ಅಧಿಕಾರಿಗಳು ಕೊಟ್ಟ ಸಲಹೆಗಳನ್ನು ಕೂಡ ತಳ್ಳಿ ಹಾಕಿ ಅಕ್ರಮವಾಗಿ ಚೀನಾದಿಂದ ಪಿಪಿಇ ಕಿಟ್ ಖರೀದಿಸಿದ್ದಾರೆ. ಯಡಿಯೂರಪ್ಪ ಹಾಗೂ ಶ್ರೀರಾಮುಲು ಅವರ ಅಧಿಕಾರ ದುರುಪಯೋಗ ಮೈಕಲ್ ಕುನ್ಹಾ ಅವರ ವರದಿಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಹೆಣದ ಮೇಲೆ ಹಣ ಹೊಡೆ ದಿರುವ ಇವರ ಬಗ್ಗೆ ಇನ್ನೂ ಸಾಕಷ್ಟು ವರದಿ ಬರುವುದು ಬಾಕಿಯಿದೆ: ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು(ನ.10): ಲಜ್ಜೆಗೆಟ್ಟ ಬಿಜೆಪಿ ಸರ್ಕಾರದವರು ಅಧಿಕಾರಿಗಳ ಸಲಹೆ ಕೂಡ ತಳ್ಳಿ ಹಾಕಿ ಕೋರೋನಾ ವಿಚಾರದಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ. ಹೆಣದ ಮೇಲೆ ಹಣ ಹೊಡೆದಿರುವುದು ಸಾಬೀತಾಗಿದ್ದು, ಬಿಜೆಪಿಯವರಿಗೆ ಮಾನ ಮರ್ಯಾದೆ ಇದ್ದರೆ ಬಿ.ಎಸ್.ಯಡಿಯೂರಪ್ಪ ಅವರನ್ನು ಉಚ್ಚಾಟನೆ ಮಾಡಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಅಧಿಕಾರಿಗಳು ಕೊಟ್ಟ ಸಲಹೆಗಳನ್ನು ಕೂಡ ತಳ್ಳಿ ಹಾಕಿ ಅಕ್ರಮವಾಗಿ ಚೀನಾದಿಂದ ಪಿಪಿಇ ಕಿಟ್ ಖರೀದಿಸಿದ್ದಾರೆ. ಯಡಿಯೂರಪ್ಪ ಹಾಗೂ ಶ್ರೀರಾಮುಲು ಅವರ ಅಧಿಕಾರ ದುರುಪಯೋಗ ಮೈಕಲ್ ಕುನ್ಹಾ ಅವರ ವರದಿಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಹೆಣದ ಮೇಲೆ ಹಣ ಹೊಡೆ ದಿರುವ ಇವರ ಬಗ್ಗೆ ಇನ್ನೂ ಸಾಕಷ್ಟು ವರದಿ ಬರುವುದು ಬಾಕಿಯಿದೆ ಎಂದು ಹೇಳಿದರು.
ವಕ್ಫ್ ವಿವಾದ: ಬಿಜೆಪಿಯವ್ರು ಗೋಸುಂಬೆಗಿಂತ ವೇಗವಾಗಿ ಬಣ್ಣ ಬದಲಿಸ್ತಾರೆ - ಪ್ರಿಯಾಂಕ್ ಖರ್ಗೆ
ಬಿಜೆಪಿಯವರಿಗೆ ನೈತಿಕತೆ ಇದ್ದರೆ ವಿಜಯೇಂದ್ರ ಅವರು ಹದಿನೈದು ನಿಮಿಷದಲ್ಲಿ ರಾಜೀನಾಮೆ ನೀಡಬೇಕು. ಯಡಿಯೂರಪ್ಪ ಅವರನ್ನು ಪಕ್ಷದಿಂದಲೇ ಉಚ್ಚಾಟಿಸಬೇಕು ಎಂದು ಆಗ್ರಹಿಸಿದರು.
ಹಗರಣದಲ್ಲಿ ಮೋದಿಗೆ ಪಾಲು:
ದೇಶದಲ್ಲಿ ಕಡಿಮೆ ಬೆಲೆಗೆ ಪಿಪಿಇ ಕಿಟ್ ಲಭ್ಯವಿದ್ದರೂ ಚೀನಾದಿಂದ 3 ಲಕ್ಷ ಕಿಟ್ ತರಿಸಿದ್ದಾರೆ. ಮೋದಿ ಅವರಿಗೂ ಇದರಲ್ಲಿ ಪಾಲು ಇದೆಯೇ? ಎಂದು ಪ್ರಶ್ನಿಸಿದರು.