ಅನಂತಕುಮಾರ ಹೆಗಡೆಗೆ ಟಿಕೆಟ್ ಕೊಡಲಿ...ನಾವೂ ಉಪಚಾರಕ್ಕೆ ಬರ್ತೀವಿ: ಸಚಿವ ಮಧು ಬಂಗಾರಪ್ಪ

By Kannadaprabha News  |  First Published Jan 21, 2024, 11:32 AM IST

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯವರು ಅನಂತಕುಮಾರ ಹೆಗಡೆ ಅವರಿಗೇ ಟಿಕೆಟ್ ನೀಡಬೇಕು. ಅವರ ಉಪಚಾರಕ್ಕೆ ನಾವೂ ಇಲ್ಲಿ ಬರ್ತೀವಿ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಟಾಂಗ್ ನೀಡಿದರು. 


ಶಿರಸಿ (ಜ.21): ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯವರು ಅನಂತಕುಮಾರ ಹೆಗಡೆ ಅವರಿಗೇ ಟಿಕೆಟ್ ನೀಡಬೇಕು. ಅವರ ಉಪಚಾರಕ್ಕೆ ನಾವೂ ಇಲ್ಲಿ ಬರ್ತೀವಿ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಟಾಂಗ್ ನೀಡಿದರು. ಶನಿವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಆರಿಸಿ ಬಂದ ಮೇಲೆ ನಾಲ್ಕು ವರ್ಷ ಸುಮ್ಮನೆ ಕುಳಿ ತುಕೊಳ್ಳುವುದು, ಬಳಿಕ ಜನರ ಮುಂದೆ ಬಂದು ಬಾಯಿಗೆ ಬಂದಂತೆ ಮಾತನಾಡುವುದು ಅನಂತಕುಮಾರ ಹೆಗಡೆ ಅವರ ಚಾಳಿ. ಮತ ನೀಡಿದವರಿಗೆ ದ್ರೋಹ ಮಾಡುವ ದೇಶದ ಮೊದಲ ವ್ಯಕ್ತಿ ಅನಂತಕುಮಾರ ಹೆಗಡೆ, ಅಂಬೇಡ್ಕರ್ ವಿರಚಿತ ಸಂವಿಧಾನವನ್ನೇ ಬದಲು ಮಾಡುತ್ತೇನೆ ಎಂದು ಹೊರಟ ಅವರನ್ನು ಈ ಬಾರಿ ಜನರೇ ಬದಲಾವಣೆ ಮಾಡುತ್ತಾರೆ ಎಂದು ಭವಿಷ್ಯ ನುಡಿದರು. 

ಪ್ರಜಾಪ್ರಭುತ್ವದಲ್ಲಿ ಸೋಲು-ಗೆಲುವು ಸಾಮಾನ್ಯ. ಚುನಾವಣೆಯಲ್ಲಿ ನಾವೂ ಸಹ ಸೋತಿದ್ದೆವು. ಆದರೆ, ಈ ರೀತಿ ಸಂಪ್ರದಾಯ, ಮಾನ, ಮರ್ಯಾದೆ ಬಿಟ್ಟು ಹೋಗುವುದು ಸರಿಯಲ್ಲ. ನಮ್ಮ ದೇಶದಲ್ಲಿ ಎಲ್ಲ ಜಾತಿ, ಧರ್ಮದವರೂ ಶಾಂತಿಯುತವಾಗಿ ಬದುಕುತ್ತಿದ್ದಾರೆ. ಈ ದೇಶದ ಸಂಸ್ಕೃತಿಯಲ್ಲಿ ಬದುಕಲು ನಾವೆಲ್ಲ ಅದೃಷ್ಟ ಮಾಡಿದ್ದೇವೆ. ಅನಂತಕುಮಾರ ಹೆಗಡೆ ಸಂಸ್ಕೃತಿ ಇಲ್ಲದೇ ಮಾತನಾಡುತ್ತಿದ್ದು, ಅವರು ಮನುಷ್ಯನೇ ಅಲ್ಲ, ಸಂಸ್ಕೃತಿ ಬೇಡ ಎನ್ನುವವರು ಬಾಳಲು ಸಾಧ್ಯವಿಲ್ಲ. ಹೆಗಡೆ ಒಬ್ಬ ತಲೆ ಕೆಟ್ಟ ಮಾನ, ಮರ್ಯಾದೆ ಇಲ್ಲದ ವ್ಯಕ್ತಿ ಎಂದು ವಾಗ್ದಾಳಿ ನಡೆಸಿದರು. 

