ಮೋದಿ ಮುಖವಾಡ ಕಳಚಿದ ಎಲೆಕ್ಟೋರಲ್ ಬಾಂಡ್: ಸಚಿವ ಎಂ.ಬಿ.ಪಾಟೀಲ್‌

By Kannadaprabha News  |  First Published Apr 1, 2024, 4:23 AM IST

ಎಲೆಕ್ಟ್ರೋಲ್ ಬಾಂಡ್ ವಿಚಾರ ಬಹಿರಂಗವಾದ ಬಳಿಕ ಪ್ರಧಾನಿ ಮೋದಿ ಅವರ ಮುಖವಾಡ ಕಳಚಿದೆ ಎಂದು ಸಚಿವ ಎಂ.ಬಿ.ಪಾಟೀಲ್‌ ಟೀಕಿಸಿದರು. ಬಬಲೇಶ್ವರದಲ್ಲಿ ಭಾನುವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. 
 


ವಿಜಯಪುರ (ಏ.01): ಎಲೆಕ್ಟ್ರೋಲ್ ಬಾಂಡ್ ವಿಚಾರ ಬಹಿರಂಗವಾದ ಬಳಿಕ ಪ್ರಧಾನಿ ಮೋದಿ ಅವರ ಮುಖವಾಡ ಕಳಚಿದೆ ಎಂದು ಸಚಿವ ಎಂ.ಬಿ.ಪಾಟೀಲ ಟೀಕಿಸಿದರು. ಬಬಲೇಶ್ವರದಲ್ಲಿ ಭಾನುವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಸುಪ್ರೀಂ ಕೋರ್ಟ್ ಸೂಚನೆಯಂತೆ ಎಲೆಕ್ಟೋರಲ್ ಬಾಂಡ್ ಖರೀದಿದಾರರ ಹೆಸರುಗಳು ಬಹಿರಂಗವಾದ ಬಳಿಕ ನಾ ಖಾವೂಂಗಾ, ನಾ ಖಾವೂಂಗಾ ಎಂದು ಹೇಳುವ ಮೋದಿ ಅವರ ಮುಖವಾಡ ಕಳಚಿದೆ. ಐಟಿ, ಇಡಿ, ಸಿಬಿಐ ದಾಳಿಗೆ ಒಳಗಾದವರು ಎಲೆಕ್ಟೋರಲ್‌ ಬಾಂಡ್ ಖರೀದಿಸಿ ಹಣ ನೀಡಿದ್ದಾರೆ. ಸುಪ್ರೀಂ ಕೋರ್ಟ್ ಆದೇಶ ನೀಡದಿದ್ದರೆ ಈ ವಿಚಾರ ಹೊರಗೆ ಬರುತ್ತಿರಲಿಲ್ಲ. ಕೆಲವು ಕಂಪನಿಗಳ ಮೂಲ ಆಸ್ತಿಗಿಂತಲೂ ಬಾಂಡ್ ಖರೀದಿಸಲು ನೀಡಿರುವ ಹಣ ಹೆಚ್ಚಾಗಿದೆ ಎಂದು ಸಂಶಯ ವ್ಯಕ್ತಪಡಿಸಿದರು.

ರೈಲು ಯೋಜನೆಯಲ್ಲಿ ರಾಜಕೀಯ ಬೇಡ: ಉಪನಗರ ರೈಲು ಯೋಜನೆ ಅನುಷ್ಠಾನಕ್ಕೆ ಕೆ-ರೈಡ್‌ ( ಕರ್ನಾಟಕ ರೈಲು ಮೂಲಸೌಲಭ್ಯ ಅಭಿವೃದ್ಧಿ ಕಂಪನಿ ನಿಯಮಿತ) ಸಮರ್ಥವಾಗಿದ್ದು, ರೈಲ್ವೇ ಇಲಾಖೆ ಅಗತ್ಯ ಸಹಕಾರ ನೀಡಬೇಕೆ ವಿನಃ ರಾಜಕೀಯ ಕೆಸರೆರಚಾಟಕ್ಕೆ ಆಸ್ಪದ ಕೊಡಬಾರದು ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್‌ ಹೇಳಿದರು. ದೇವನಹಳ್ಳಿ ಬಳಿಯ ಗೊಲ್ಲಹಳ್ಳಿಯ ಕೆ-ರೈಡ್‌ ಕ್ಯಾಸ್ಟಿಂಗ್ ಕಾರ್ಯಾಗಾರಕ್ಕೆ ಭೇಟಿ ನೀಡಿದ ಅವರು ದೇಶದ ಅತಿ ಉದ್ದದ (31 ಮೀಟರ್) ಯು-ಗರ್ಡರ್ ನಿರ್ಮಾಣ ಪ್ರಕ್ರಿಯೆ ವೀಕ್ಷಿಸಿ ಬಳಿಕ ಸುದ್ದಿಗೋಷ್ಠಿ ನಡೆಸಿದರು.

