಜನೆ ಬಡವರ ಆಸರೆಯ ಬೆಳಕು: ಶಾಸಕ ಬೇಳೂರು ಗೋಪಾಲಕೃಷ್ಣ

By Kannadaprabha News  |  First Published Sep 14, 2024, 6:32 PM IST

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಮೂಲಕ ಸಾಕಷ್ಟು ಕುಟುಂಬಗಳು ಭರವಸೆಯಲ್ಲಿ ಬದುಕು ಕಟ್ಟಿಕೊಂಡಿವೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಅಭಿಪ್ರಾಯಪಟ್ಟರು. 


ಸಾಗರ (ಸೆ.14): ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಮೂಲಕ ಸಾಕಷ್ಟು ಕುಟುಂಬಗಳು ಭರವಸೆಯಲ್ಲಿ ಬದುಕು ಕಟ್ಟಿಕೊಂಡಿವೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಅಭಿಪ್ರಾಯಪಟ್ಟರು. ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರದ ಗ್ಯಾರಂಟಿ ಯೋಜನೆ ಬಡವರ ಪಾಲಿಗೆ ಆಸರೆಯ ಬೆಳಕು ಎಂದರು. ಪ್ರತಿ ವರ್ಷ ರಾಜ್ಯದಲ್ಲಿ ಐದು ಗ್ಯಾರಂಟಿಗಾಗಿ ೫೪ ಸಾವಿರ ಕೋಟಿ ರು. ವಿನಿಯೋಗ ಮಾಡಲಾಗುತ್ತಿದೆ. ಈ ಮೊತ್ತ ಗೋವಾ ರಾಜ್ಯದ ಬಜೆಟ್ನಷ್ಟು ದೊಡ್ಡದು ಎಂದರೂ ಅಚ್ಚರಿಯಿಲ್ಲ. 

ರಾಜ್ಯದ ಆರು ಕೋಟಿ ಜನರಿಗೆ ಒಂದಿಲ್ಲೊಂದು ಹಂತದಲ್ಲಿ ಮನೆಗೊಬ್ಬರಿಗಾದರೂ ಯೋಜನೆ ತಲುಪುತ್ತಿದೆ. ಅನೇಕ ಬಡ ಕುಟುಂಬಗಳಿಗೆ ಗ್ಯಾರಂಟಿ ಯೋಜನೆಯಿಂದ ಹೊಸ ಬದುಕು ಸಿಕ್ಕಿದೆ ಎಂದು ಹೇಳಿದರು. ಬಿಜೆಪಿ ಗ್ಯಾರಂಟಿಯನ್ನು ಬೋಗಸ್ ಎಂದು ಹೇಳುತ್ತಿರುವುದು ಕೀಳು ಮನಸ್ಥಿತಿಗೆ ಸಾಕ್ಷಿಯಾಗಿದೆ. ಮಧ್ಯವರ್ತಿ ಇಲ್ಲದೇ ನೇರ ವಾಗಿ ಫಲಾನುಭವಿಗಳ ಖಾತೆಗೆ ಹಣ ಪಾವತಿಯಾಗುತ್ತಿದೆ. ಇಂತಹ ಯೋಜನೆ ಬಗ್ಗೆ ಅಪಸ್ವರ ನುಡಿಯುತ್ತಿರುವ ಬಿಜೆಪಿ ಬಡಜನರ ವಿರೋಧಿಯಾಗಿದೆ ಎಂದು ಹೇಳಿದರು. 

Tap to resize

Latest Videos

undefined

ಗಣಪತಿ ಮೇಲೆ ಕಲ್ಲು, ಚಪ್ಪಲಿ, ಪೆಟ್ರೋಲ್ ಬಾಂಬ್ ಎಸೆದಿದ್ದು ಮತಾಂಧ ಮುಸ್ಲಿಮರು: ಸಿ.ಟಿ.ರವಿ ವಾಗ್ದಾಳಿ

