ಬ್ಲ್ಯಾಕ್‌ಮೇಲ್‌ ಮಾಡೋದು ಎಲ್ಲರಿಗೂ ಗೊತ್ತಿದೆ, ಪೆನ್‌ಡ್ರೈವ್‌ ವಿಚಾರಕ್ಕೆ ತಲೆಕೆಡಿಸಿಕೊಳ್ಳಲ್ಲ: ಸಚಿವ ಚೆಲುವರಾಯಸ್ವಾಮಿ

Published : Jul 09, 2023, 08:43 AM IST
ಬ್ಲ್ಯಾಕ್‌ಮೇಲ್‌ ಮಾಡೋದು ಎಲ್ಲರಿಗೂ ಗೊತ್ತಿದೆ, ಪೆನ್‌ಡ್ರೈವ್‌ ವಿಚಾರಕ್ಕೆ ತಲೆಕೆಡಿಸಿಕೊಳ್ಳಲ್ಲ: ಸಚಿವ ಚೆಲುವರಾಯಸ್ವಾಮಿ

ಸಾರಾಂಶ

ಪೆನ್‌ಡ್ರೈವ್‌ ರಾಜಕೀಯ ಹೊಸತಲ್ಲ. ಹತ್ತಾರು ವರ್ಷಗಳಿಂದ ಇದನ್ನು ನೋಡುತ್ತಲೇ ಬಂದಿದ್ದೇವೆ. ಬೆದರಿಸೋದು, ಬ್ಲ್ಯಾಕ್‌ಮೇಲ್‌ ಮಾಡೋದು ಎಲ್ಲರಿಗೂ ಗೊತ್ತಿದೆ. ಪೆನ್‌ಡ್ರೈವ್‌ ವಿಚಾರಕ್ಕೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ತಿರುಗೇಟು ನೀಡಿದರು.

ಶೃಂಗೇರಿ (ಜು.09): ಪೆನ್‌ಡ್ರೈವ್‌ ರಾಜಕೀಯ ಹೊಸತಲ್ಲ. ಹತ್ತಾರು ವರ್ಷಗಳಿಂದ ಇದನ್ನು ನೋಡುತ್ತಲೇ ಬಂದಿದ್ದೇವೆ. ಬೆದರಿಸೋದು, ಬ್ಲ್ಯಾಕ್‌ಮೇಲ್‌ ಮಾಡೋದು ಎಲ್ಲರಿಗೂ ಗೊತ್ತಿದೆ. ಪೆನ್‌ಡ್ರೈವ್‌ ವಿಚಾರಕ್ಕೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ತಿರುಗೇಟು ನೀಡಿದರು. ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ವರ್ಗಾವಣೆಗೆ ಸಂಬಂಧಿಸಿ ಪೆನ್‌ಡ್ರೈವ್‌ ಪ್ರದರ್ಶಿಸಿ ಮಾಡಿರುವ ಆರೋಪಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಅವರು, ಯಾರು ಪೆನ್‌ಡ್ರೈವ್‌ ಇದೆ ಅಂತಾರೆ, ಪೆನ್‌ಡ್ರೈವ್‌ ಯಾಕೆ ಇಟ್ಟುಕೊಂಡಿದ್ದಾರೆ ಎಂಬುದೆಲ್ಲ ಅವರಿಗೇ ಗೊತ್ತು. ಹೀಗಾಗಿ ಆ ವಿಚಾರವಾಗಿ ಅವರೇ ಹೇಳಬೇಕಲ್ವ. 

ಕುಮಾರಸ್ವಾಮಿ ಅವರ ಈ ನಡೆ ಹೊಸದೇನಲ್ಲ. ಅವರ ಅವಧಿಯಲ್ಲಿ ಚಂದ್ರೇಗೌಡ ಎಂಬುವರನ್ನು 7 ಬಾರಿ ವರ್ಗಾವಣೆ ಮಾಡಿಸಿದ್ದರು. ಮೂಡಾ ಕಮಿಷನರ್‌ ಆಗಿದ್ದ ನಾಗರಾಜ್‌ ಎಂಬುವರನ್ನು ತಪ್ಪಿಲ್ಲದಿದ್ದರೂ ಅಮಾನತು ಮಾಡಿಸಿದ್ದರು. ಇಬ್ಬರೂ ಮಂಡ್ಯ ಜಿಲ್ಲೆ ಒಕ್ಕಲಿಗ ಸಮುದಾಯದವರಾಗಿದ್ದರು. ಒಕ್ಕಲಿಗ ಅನ್ನೋ ಕಾರಣಕ್ಕೇ ನನ್ನ ವಿರುದ್ಧ ಕುಮಾರಸ್ವಾಮಿ ನಿಂತಿದ್ದಾರೆ. ಒಕ್ಕಲಿಗರಿಗೆ ಹೆಚ್ಚು ಅವಕಾಶ ಸಿಗಬಾರದು ಅನ್ನುವ ಉದ್ದೇಶ ಅವರಿಗಿದೆ ಎಂದರು. ಅವರ ಈ ಪೆನ್‌ಡ್ರೈವ್‌ ಆರೋಪ ಹೊಸತಲ್ಲ. ಮಾತೆತ್ತಿದರೆ ಎಲ್ಲರ ರಾಜೀನಾಮೆ ಕೇಳುತ್ತಾರೆ. ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು 150 ಹಗರಣದ ಆರೋಪ ಮಾಡಿದಾಗ ಅವರೇ ಮುಖ್ಯಮಂತ್ರಿ ಆಗಿದ್ದರು. ರಾಜೀನಾಮೆ ನೀಡಿ ಹೊರಬಂದು ತನಿಖೆ ಮಾಡಿಸಿದರಾ ಎಂದು ಪ್ರಶ್ನಿಸಿದರು.

