ಸುಮಲತಾರ ಹಾದಿಯಲ್ಲೇ ಹೋರಾಟ ಮಾಡುತ್ತೇನೆ ಎಂದ ಸಚಿವ

By Suvarna NewsFirst Published Jul 9, 2021, 7:01 PM IST
Highlights

* ಮಂಡ್ಯದಲ್ಲಿ ಅಕ್ರಮಗಣಿಗಾರಿಕೆ ಆರೋಪ-ಪ್ರತ್ಯಾರೋಪ
* ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ಪ್ರತಿಕ್ರಿಯೆ
* ಸುಮಲತಾ ಅಂಬರೀಶ್ ಹಾದಿಯಲ್ಲೇ ಹೋರಾಟ ಎಂದ ನಾರಾಯಣಗೌಡ

ಮಂಡ್ಯ, (ಜುಲೈ.09): ಕೆಆರ್​ಎಸ್ ಅಣೆಕಟ್ಟೆಯಲ್ಲಿ ಬಿರುಕು ಬಿಟ್ಟಿದೆ ಎಂಬ ವಿವಾದ ದಳಪತಿಗಳು ಹಾಗೂ ಸುಮಲತಾ ಅಂಬರೀಶ್ ನಡುವೆ  ವೈಯಕ್ತಿಕ ಆರೋಪ-ಪ್ರತ್ಯಾರೋಪಕ್ಕೆ ಬಂದು ನಿಂತಿದೆ.

 ಇದರ ನಡುವೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ಪ್ರತಿಕ್ರಿಯಿಸಿದ್ದು, ಅಕ್ರಮ ಗಣಿಗಾರಿಕೆ ಬಗ್ಗೆ ಮಾಹಿತಿ ನೀಡದ ಅಧಿಕಾರಿಗಳಿಗೆ ಇಂದೇ ನೋಟಿಸ್ ಜಾರಿಗೊಳಿಸಲು ಮಂಡ್ಯ ಜಿಲ್ಲಾಧಿಕಾರಿಗೆ ಸೂಚನೆ ನೀಡುತ್ತೇನೆ ಎಂದರು.

 ನಾನು ಸುಮ್ಮನೆ ಕೂರಲ್ಲ, ಏನು ಮಾಡ್ತೀನೋ ನೋಡುತ್ತಿರಿ: ಸುಮಲತಾ ಚಾಲೆಂಜ್!

ಹಿಂದಿನ ಅಧಿಕಾರಿ ಅಕ್ರಮ ಗಣಿಗಾರಿಕೆಗೆ ಸಾಥ್ ನೀಡಿದ್ದರು. ಈಗಿರುವ ಅಧಿಕಾರಿಗಳೂ ಅದೇ ಹಾದಿ ಹಿಡಿದಿದ್ದರೆ ಅವರಿಗೆ ನೋಟಿಸ್ ನೀಡುತ್ತೇವೆ. ಅಕ್ರಮ ಗಣಿಗಾರಿಕೆ ಬಗ್ಗೆ ತನಿಖೆಗೆ ಸಚಿವರ ಜತೆ ಮಾತನಾಡುತ್ತೇನೆ. ಅಕ್ರಮ ಗಣಿಗಾರಿಕೆ ಪಟ್ಟಿ ಕೊಡಲು ತಿಂಗಳಿಂದ ಕೇಳುತ್ತಿದ್ದೇನೆ. ಈ ಅಕ್ರಮ‌ ನಿಲ್ಲದೇ ಇದ್ದಲ್ಲಿ ಸಂಸದೆ ಸುಮಲತಾ ಅಂಬರೀಶ್ ಹಾದಿಯಲ್ಲೇ ಹೋರಾಟ ನಡೆಸುತ್ತೇನೆ ಎಂದು ಹೇಳಿದ ದರು.

ಅಗತ್ಯ ಬಿದ್ದರೆ ಅಕ್ರಮ ಗಣಿಗಾರಿಕೆಯ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸುತ್ತೇನೆ.  ಅಕ್ರಮ ಗಣಿಗಾರಿಕೆಗೆ ಅಧಿಕಾರಿಗಳೇ ಕಾರಣ. ಅಧಿಕಾರಿಗಳ ಸಹಕಾರ ಇಲ್ಲದೆ ಅಕ್ರಮ ಗಣಿಗಾರಿಕೆ ನಡೆಯಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಅಭಿವೃದ್ಧಿ ಕೆಲಸಗಳು ನಡೆಯಬೇಕಾದರೆ ಗಣಿಗಾರಿಕೆ ಬೇಕು, ಎಲ್ಲಾ‌ ಕಡೆ ರಾಯಲ್ಟಿ ನೂರಾರು ಕೋಟಿ‌ ಲೆಕ್ಕದಲ್ಲಿ ದೊರೆತರೆ ನಮ್ಮಲ್ಲಿ ಒಂದೆರಡು ಕೋಟಿ ಲೆಕ್ಕದಲ್ಲಿದೆ. ಅಕ್ರಮ ಗಣಿಗಾರಿಕೆ ಬಗೆಗೆ ಪಟ್ಟಿಕೊಡಿ ಎಂದು ನಾನು ಒಂದು ತಿಂಗಳಿನಿಂದ ಕೇಳುತ್ತಿದ್ದೇನೆ ಕೊಟ್ಟಿಲ್ಲ. ಅಕ್ರಮ‌ ಗಣಿಗಾರಿಕೆ ನಿಲ್ಲದೆ ಇದ್ರೆ ನಾನು ಸುಮಲತಾರ ಹಾದಿಯಲ್ಲೇ ಹೋರಾಟ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.

click me!