ಗ್ಯಾರಂಟಿ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಬಿ.ಆರ್.ಜಯಂತ್ ಮಾತನಾಡಿ, ರಾಜ್ಯದಲ್ಲಿ ಸಂಪನ್ಮೂಲ ಮತ್ತು ಸಂಪತ್ತನ್ನು ಬಡಜನರಿಗೆ ಹಂಚುವ ವಿಶೇಷ ಯೋಜನೆಯೆ ಗ್ಯಾರಂಟಿ ಅನುಷ್ಠಾನವಾಗಿದೆ. ಬಡವರ ಕೈಯಲ್ಲಿ ಹಣ ಚಲಾವಣೆ ಯಾಗುತ್ತಿರುವ ವಿಶೇಷ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತರುವ ಮೂಲಕ ಜನರ ಪೂರ್ಣ ಮೆಚ್ಚಿಗೆ ಗಳಿಸಿದೆ. ನೂತನ ಕಚೇರಿ ಮೂಲಕ ಸೌಲಭ್ಯ ಸಿಗದವರಿಗೆ ಸೌಲಭ್ಯ ಕಲ್ಪಿಸುವ ಕೆಲಸ ಮಾಡಲಾಗುತ್ತದೆ ಎಂದು ಹೇಳಿದರು. ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯೆ ಪ್ರಫುಲ್ಲಾ ಮಧುಕರ್, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಚಂದ್ರಭೂಪಾಲ್, ಪ್ರಮುಖರಾದ ಕಲಸೆ ಚಂದ್ರಪ್ಪ, ಗುರುಕೃಷ್ಣ ಶೆಣೈ, ಚಂದ್ರಶೇಖರ್, ಎಚ್.ಕೆ.ನಾಗಪ್ಪ ಇನ್ನಿತರರು ಹಾಜರಿದ್ದರು.

ಶಿಕ್ಷಣ ವ್ಯವಸ್ಥೆ ಬಲಗೊಂಡಷ್ಟು ದೇಶದ ಪ್ರಗತಿ ವೇಗ ಹೆಚ್ಚು: ಸಮಾಜದಲ್ಲಿ ಬೋಧನಾ ವೃತ್ತಿ ಅತ್ಯಂತ ಶ್ರೇಷ್ಠ ವೃತ್ತಿಗಳಲ್ಲಿ ಒಂದು ಎಂಬುದನ್ನು ಪರಿಗಣಿಸಿರುವ ದೇಶ ನಮ್ಮದು. ಬದುಕಿಗೆ ಗುರಿ ರೂಪಿಸುವುದರಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು. ಶಿಕ್ಷಣ ವ್ಯವಸ್ಥೆಯು ಬಲಗೊಂಡಷ್ಟು ದೇಶದ ಪ್ರಗತಿಯ ವೇಗ ಹೆಚ್ಚುತ್ತದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದರು. ಇಲ್ಲಿನ ಈಡಿಗರ ಭವನದಲ್ಲಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮೌಲ್ಯಯುತ ಸಮಾಜ ರೂಪಿಸುವ ಶಿಕ್ಷಕರಿಗೆ ತಮ್ಮದೇ ಆದ ದಿನವೊಂದನ್ನು ಸಂಭ್ರಮಿಸುವ ಅವಕಾಶ ಇದು. 