Tap to resize

Latest Videos

ಈಚೆಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಹಾಗೂ ಸಂಸದ ತೇಜಸ್ವಿ ಸೂರ್ಯ ನೀಡಿದ್ದ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಉಪನಗರ ರೈಲು ಯೋಜನೆ ಅನುಷ್ಠಾನದಲ್ಲಿ ರಾಜ್ಯ ಸರ್ಕಾರ ಉತ್ತಮ ಸಹಕಾರ ಬಯಸುತ್ತದೆ. 4ನೇ ಕಾರಿಡಾರ್‌ಗೆ ರೈಲ್ವೇ ಇನ್ನೂ ಭೂಮಿಯ ಹಸ್ತಾಂತರ ಮಾಡಿಲ್ಲ. ಡಿಸೈನ್‌ ಅನುಮೋದನೆ ವಿಳಂಬವಾಗುತ್ತಿದೆ. ಈ ಮಧ್ಯೆ ತಾಂತ್ರಿಕ ಪರಿಣಿತರ ಕೊರತೆ ಕಾರಣಕ್ಕೆ ಯೋಜನೆಯನ್ನು ಕೇಂದ್ರ ತನ್ನ ಸ್ವಾಧೀನಕ್ಕೆ ಪಡೆಯಲು ಸಿದ್ಧ ಎಂಬ ಹೇಳಿಕೆಗಳಲ್ಲಿ ಅರ್ಥವಿಲ್ಲ. ರೈಲ್ವೇ ಇಲಾಖೆ ತನ್ನ ಬಳಿಯ ಪರಿಣಿತರನ್ನು ಕೆ-ರೈಡ್‌ಗೆ ನಿಯೋಜನೆ ಮಾಡಿ ಸಹಕಾರ ನೀಡಬಹುದು ಎಂದು ಹೇಳಿದರು.

ವಿಜಯಪುರದಲ್ಲಿ ದೇಶದ 2ನೇ ದೊಡ್ಡ ಪವನ ವಿದ್ಯುತ್‌ ಘಟಕ: ಸಚಿವ ಎಂ.ಬಿ.ಪಾಟೀಲ್‌

ಹಿಂದೆ ರೈಲ್ವೆ ಇಲಾಖೆಯಿಂದ ನಿಯೋಜಿತರಾಗಿದ್ದ ಎಂಡಿ ನೇತೃತ್ವದಲ್ಲಿ ಕೆಲಸ ವಿಳಂಬವಾಗುತ್ತಿತ್ತು. ಈಗ ಕೆ-ರೈಡ್ ಕೆಲಸ ಚುರುಕಾಗಿದೆ. ನಮ್ಮಲ್ಲಿ ತಾಂತ್ರಿಕ ತಜ್ಞರು, ಅನುಭವಿಗಳು ಇದ್ದಾರೆ. ಒಂದು ವೇಳೆ ಕೇಂದ್ರ ಸ್ವಾಧೀನಕ್ಕೆ ಪಡೆದರೂ ಪುನಃ ಇಲ್ಲಿಯದೇ ಭೂಸ್ವಾದೀನ ಸೇರಿ ಇತರೆ ಪ್ರಕ್ರಿಯೆ ವಿಳಂಬವಾಗಲಿದೆ ಎಂದು ಹೇಳಿದರು. ಬೈಯಪ್ಪನಹಳ್ಳಿ-ಚಿಕ್ಕಬಾಣಾವರದ ಮಲ್ಲಿಗೆ (2ನೇ ಕಾರಿಡಾರ್‌) ಲೈನ್‌ ಎರಡು ಹಂತದಲ್ಲಿ ಅಂದರೆ, ಚಿಕ್ಕಬಾಣಾವರ-ಯಶವಂತಪುರದವರೆಗೆ 2025ರ ಡಿಸೆಂಬರ್‌ ಹಾಗೂ ಯಶವಂತಪುರ-ಬೆನ್ನಿಗಾನಹಳ್ಳಿ (17.5ಕಿಮೀ) 2026ರ ಜೂನ್‌ಗೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ಈವರೆಗೆ ಶೇ. 20ರಷ್ಟು ಕಾಮಗಾರಿ ಮುಗಿದಿವೆ. ಇದಕ್ಕೆ ಅಗತ್ಯವಿರುವ 120.44 ಎಕರೆ ಭೂಮಿಯ ಪೈಕಿ 119.18 ಎಕರೆ ಜಮೀನು ಈಗಾಗಲೇ ಸ್ವಾಧೀನವಾಗಿದೆ ಎಂದು ಸಚಿವರು ತಿಳಿಸಿದರು.

click me!