ಸಿದ್ದು ವಿರುದ್ಧ ಗುಡುಗಿದ ಈಶ್ವರಪ್ಪ, ಡಿಕೆಶಿಗೆ ಬಗ್ಗೆ ಪ್ರತಿಕ್ರಿಯಿಸಲು ಹಿಂದೇಟು..!

Published : Jan 03, 2020, 05:39 PM IST
ಸಿದ್ದು ವಿರುದ್ಧ ಗುಡುಗಿದ ಈಶ್ವರಪ್ಪ, ಡಿಕೆಶಿಗೆ ಬಗ್ಗೆ ಪ್ರತಿಕ್ರಿಯಿಸಲು ಹಿಂದೇಟು..!

ಸಾರಾಂಶ

ಮೋದಿ ವಿರುದ್ಧ ಟೀಕಿಸಿದ್ದ ಕಾಂಗ್ರೆಸ್ ಮುಖಂಡರ ವಿರುದ್ಧ ಇಂದು [ಶುಕ್ರವಾರ] ಶಿವಮೊಗ್ಗದಲ್ಲಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಕ್ರೀಡಾ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ಕಿಡಿ ಕಾರಿದ್ದಾರೆ.

ಶಿವಮೊಗ್ಗ, [ಜ.03]: ಮೋದಿ ತುಮಕೂರು ಭೇಟಿಯನ್ನು ಟೀಕಿಸಿದ ಸಿದ್ದರಾಮಯ್ಯ ವಿರುದ್ಧ ಸಚಿವ ಈಶ್ವರಪ್ಪ ಕಿಡಿಕಾರಿದ್ದಾರೆ. ಆದ್ರೆ. ಯೇಸು ಪ್ರತಿಮೆ ನಿರ್ಮಾಣದ ವಿಚಾರವಾಗಿ ಡಿಕೆಶಿ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.  

ಇಂದು [ಶುಕ್ರವಾರ] ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಸಿದ್ಧರಾಮಯ್ಯ ಒಬ್ಬ ಕಾಮನ್ಸೆನ್ಸ್ ಇಲ್ಲದ ವ್ಯಕ್ತಿ. ಒಬ್ಬ ಮುಖ್ಯಮಂತ್ರಿಯಾದಂತಹ ವ್ಯಕ್ತಿಗೆ, ಒಬ್ಬ ಪ್ರಧಾನಿಗೆ ಹೇಗೆ ಮಾತನಾಡಬೇಕೆಂದು ಅವರಿಗೆ ತಿಳಿದಿಲ್ಲ ಎಂದು ಈಶ್ವರಪ್ಪ ಕಿಡಿಕಾರಿದರು.

ಮಠದಲ್ಲಿ ರಾಜಕೀಯ ಭಾಷಣ: ಮೋದಿ ಅವರನ್ನು ಪವಿತ್ರ ನೆಲ ಕ್ಷಮಿಸದು ಎಂದ ಸಿದ್ದರಾಮಯ್ಯ!

ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದವರು. ಅವರಿಗೆ, ಯಾವ ಪದ ಬಳಸಬೇಕೆಂಬ ಜ್ಱಆನವಿಲ್ಲವೆಂಬಂತೆ ಬಾಯಿಗೆ ಬಂದಂತೆ, ಮಾತನಾಡುತ್ತಿದ್ದಾರೆ.  ಪ್ರಧಾನಿಗೆ ಏನು ಕೇಳಬೇಕೋ ಅದನ್ನ ಕೇಳಲಿ.  ಅದನ್ನ ಬಿಟ್ಟು ಬಾಯಿಗೆ ಬಂದಂತೆ ಭಾಷೆ ಬಳಸಿ ಮಾತನಾಡುವುದು ಸರಿಯಲ್ಲ.  ಅವರು ಬಳಸುವ ಭಾಷೆಯನ್ನ  ಇಡೀ ರಾಜ್ಯ, ಇಡೀ ದೇಶದ ಜನ ನೋಡುತ್ತಾರೆ.  ಇಂಥಹವರು ಮುಖ್ಯಮಂತ್ರಿಯಾಗಿದ್ರಾ ಎಂದು ನನಗೆ ನೋವು ಕಾಡುತ್ತಿದೆ ಎಂದು ಟೀಕಿಸಿದರು.  

ರಾಜ್ಯದಲ್ಲಿ ಜಲಪ್ರಳಯ ಉಂಟಾಗಿದೆ.  ಇದಕ್ಕಾಗಿ ಸಾಕಷ್ಟು ಪರಿಹಾರದ ಹಣ ಬಿಡುಗಡೆಯಾಗಿದೆ.  ಇನ್ನು ಹಣ ಬರಬೇಕೆನ್ನುವ ಕಾರಣಕ್ಕೆ, ಮುಖ್ಯಮಂತ್ರಿಗಳು, ಪ್ರಧಾನಮಂತ್ರಿಗಳ ಬಳಿ ಮನವಿ ಮಾಡಿಕೊಂಡಿದ್ದಾರೆ.  ಆದಷ್ಟು ಬೇಗ ನಮ್ಮ ಹಣ ನಮಗೆ ಬಂದೇ ಬರುವ ವಿಶ್ವಾಸ ಇದೆ ಎಂದರು. 

