ಭಾರತ, ಇಂಡಿಯಾ ಎಂದು ಭಾವನಾತ್ಮಕ ವಿಷಯ ಹಿಡಿದುಕೊಂಡು ಬಿಜೆಪಿಯವರು ಆಟ ಆಡಲು ಹೋದರೆ ಜನರೇ ತಕ್ಕ ಶಿಕ್ಷೆ ನೀಡುತ್ತಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಶಿವಮೊಗ್ಗ (ಸೆ.07): ಭಾರತ, ಇಂಡಿಯಾ ಎಂದು ಭಾವನಾತ್ಮಕ ವಿಷಯ ಹಿಡಿದುಕೊಂಡು ಬಿಜೆಪಿಯವರು ಆಟ ಆಡಲು ಹೋದರೆ ಜನರೇ ತಕ್ಕ ಶಿಕ್ಷೆ ನೀಡುತ್ತಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಷ್ಟು ದಿನ ರಾಮಕೃಷ್ಣನನ್ನು ಹಿಡಿದುಕೊಂಡಿದ್ದರು. ಈಗ ಅದನ್ನು ಬಿಟ್ಟು ಇಂಡಿಯಾ, ಭಾರತ ವಿಷಯ ಹಿಡಿದುಕೊಂಡಿದ್ದಾರೆ. ಬಿಜೆಪಿಯವರಿಗೆ ಮಾಡಲು ಕೆಲಸವಿಲ್ಲ. ನಿಜವಾದ ಭಾರತೀಯರನ್ನೇ ಮರೆತಿದ್ದಾರೆ. ಹಿಂದೆ ನಡೆದ ಚುನಾವಣೆ ಸಂದರ್ಭದಲ್ಲಿ ಇದನ್ನೇ ಮಾಡಿದ್ದರು. ಈ ಸಲನೂ ಭಾವನಾತ್ಮಕ ವಿಚಾರ ಇಟ್ಟುಕೊಂಡು ಚುನಾವಣೆ ಗೆಲ್ಲುತ್ತೇವೆ ಎಂದರೆ ಅದಕ್ಕೆ ಜನನೇ ತಕ್ಕ ಉತ್ತರ ಕೊಡುತ್ತಾರೆ ಎಂದು ಕುಟುಕಿದರು.
ಇಂಡಿಯಾ ಎಂಬ ಹೆಸರಿಗೆ ಯಾವುದೇ ಹಿನ್ನೆಲೆ ಇಲ್ಲ ಎಂದು ಹೇಳಿರುವ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮೊದಲು ಅವರ ಹಿನ್ನೆಲೆ ಏನು ಎಂದು ತಿಳಿದುಕೊಳ್ಳಲಿ. ರಾಷ್ಟ್ರವನ್ನು ಪ್ರತಿನಿಧಿಸುವ ಕ್ರೀಡಾಪಟುಗಳು ಇಂಡಿಯಾ ಹೆಸರಿನಲ್ಲಿ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ. ಎವರೆಸ್ಟ್ ಶಿಖರದ ಮೇಲು ಇಂಡಿಯಾ ಎಂಬ ಹೆಸರು ಅಚ್ಚೊತ್ತಿದೆ. ಬಿಜೆಪಿಯವರು ಸುಮ್ಮನೆ ಭಾವನಾತ್ಮಕ ಆಟ ಆಡುವುದನ್ನು ನಿಲ್ಲಿಸಿ ಒಳ್ಳೆಯ ಕೆಲಸ ಏನಾದರೂ ಮಾಡಿದ್ದರೆ ಅದನ್ನು ಹೇಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸನಾತನ ಧರ್ಮ ಕುರಿತು ತಮಿಳುನಾಡು ಸಿಎಂ ಸ್ಟಾಲಿನ್ ಪುತ್ರ ಉದಯನಿಧಿ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಸಚಿವ ಮಧುಬಂಗಾರಪ್ಪ ಅವರು ಯಾವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೋ ನನಗೆ ಅದರ ಬಗ್ಗೆ ಮಾಹಿತಿ ಇಲ್ಲ. ಆ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ, ಟೀಕೆ ಮಾಡಲು ಹೋಗುವುದಿಲ್ಲ ಎಂದರು.
ದೇಶದಲ್ಲಿ ಯಾವುದೇ ಸರ್ಕಾರದಿಂದ ಅಸಾಧ್ಯವಾದ ಯೋಜನೆಗಳನ್ನು ಸಿದ್ದರಾಮಯ್ಯ ಮಾಡಿದ್ದಾರೆ: ಕಾಗೋಡು ತಿಮ್ಮಪ್ಪ
ಪರೀಕ್ಷೆಯಲ್ಲಿ ಫೇಲ್ ಆದ ವಿದ್ಯಾರ್ಥಿಗಳು ಮಾನಸಿಕ ಕಿರುಕುಳ, ಖಿನ್ನತೆ ಕಾಡುತ್ತದೆ. ಅಂತಹ ಮಕ್ಕಳಿಗೆ ಅನುಕೂಲ ಆಗುವ ಧೃಷ್ಟಿಯಿಂಥ ಹೊಸ ಪರೀಕ್ಷೆ ಪದ್ಧತಿ ಜಾರಿ ಮಾಡಲಾಗಿದೆ ಎಂದು ಶಿಕ್ಷಣ ಸಚಿವ ಮಧುಬಂಗಾರಪ್ಪ ಸಮರ್ಥಿಸಿಕೊಂಡರು. ಎಲ್ಲ ವಿಷಯದಲ್ಲಿ ಉತ್ತಮ ಅಂಕ ಪಡೆದು ಕಾರಣಾಂತರಗಳಿಂದ ಒಂದು ವಿಷಯದಲ್ಲಿ ಕಡಿಮೆ ಅಂಕ ಪಡೆದು ಪೇಲ್ ಆದರೆ ಆ ವಿದ್ಯಾರ್ಥಿ ಮತ್ತೊಂದು ಅವಕಾಶ ನೀಡುವುದಲ್ಲಿ ತಪ್ಪೇನಿಲ್ಲ. ಮತ್ತೊಂದು ಅವಕಾಶದಲ್ಲಿ ಆ ವಿದ್ಯಾರ್ಥಿ ಪಾಸ್ ಆದರೆ ಭವಿಷ್ಯ ರೂಪಿಸಿಕೊಳ್ಳಲು ಅನುಕೂಲ ಆಗಲಿದೆ ಎಂದರು.
ರಾಜ್ಯ ಸರ್ಕಾರಕ್ಕೆ ದೇವಾಲಯ ಅಭಿವೃದ್ಧಿಗಿಂತ ಮಹಿಷ ದಸರಾವೇ ಮುಖ್ಯ: ಸಂಸದ ಪ್ರತಾಪ ಸಿಂಹ ಟೀಕೆ