ಯಾರದೋ ಮನೇಲಿ ಹಣ ಸಿಕ್ಕರೆ ಸಿಎಂ ರಾಜೀನಾಮೆ ಏಕೆ: ಸಚಿವ ಚೆಲುವರಾಯಸ್ವಾಮಿ

By Kannadaprabha NewsFirst Published Oct 15, 2023, 5:50 AM IST
Highlights

ಈಶ್ವರಪ್ಪ- ಕಟೀಲ್ ಅಣ್ಣತಮ್ಮಂದಿರಿದ್ದ ಹಾಗೆ, ದಿನ ಬೆಳಗಾದರೆ ಮಾಧ್ಯಮದ ಮುಂದೆ ಹೇಳಿಕೆ ನೀಡ್ತಾರೆ. ಇನ್ನು, ಅಶ್ವತ್ಥನಾರಾಯಣ, ಸಿ.ಟಿ.ರವಿ ಹೇಳಿಕೆಗಳಲ್ಲೂ ಯಾವುದೇ ತಿರುಳಿಲ್ಲ. ಹಾಗಾಗಿ ಇವರ ಹೇಳಿಕೆಗಳನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಎಂದ ಕೃಷಿ ಸಚಿವ ಚೆಲುವರಾಯಸ್ವಾಮಿ 

ಉಡುಪಿ(ಅ.15):  ಯಾರದ್ದೋ ಮನೆಯಲ್ಲಿ ಹಣ ಸಿಕ್ಕಿದರೆ ಅದಕ್ಕೆ ಮುಖ್ಯಮಂತ್ರಿ ಯಾಕೆ ರಾಜೀನಾಮೆ ನೀಡಬೇಕು? ಬಿಜೆಪಿ ಸರ್ಕಾರ ಇರುವಾಗಲೂ ಯಾರ್‍ಯಾರದೋ ಮನೆಯಲ್ಲಿ ಹಣ ಸಿಕ್ಕಿದಾಗ ಅವರು ರಾಜೀನಾಮೆ ನೀಡಿದ್ದರಾ? ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಪ್ರಶ್ನಿಸಿದರು.

ಉಡುಪಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಗುತ್ತಿದಾರರ ಸಂಘದ ಉಪಾಧ್ಯಕ್ಷನ ಮನೆಯಲ್ಲಿ 42 ಕೋಟಿ ರು. ಹಣ ಸಿಕ್ಕಿದ್ದಕ್ಕೆ ಸಿಎಂ ರಾಜೀನಾಮೆ ನೀಡಬೇಕು ಎಂಬ ಬಿಜೆಪಿಗರ ಆಗ್ರಹಕ್ಕೆ ಹೀಗೆ ಪ್ರತಿಕ್ರಿಯೆ ನೀಡಿ, ಹಾಗೊಂದು ವೇಳೆ ಈ ಪ್ರಕರಣದಲ್ಲಿ ಯಾವುದೇ ಮಂತ್ರಿಗೆ ಸಂಬಂಧವಿದ್ದರೆ ದಾಖಲೆ ಕೊಡಲಿ ಎಂದು ಸವಾಲು ಹಾಕಿದರು.

ಪುತ್ರನ ಕಾಟ ತಾಳದೆ ಬಿಜೆಪಿ ಜತೆ ದೇವೇಗೌಡ ಮೈತ್ರಿ: ಚಲುವರಾಯಸ್ವಾಮಿ ಲೇವಡಿ

ಈಶ್ವರಪ್ಪ- ಕಟೀಲ್ ಅಣ್ಣತಮ್ಮಂದಿರಿದ್ದ ಹಾಗೆ, ದಿನ ಬೆಳಗಾದರೆ ಮಾಧ್ಯಮದ ಮುಂದೆ ಹೇಳಿಕೆ ನೀಡ್ತಾರೆ. ಇನ್ನು, ಅಶ್ವತ್ಥನಾರಾಯಣ, ಸಿ.ಟಿ.ರವಿ ಹೇಳಿಕೆಗಳಲ್ಲೂ ಯಾವುದೇ ತಿರುಳಿಲ್ಲ. ಹಾಗಾಗಿ ಇವರ ಹೇಳಿಕೆಗಳನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಎಂದರು.

ಬಿಜೆಪಿಗೆ ಮುಂಬರುವ ಲೋಕಸಭಾ ಎದುರಿಸುವುದಕ್ಕೆ ಆಗದೆ ಹೆದರಿದ್ದಾರೆ. ಅದಕ್ಕೆ ವಿಷಯಾಂತರ ಮಾಡಲಿಕ್ಕಾಗಿಯೇ ಕಾಂಗ್ರೆಸ್ ಸರ್ಕಾರದ ಮೇಲೆ ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.    

click me!