ಶಿಕ್ಷಕರ ಮೇಲಿನ ಜವಾಬ್ದಾರಿ ಗಳು, ಅವರನ್ನು ವಿದ್ಯಾರ್ಥಿಗಳು ಮತ್ತು ಜನರು ನೋಡುವ ಬಗೆ ಹಾಗೂ ಶಿಕ್ಷಕರ ಮನೋಭಾವಗಳು ಕೂಡ ಈ ಕಾಲಘಟ್ಟ ದಲ್ಲಿ ಬದಲಾಗಿದೆ. ಆದರೆ ಅವರ ಹೊಣೆಗಾರಿಕೆಗಳು ಬದಲಾಗಿಲ್ಲ. ಅವರ ಜವಾಬ್ದಾರಿ ಮತ್ತು ಒತ್ತಡಗಳು ಇನ್ನಷ್ಟು ಹೆಚ್ಚಾಗಿವೆ. ಇಂತಹ ಅನೇಕ ಕಾರಣಗಳಿಂದಾಗಿ ‘ಶಿಕ್ಷಕರ ದಿನಾಚರಣೆ’ ಮಹತ್ವ ಪಡೆದುಕೊಳ್ಳುತ್ತದೆ ಎಂದರು. ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಶಿಕ್ಷಕ ವೃತ್ತಿಯೆಂದರೆ ಅತ್ಯಂತ ಪರಿಶ್ರಮದಿಂದ ಕೂಡಿದ ವೃತ್ತಿಯಾಗಿದ್ದು, ತರಗತಿ ಯಲ್ಲಿ ಬರುವ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕುವ ಹಾಗೂ ಯಶಸ್ವಿಯಾಗಿ ತರಗತಿಯನ್ನು ನಿರ್ವಹಿಸುವ ಬಗ್ಗೆ ನಿತ್ಯ ಚಿಂತನೆಗೈಯುವ, ಅಧ್ಯಯನಶೀಲತೆಯನ್ನು ಅವಲಂಬಿಸಿದ ಈ ವೃತ್ತಿಯಿಂದಾಗಿ ಶಿಕ್ಷಕರು ನಿವೃತ್ತಿಯ ಬಳಿಕವೂ ಸಮಾಜದಲ್ಲಿ ಆದರಣೀಯರಾಗಿರುತ್ತಾರೆ ವೃತ್ತಿಯ ಮೇಲೆ ನಿಷ್ಠೆ ಹಾಗೂ ಪ್ರೀತಿ, ದುಡಿಯುವ ಸಂಸ್ಥೆಯೊಂದಿಗೆ ತಾದಾತ್ಮ್ಯ, ಸತತ ಅಧ್ಯಯನ ಶೀಲತೆ, ವಿದ್ಯಾರ್ಥಿಗಳ ಜತೆ ಅತ್ಯಂತ ಪ್ರೀತಿಯ ಹಾಗೂ ಸ್ನೇಹಪೂರ್ಣ ನಡವಳಿಕೆ ಎಂಬ ಪಂಚಾಂಗದ ಆಧಾರದ ಮೇಲೆ ಶಿಕ್ಷಕ ವೃತ್ತಿಯ ಯಶಸ್ಸು ಅವಲಂಭಿಸಿದೆ. 

ಹೊಸದಾಗಿ 51 ಇಂದಿರಾ ಕ್ಯಾಂಟೀನ್‌ ನಿರ್ಮಾಣ: ಬಿಬಿಎಂಪಿ ಮುಖ್ಯ ಆಯುಕ್ತ ಸೂಚನೆ

ಇದರ ಜತೆ ರಾಷ್ಟ್ರ ಚಿಂತನೆ ಹಾಗೂ ಸೇವಾ ಭಾವನೆಗೆ ವಿದ್ಯಾರ್ಥಿಗಳನ್ನು ಪ್ರಚೋದಿಸುವುದು ಕೂಡ ಶಿಕ್ಷಕನ ಕರ್ತವ್ಯವಾಗಿದೆ. ವಿದ್ಯಾರ್ಥಿಗಳ ಜೀವನ ಮತ್ತು ವೃತ್ತಿಗೆ ಸೂಕ್ತ ರೂಪು ನೀಡುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುವವರು ಶಿಕ್ಷಕರು. ಹೀಗಾಗಿ ಶಿಕ್ಷಕರನ್ನು ನೆನಪಿಸಿಕೊಳ್ಳುವುದು ಮತ್ತು ಗೌರವಿಸುವುದು ಈ ಆಚರಣೆಯ ಉದ್ದೇಶ. ದೇಶದ ಭವಿಷ್ಯ ಮಕ್ಕಳ ಕೈಯಲ್ಲಿದೆ, ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬ ಘೋಷ ವಾಕ್ಯಗಳನ್ನು ಕೇಳಿರು ತ್ತೇವೆ. ಅಂತಹ ಭವಿಷ್ಯದ ಪ್ರಜೆಗಳನ್ನು ಸಿದ್ಧಪಡಿಸುವ ಹಾಗೂ ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವ ಹೊಣೆ ಶಿಕ್ಷಕರ ಮೇಲಿರುತ್ತದೆ. ಎಸ್.ರಾಧಾಕೃಷ್ಣನ್‌ ಅವರಂತಹ ಮೇರು ವ್ಯಕ್ತಿತ್ವ ಹೊಂದಿದವರು ನಮ್ಮ ದೇಶದಲ್ಲಿದ್ದರು ಎನ್ನುವುದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ವಿಷಯ.

click me!