ಹೊರಗುತ್ತಿಗೆಯಲ್ಲೂ ಬಡವರಿಗೆ ಮೀಸಲಾತಿ: ಬೆಂಗಳೂರಿನಲ್ಲಿ ನಡೆದ ಸಂವಾದದಲ್ಲಿ ಸಿಎಂ ಸಿದ್ದು ಹೇಳಿಕೆ

ಹಸಿರೀಕರಣ ಅಗತ್ಯ: ಮರ ಗಿಡಗಳ ಕ್ಷೀಣಿಸುತ್ತಿರುವುದು ಪರಿಸರ ಹಾಗೂ ಹವಾಮಾನದ ಮೇಲೆ ನೇರ ಪರಿಣಾಮ ಬೀರುತ್ತದೆ. ಪರಿಸರ ಮಾಲಿನ್ಯಕ್ಕೆ ಕಾರಣವಾಗಿದೆ. ಆದ್ದರಿಂದ ಹಸಿರೀಕರಣ ಅಭಿಯಾನ ಮಾಡುವ ಅವಶ್ಯಕತೆ ಇದೆ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಅಭಿಪ್ರಾಯಪಟ್ಟರು. ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಮತ್ತು ಅರಣ್ಯ ಇಲಾಖೆ ಆಶ್ರಯದಲ್ಲಿ ಹೆಬ್ಬಾಳದ ಜಿಕೆವಿಕೆಯಲ್ಲಿ ಆಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಮರ ಗಿಡಗಳು ಕಡಿಮೆ ಆದರೆ ಅದು ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡಲಿದೆ. 

ನಮ್ಮ ಮೆಟ್ರೋ 'ಮಿಸ್ಸಿಂಗ್‌ ಲಿಂಕ್‌' ಪೂರ್ಣ ಶೀಘ್ರ : ಹೊಸ ಸಿಗ್ನಲಿಂಗ್‌ ವ್ಯವಸ್ಥೆ ಕೆಲಸ ಬಾಕಿ

ರಾಷ್ಟ್ರೀಯ ಅರಣ್ಯ ನೀತಿಯ ಗುರಿ ತಲುಪಲು ಅರಣ್ಯ ಪ್ರದೇಶದ ಖಾಲಿ ಜಾಗ, ಸರ್ಕಾರಿ ಸ್ಥಳ, ರಸ್ತೆ ಬದಿ, ಶೈಕ್ಷಣಿಕ ಸಂಸ್ಥೆ, ಇಲಾಖೆಗಳ ಅವರಣ, ರೈತರ ಜಮೀನಿನ ಬದು, ಕರೆ ಅಂಗಳ ಮತ್ತಿತರ ಪ್ರದೇಶಗಳಲ್ಲಿ ಹಸಿರೀಕರಣ ಕಾರ್ಯಕ್ರಮವನ್ನು ಅಭಿಯಾನವನ್ನಾಗಿ ಅನುಷ್ಠಾನಗೊಳಿಸುವುದು ಅವಶ್ಯಕವಾಗಿದೆ. ವಿತರಣೆ ಮಾಡಿದ ಸಸಿಗಳ ದಾಖಲಾತಿ ನಿರ್ವಹಿಸಲು ಅರಣ್ಯ ಇಲಾಖೆಗೆ ಸೂಚಿಸಲಾಗಿದೆ ಎಂದು ತಿಳಿಸಿದರು. ನಗರ ಜಿಲ್ಲಾಧಿಕಾರಿ ಕೆ.ಎ.ದಯಾನಂದ, ಬೆಂಗಳೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಸ್‌.ಎಸ್‌.ಲಿಂಗರಾಜು, ಕೃಷಿ ವಿವಿ ಕುಲಪತಿ ಡಾ. ಎಸ್‌.ವಿ.ಸುರೇಶ ಹಾಜರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