ಬೆಂಗಳೂರು (ಸೆ.23): ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಎರಡು ಹೋಳಾಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಹಾಗು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಉಸ್ತುವಾರಿ ಕೆ ಎಸ್ ಈಶ್ವರಪ್ಪ ಭವಿಷ್ಯ ನುಡಿದರು.
ಬುಧವಾರ ನಗರದ ಚೌಡಯ್ಯ ಸ್ಮಾರಕ ಭವನದಲ್ಲಿ ಪಕ್ಷದ ಹಿಂದುಳಿದ ವರ್ಗಗಳ ಮೋರ್ಚಾದಿಂದ ಆಯೋಜಿಸಿದ್ದ ಸಮುದಾಯದ ಜನ ಪ್ರತಿನಿಧಿಗಳಿಗೆ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಹಿಂದುಳಿದವರಿಗೆ ಮೋಸ ಮಾಡಿದ ಪಕ್ಷ ಕಾಂಗ್ರೆಸ್. ಅದನ್ನು ಒಬಿಸಿ ಸಮುದಾಯದ ಜನರು ಅರ್ಥ ಮಾಡಿಕೊಂಡಿದ್ದಾರೆ ಎಂದರು.
undefined
ಕಾಂಗ್ರೆಸ್ ಹೇಳಿದ್ದು ಸತ್ಯ: ಸ್ವಪಕ್ಷದ ವಿರುದ್ಧವೇ ಈಶ್ವರಪ್ಪ ಅಸಮಾಧಾನ
ನರೇಂದ್ರ ಮೋದಿ ಅವರು ಕಾಂಗ್ರೆಸ್ ಪಕ್ಷದಿಂದ ಪ್ರಧಾನಿ ಆಗಿದ್ದರೆ ಕಾಂಗ್ರೆಸ್‌ನವರು ಮೋದಿಯವರನ್ನು ರಾಷ್ಟ್ರಭಕ್ತ ಮೋದಿ ಎಂದು ಕರೆಯುತ್ತಿದ್ದರು. ಹಿಂದುಳಿದ ವರ್ಗಗಳ ಪ್ರಧಾನಿ ಎಂದೇ ಕರೆಯುತ್ತಿದ್ದರು. ಮೋದಿ ಅವರು ಹಿಂದುಳಿದ ವರ್ಗದವರು ನಿಜ. ಅದರೆ ನಾವು ಮೋದಿ ಅವರನ್ನು ರಾಷ್ಟ್ರಭಕ್ತ ಎಂದು ಕರೆಯುತ್ತೇವೆ ಎಂದರು.
ಕಾಂಗ್ರೆಸ್ ಪಕ್ಷ ಮಾತೆತ್ತಿದರೆ ಹಿಂದುಳಿದ ವರ್ಗಗಳ ಉದ್ಧಾರ ಮಾಡುತ್ತೇವೆ ಎನ್ನುತ್ತಾರೆ. ಈಗ ವಿಧಾನಮಂಡಲದ ಅಧಿವೇಶನ ನಡೆಯುತ್ತಿದೆ. ಒಂದೇ ದಿನ ಅದರೂ ಹಿಂದುಳಿದ ವರ್ಗಗಳ ಬಗ್ಗೆ ಮಾತಾಡಲಿಲ್ಲ. ಕೇಂದ್ರದಲ್ಲಿ 27 ಜನ ಹಿಂದುಳಿದ ವರ್ಗದವರನ್ನು ಸಚಿವರನ್ನಾಗಿ ಮಾಡಲಾಗಿದೆ. ಇದಕ್ಕಾಗಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರು ಅಭಿನಂದನೆಗಳನ್ನಾದರು ಸಲ್ಲಿಸಬೇಕು ಎಂದು ಟಾಂಗ್ ನೀಡಿದರು.