ನಾವು ಕೂಡ ಪ್ರಧಾನಿ ಬಳಿ ಮನವಿ ಮಾಡಿಕೊಳ್ಳುತ್ತೆವೆ.  ಆದರೆ, ಕೇವಲ ಹಣ ಬಂದಿಲ್ಲ ಎನ್ನುವ ಒಂದೇ ಒಂದು ಕಾರಣಕ್ಕೆ ಈ ರೀತಿ ಮಾತನಾಡುವುದು ಸರಿಯಲ್ಲ.  ಅವರ ಕೇಂದ್ರ ಸರ್ಕಾರ ಇದ್ದಾಗ ಬರಗಾಲಕ್ಕೆ ಪರಿಹಾರ ಕೊಟ್ಟಿದ್ದನ್ನು ನಮಗೆ ಗೊತ್ತಿದೆ ಎಂದು ಈಶ್ವರಪ್ಪ ತಿರುಗೇಟು ನೀಡಿದರು.

ಇಂತಹ ಪದಗಳು ಬಳಸಿದಕ್ಕೆ ನಾನು ಉಗ್ರವಾಗಿ ಖಂಡಿಸುತ್ತೆನೆ ಎಂದಿದ್ದಾರೆ.  ಅಲ್ಲದೇ, ಪ್ರಧಾನಿ ಮೋದಿಯವರು, ವಿಭೂತಿ ಹಚ್ಚಿಕೊಂಡಿದ್ದಕ್ಕೆ, ರುದ್ರಾಕ್ಷಿ ಮಾಲೆ ಹಾಕಿಕೊಂಡಿದ್ದಕ್ಕೂ ಕೆಲ ಕಾಂಗ್ರೆಸ್ ಮುಖಂಡರು ಟೀಕೆ ಮಾಡಿದ್ದಾರೆ.  ನಿಮಗೆ ದೇವರ ಬಗ್ಗೆ, ಧರ್ಮದ ಬಗ್ಗೆ ನಂಬಿಕೆ ಇಲ್ಲ. ಹಾಗಾಗಿ ನೀವು ಹಾಳಾಗಿ ಹೋಗಿದ್ದಿರಾ ಎಂದು ಕುಟುಕಿದರು.

ಡಿಕೆಶಿ ಬಗ್ಗೆ ನೋ ಕಮೇಂಟ್
 ಇನ್ನು ಡಿ.ಕೆ. ಶಿವಕುಮಾರ್ ಯೇಸು ಕ್ರಿಸ್ತನ ಪ್ರತಿಮೆ ಸ್ಥಾಪನೆ ಬಗ್ಗೆ ಪ್ರತಿಕ್ರಿಯಿಸಲು, ಈಶ್ವರಪ್ಪ ನಿರಾಕರಿಸಿದರು.   ಈಗಲೇ ನಾನು ಆ ವಿಚಾರದ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಕಡ್ಡಿಮುರಿದಂತೆ ಹೇಳಿದರು. 

ಯೇಸು ಕ್ರಿಸ್ತನ ಪೋಟೋಕ್ಕೆ ಡಿಕೆಶಿ ಮುಖ.. ಇದೆಂಥಾ ಕುಚೇಷ್ಟೆ!

ಇನ್ನು ಆ ವಿಚಾರದ ಬಗ್ಗೆ ಏನೇನು ಹೊರಬರುತ್ತೋ ಕಾದು ನೋಡೋಣ.  ಭೂಮಿ ಯಾರದ್ದು, ಯಾರು ಅನುಮತಿ ನೀಡಿದ್ದಾರೆ. ಈ ಬಗ್ಗೆ ಯಾರ್ಯಾರು ಏನೇನು ಹೇಳುತ್ತಾರೋ ನೋಡಿ ಆ ನಂತರ ಈ ಬಗ್ಗೆ ಪ್ರತಿಕ್ರಿಯಿಸುತ್ತೆನೆ ಎಂದು ಜಾರಿಕೊಂಡರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನೆಹರೂ ಕಾಲದಲ್ಲೇ ಮೊದಲ ಮತಗಳ್ಳತನ ನಡೆದಿದ್ದು; ಎರಡು ಮತ ಪಡೆದು ಪ್ರಧಾನಿಯಾದರು' ಸಂಸತ್ತಿನಲ್ಲಿ ಕಾಂಗ್ರೆಸ್ ವಿರುದ್ಧ ಶಾ ವಾಗ್ದಾಳಿ
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!