Latest Videos

undefined

ಬಾಲರಾಮ ಶಿಲೆ ಸಿಕ್ಕ ಜಾಗದಲ್ಲೇ ರಾಮಮಂದಿರ ನಿರ್ಮಾಣ: ಶಾಸಕ ಜಿ.ಟಿ.ದೇವೇಗೌಡ

ಕೋಮು ಸೌಹಾರ್ದತೆ ಕದಡುವವರಿಗೆ ಜನರ ಮನ್ನಣೆ ಸಿಗದು: ಪ್ರಜಾಪ್ರಭುತ್ವ ವ್ಯವಸ್ಥೆ ವಿರೋಧಿಸುವ, ಸಂವಿಧಾನ ಬದಲಿಸುತ್ತೇನೆ ಎನ್ನುವ ಮಾತುಗಳನ್ನಾಡುವ ಅನಂತಕುಮಾರ ಹೆಗಡೆ ಅವರಿಗೆ ಬಿಜೆಪಿ ಟಿಕೆಟ್ ನೀಡಬೇಕು. ಅವರಿಗೆ ಸರಿಯಾದ ಶಾಸ್ತ್ರಿ ನಾವು ಮಾಡುತ್ತೇವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮ, ಸಂಸ್ಕೃತಿ ಪ್ರೀತಿಸುವ ಜನರು ಕರಾವಳಿ ಭಾಗದಲ್ಲಿ ಹೆಚ್ಚಿದ್ದಾರೆ. ಅವರ ಭಾವನೆಗಳೊಂದಿಗೆ ಚೆಲ್ಲಾಟವಾಡಿ ರಾಜಕೀಯ ಲಾಭ ಪಡೆಯುವುದು ಬಿಜೆಪಿಯ ಕೆಟ್ಟ ಗುಣ. 

ಹಿಂದಿನಂತೆ ಕೋಮು ಸೌಹಾರ್ದತೆ ಕದಡುವವರಿಗೆ ಜನರ ಮನ್ನಣೆ ಸಿಗದು ಎಂದರು. ನಾಲ್ಕು ವರ್ಷ ಜನರಿಂದ ದೂರವಿದ್ದು ಚುನಾವಣೆ ಸಮೀಪಿಸಿದಾಗ ಸಮಾಜದ ಸಾಮರಸ್ಯ ಕದಡುವ ಮಾತುಗಳನ್ನಾಡಲು ಬರುವವರನ್ನು ದೂರ ಇಡಬೇಕು ಎಂದು ಜನರಿಗೆ ಕರೆ ನೀಡಿದ ಮಧು, ವಿಧಾನಸಭೆ ಚುನಾವಣೆಯಲ್ಲಿ ಭರವಸೆ ನೀಡಿ ಗೆಲುವು ಸಾಧಿಸಿದ್ದೇವು. ಭರವಸೆ ಈಡೇರಿಸಿದ ವಿಶ್ವಾಸದಲ್ಲಿ ಲೋಕಸಭೆ ಚುನಾವಣೆಗೆ ಮತ ಕೇಳಲಿದ್ದೇವೆ. ಜನರು ಅಭೂತಪೂರ್ವ ಗೆಲುವು ನೀಡುವ ನಂಬಿಕೆ ಇದೆ. 

ಹೊಸ ದೇವಸ್ಥಾನಕ್ಕಿಂತ ಈಗಿರುವ ಗುಡಿಗಳ ಪುನರುಜ್ಜೀವನ ಅಗತ್ಯ: ಕಿಮ್ಮನೆ ರತ್ನಾಕರ್

ಪ್ರತಿ ವರ್ಷ ರಾಜ್ಯದಲ್ಲಿ 20 ಸಾವಿರ ಶಿಕ್ಷಕರಿಗೆ ತಾಂತ್ರಿಕ ತರಬೇತಿ ನೀಡಲು ಅಜೀಂ ಪ್ರೇಮ್‌ಜಿ ಫೌಂಡೇಶನ್ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಮುಂಬರುವ ಶೈಕ್ಷಣಿಕ ವರ್ಷದಿಂದ ತರಬೇತಿ ಆರಂಭಗೊಳ್ಳಲಿದೆ ಎಂದರು. ಬಿಜೆಪಿ ಗ್ಯಾರಂಟಿ ಯೋಜನೆಗಳನ್ನು ಟೀಕಿಸಿತ್ತು. ಕೇಂದ್ರ ಸರ್ಕಾರದ ತೆರಿಗೆ ನಿಯಮ, ತಪ್ಪು ಆರ್ಥಿಕ ನಿರ್ಧಾರದಿಂದ ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನತೆಗೆ ಗ್ಯಾರಂಟಿಗಳು ನೀಡುವ ದುಡ್ಡು ಮಾರುಕಟ್ಟೆಯಲ್ಲಿ ಚಲಾವಣೆಯಾಗುತ್ತದೆ. ಇದರಿಂದ ಆರ್ಥಿಕತೆ ಚುರುಕುಗೊಳ್ಳಲಿದೆ ಎಂದು ಹೇಳಿದರು. ಬಡವರಿಗೆ ಶಾಸಕರಾದ ಸತೀಶ ಸೈಲ್, ಭೀಮಣ್ಣ ನಾಯ್ಕ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಾಯಿ ಗಾಂವಕರ, ಮಹಿಳಾ ಅಧ್ಯಕ್ಷೆ ಸುಜಾತಾ ಗಾಂವಕರ, ರಮಾನಂದ ನಾಯಕ ಉಪಸ್ಥಿತರಿದ್ದರು.

click me!